ಬಹುಕೋಟಿ ವೆಚ್ಚದ ಮನೆ ನಿರ್ಮಿಸಿದ ಮೇಘನಾ ರಾಜ್; ಇಷ್ಟು ಹಣ ಎಲ್ಲಿಂದ

 | 
Hd
ಬದುಕು ಎಲ್ಲವನ್ನು ಕಲಿಸುತ್ತದೆ. ಬದುಕುವುದನ್ನು ನೆನಪುಗಳ ಮರೆಯುವುದನ್ನು. ಒಂದಿಷ್ಟು ನೆನಪುಗಳ ಕಾಪಿಡುವುದನ್ನು ಎಂದು ನಟಿ ಮೇಘನಾ ರಾಜ್ ಅಗಾಗ ಹೇಳುತ್ತಿರುತ್ತಾರೆ. ಹೌದು ಪ್ರೀತಿಸಿ ಮದುವೆಯಾದ ಚಿರು ಇನ್ನಿಲ್ಲವಾದಮೇಲೆ ಮತ್ತೆ ಹೊಸ ಬದುಕ ಕಟ್ಟಿಕೊಂಡವರು ಮೇಘನಾ ರಾಜ್. ಅಷ್ಟಕ್ಕೂ ಮೇಘನಾ ರಾಜ್ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ.
 ತಮ್ಮ ಸಿನಿಮಾ ವಿಚಾರ ಸೇರಿದಂತೆ ಮಗನ ಜೊತೆಗಿನ ವಿಡಿಯೋ ಹಾಗೂ ಫೋಟೋಗಳನ್ನ ಹಂಚಿಕೊಳ್ತಾನೇ ಇರ್ತಾರೆ. ಈ ಮೂಲಕ ತಮ್ಮ ಅಭಿಮಾನಿಗಳ ಜೊತೆಗೂ ಕನೆಕ್ಟ್ ಆಗಿಯೇ ಇರ್ತಾರೆ. ಇತ್ತೀಚಿಗಷ್ಟೇ ಅವರು ನಟಿಸಿದ್ದ ತತ್ಸಮ ತದ್ಭವ ಚಿತ್ರ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಉತ್ತಮವಾಗಿ ನಟಿಸಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು.
ಇದೆ ಖುಷಿಯಲ್ಲಿ ತಮ್ಮ ಹೊಸ ಮನೆಯ ಗೃಹಪ್ರವೇಶದ ಫೊಟೋ ಶೇರ್ ಮಾಡಿಕೊಂಡಿದ್ದಾರೆ.ಮೇಘನಾ ರಾಜ್ ಇನ್ನೂ ಒಂದು ಚಿತ್ರವನ್ನು ಮಾಡಿದ್ದಾರೆ. ಹೌದು, ಬುದ್ಧಿವಂತ-2 ಚಿತ್ರದಲ್ಲೂ ಮೇಘನಾ ರಾಜ್ ಅಭಿನಯಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಇನ್ನುಳಿದಂತೆ ಮೇಘನಾ ರಾಜ್ ಈಗೀನ ತಮ್ಮ ದೇವಿ ರೂಪದ ವಿಶೇಷ ಫೋಟೋ ಮೂಲಕವೇ ಹೆಚ್ಚು ಗಮನ ಸೆಳೆಯುತ್ತಿದ್ದಾರೆ ಅಂತಲೂ ಹೇಳಬಹುದು.
ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ ಸರ್ಜಾ ಮತ್ತು ನಟಿ ಚಿರಂಜೀವಿ ಸರ್ಜಾ ಬಹುಕಾಲ ಪ್ರೀತಿ ಮಾಡಿ, ಎರಡೂ ಮನೆಯವರನ್ನು ಕಷ್ಟಪಟ್ಟು ಮದುವೆಗೆ ಒಪ್ಪಿಸಿ ಸಪ್ತಪದಿ ತುಳಿದಿದ್ದರು. ಆದರೆ, ಈ ಮುದ್ದಾದ ಜೋಡಿ ಮೇಲೆ ಅದ್ಯಾವ ಕೆಟ್ಟ ದೃಷ್ಟಿ ಬಿತ್ತೋ ಏನೋ, ಚಿರಂಜೀವಿ ಸರ್ಜಾ ಅಕಾಲಿಕ ಸಾವನ್ನಪ್ಪಿ ದೊಡ್ಡ ನೋವನ್ನೇ ಬಿಟ್ಟು ಹೋದರು. 2020ರ ಜೂನ್‌ 7ರಂದು ಹೃದಯ ಸ್ತಂಭನದಿಂದ ಇಹಲೋಕ ತ್ಯಜಿಸಿದರು. 
ಅಂದಿನಿಂದ ಈ ವರೆಗೂ ಎಲ್ಲ ನೋವನ್ನು ನುಂಗಿ ಮಗ ರಾಯನ್‌ ಜತೆಯಲ್ಲಿ ತಮ್ಮ ಖುಷಿಯನ್ನು ಕಾಣುತ್ತ ಜೀವನ ದೂಡುತ್ತಿದ್ದಾರೆ ಮೇಘನಾ ಹೊಸ ಮನೆ ಕಟ್ಟಿ ಮಗನೊಂದಿಗೆ ಹೊಸ ಬದುಕ ಕಟ್ಟಿಕೊಳ್ಳುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.