ರವಿಚಂದ್ರನ್ ವಜ್ರದ ಅಂಗಡಿಯಲ್ಲಿ ಕೋಟಿ ಬೆಲೆಯ ವಜ್ರ ಖರೀದಿ ಮಾಡಿದ ಮೇಘನಾ ರಾಜ್
May 1, 2025, 17:28 IST
|

5 ವರ್ಷಗಳ ಹಿಂದೆ ಹೃದಯಾಘಾತದಿಂದ ಚಿರಂಜೀವಿ ಸರ್ಜಾ ನಿಧನರಾಗಿದ್ದರು. ಆಗ ಮೇಘನಾ 5 ತಿಂಗಳ ಗರ್ಭಿಣಿ ಆಗಿದ್ದರು. ಸಾಕಷ್ಟು ನೋವಿನ ನಡುವೆಯೂ ಮಗುವಿನ ಮುಖ ನೋಡಿ ಜೀವನ ಸಾಗಿಸುತ್ತಿದ್ದಾರೆ. ಎರಡನೇ ಮದುವೆ ಬಗ್ಗೆ ಆಗಾಗ್ಗೆ ಪ್ರಶ್ನೆಗಳು ಎದುರಾಗುತ್ತಲೇ ಇರುತ್ತದೆ. ಇದಕ್ಕೆ ತಮ್ಮ ಅಭಿಪ್ರಾಯವನ್ನು ಮೇಘನಾ ವ್ಯಕ್ತಪಡಿಸುತ್ತಾ ಬರುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಮೇಘನಾ ರಾಜ್ ಎರಡನೇ ಮದುವೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಲೇ ಇದ್ದಾರೆ. ಇವರನ್ನು ಮದುವೆ ಆಗುತ್ತಾರೆ, ಅವರ ಜೊತೆ ಹೊಸ ಬಾಳಿಗೆ ಕಾಲಿಡುತ್ತಾರೆ ಅಂತೆಲ್ಲಾ ಪೋಸ್ಟ್ ಮಾಡುತ್ತಿದ್ದಾರೆ. ಆದರೆ ಅದಕ್ಕೆಲ್ಲಾ ಮೇಘನಾ ತಲೆ ಕೆಡಿಸಿಕೊಳ್ತಿಲ್ಲ. ತಾನಾಯ್ತು ತನ್ನ ಕೆಲಸ ಆಯ್ತು, ಫ್ಯಾಮಿಲಿ ಆಯ್ತು ಎಂದು ಸುಮ್ಮನಿದ್ದಾರೆ. ಅಷ್ಟೇ ಅಲ್ಲದೆ ನಟ ರವಿಚಂದ್ರನ್ ಅವರ ಜೊತೆಗೂಡಿ ಚಿರು ಹೆಸರಿನ ವಜ್ರ ಖರೀದಿಸಿ ಅದನ್ನು ರಾಯನ್ ಗೆ ಗಿಫ್ಟ್ ಮಾಡಿದ್ದಾರೆ.
ಚಿರು ಅಗಲಿಕೆ ಬಳಿಕ ಮೇಘನಾ ರಾಜ್ ನಟನೆಯ ಎರಡು ಸಿನಿಮಾಗಳು ಬಿಡುಗಡೆಯಾಗಿದೆ. ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಹಾಗೂ ತತ್ಸಮ ತದ್ಬವ ಚಿತ್ರಗಳಲ್ಲಿ ಅವರು ನಟಿಸಿದ್ದರು. ಉಪೇಂದ್ರ ಜೊತೆ ನಟಿಸುತ್ತಿರುವ 'ಬುದ್ಧಿವಂತ'- 2 ಸಿನಿಮಾದಲ್ಲಿ ಆಕೆ ನಟಿಸಿದ್ದಾರೆ. ಕಾರಣಾಂತರಗಳಿಂದ ಆ ಸಿನಿಮಾ ಬಿಡುಗಡೆ ತಡವಾಗುತ್ತಿದೆ.
ಮಲಯಾಳಂ ಚಿತ್ರರಂಗದಲ್ಲಿ ಕೂಡಾ ಛಾಪನ್ನು ಮೂಡಿಸಿದ ಮೇಘನಾ ರಾಜ್ ಮುಂದಿನ ದಿನಗಳಲ್ಲಿ ಮತ್ತಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬಹುದು ಎನ್ನಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sun,1 Jun 2025
FactCheck:ಉಗ್ರಂ ಮಂಜು ಮದುವೆ ಫಿಕ್ಸ್, ಹುಡುಗಿ ಮಾತ್ರ ದಂತದ ಗೊಂಬೆ
Sat,31 May 2025
ದರ್ಶನ್ ಜೊತೆ ಪತ್ನಿ ವಿಜಯಲಕ್ಷ್ಮಿ ಫಾರಿನ್ ಟ್ರಿಪ್, ಪವಿತ್ರ ಗೌಡ ಕ ಣ್ಣೀರು
Sat,31 May 2025