ಎರಡನೇ ಮದುವೆಗೆ ಬಗ್ಗೆ ಮೇಘನಾ ರಾಜ್ ಸುಳಿವು, ಹುಡುಗನೊಬ್ಬನ ಜೊತೆ ಸುತ್ತಾಟ

 | 
ಕಾ
ನಟಿ ಮೇಘನಾ ರಾಜ್‌ ಅವರು ನೋವುಗಳಿಂದ ಹೊರ ಬಂದು ಹೊಸ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಮಗ ರಾಯನ್ ಜೊತೆ ಅವರು ಖುಷಿಯ ಕ್ಷಣಗಳನ್ನು ಕಳೆಯುತ್ತಿದ್ದು. ಇದೇ ಸಂದರ್ಭದಲ್ಲಿ ಚಿರಂಜೀವಿ ಸರ್ಜಾ ಅವರ ಫೋಟೋ ಶೇರ್‌ ಮಾಡಿಕೊಂಡು ಅದಕ್ಕೊಂದು ಮುದ್ದಾದ ಸಾಲುಗಳನ್ನು ಪೋಣಿಸಿದ್ದಾರೆ. ಈ ಪೋಸ್ಟ್‌ ಜನರನ್ನು ಭಾವುಕರನ್ನಾಗಿಸಿದೆ. ನಟ, ದಿವಂಗತ ಚಿರಂಜೀವಿ ಸರ್ಜಾ ಅವರೊಂದಿಗೆ ಕಳೆದ ಕ್ಷಣಗಳನ್ನು ಅವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮೇಘನಾ ರಾಜ್‌ ಅವರ ಎರಡನೇ ಮದುವೆಯ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿತ್ತು. 
ಸೋಷಿಯಲ್‌ ಮೀಡಿಯಾದಲ್ಲಿ ಕೆಲವರು ಮನಸೋಇಚ್ಛೆ ಕಮೆಂಟ್‌ ಮಾಡಿದ್ದೂ ಇದೆ. ಈ ಎಲ್ಲಾ ಚರ್ಚೆಗಳಿಗೂ ಮೇಘನಾ ಅವರೇ ಒಂದೇ ಒಂದು ಸಾಲಿನಲ್ಲಿ ಫುಲ್‌ಸ್ಟಾಪ್ ಇರಿಸಿದ್ದಾರೆ.ಕನ್ನಡ ಚಿತ್ರರಂಗದ ಮುದ್ದಾದ ಜೋಡಿಗಳಲ್ಲಿ ನಟ, ದಿವಂಗತ ಚಿರಂಜೀವಿ ಸರ್ಜಾ & ಮೇಘನಾ ರಾಜ್‌ ಅವರ ಜೋಡಿಯೂ ಒಂದು. ಸಿನಿಮಾ ಹಾಗೂ ವೈಯಕ್ತಿಕ ಜೀವನದಲ್ಲಿ ಬಹು ಮುಖ್ಯಘಟ್ಟದಲ್ಲಿ ಇದ್ದಾಗಲೇ ಚಿರಂಜೀವಿ ಸರ್ಜಾ ಅವರು ಸಾವನ್ನಪ್ಪಿದ್ದರು. ಆ ನೋವುಗಳಿಂದ ಮೇಘನಾ ಅವರು ಚೇತರಿಸಿಕೊಳ್ಳುತ್ತಿದ್ದು. ಹೊಸ ಜೀವನ ಕಟ್ಟಿಕೊಳ್ಳುವ ಬಗ್ಗೆಯೂ ಒಂದೆರಡು ಬಾರಿ ಮಾತನಾಡಿದ್ದರು. ಮೇಘನಾ ಅವರು ಈಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
 ಸೋಶಿಯಲ್ ಮೀಡಿಯಾದಲ್ಲೂ ಅವರು ಸಖತ್ ಆಕ್ಟೀವ್ ಆಗಿದ್ದಾರೆ. ಫ್ರೆಂಡ್ಸ್ & ಫ್ಯಾಮಿಲಿ ಜೊತೆ ಖುಷಿಯ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಆದರೆ ಸರ್ಜಾ ಅಗಲಿಕೆಯ ನೋವು ಕಾಡುತ್ತಿದೆ. ಚಿರಂಜೀವಿ ಸರ್ಜಾ ಅವರು 5 ವರ್ಷಗಳ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದರು. ಆಗ ಮೇಘನಾ ಅವರು 5 ತಿಂಗಳ ಗರ್ಭಿಣಿ ಆಗಿದ್ದರು.ಚಿರಂಜೀವಿ ಸರ್ಜಾ ಹಾಗೂ ಮೇಘನಾ ಅವರು ಪ್ರೀತಿಸಿ ವಿವಾಹವಾಗಿದ್ದರು. ಜಾತಿ - ಧರ್ಮಗಳನ್ನು ಮೀರಿ ನಡೆದ ಪ್ರೇಮ ವಿವಾಹ ಇದಾಗಿತ್ತು. ಎರಡೂ ಕಡೆಯವರನ್ನು ಒಪ್ಪಿಸಿ ಅದ್ಧೂರಿಯಾಗಿ ಇಬ್ಬರು ವಿವಾಹವಾಗಿದ್ದರು. 
ಆದರೆ, ಕೆಲವೇ ವರ್ಷಗಳಲ್ಲಿ ಕಹಿ ಘಟನೆಯೊಂದು ಸಂಭವಿಸಿತ್ತು. ಮೇಘನಾ ಅವರು ಗರ್ಭಿಣಿಯಾಗಿರುವಾಗಲೇ ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಇದಾದ ಮೇಲೆ ತುಂಬಾ ದಿನಗಳ ನಂತರ ಮೇಘನಾ ಅವರು ಹೊಸ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಈ ರೀತಿ ಇರುವಾಗಲೇ ಅವರ ಮರು ವಿವಾಹ ಅಥವಾ 2ನೇ ಮದುವೆ ಬಗ್ಗೆ ಆಗ್ಗಾಗ ಚರ್ಚೆಯಾಗುತ್ತಲ್ಲೇ ಇದೆ. 
ಇದೀಗ ಈ ಚರ್ಚೆಗಳಿಗೆ ಮೇಘನಾ ರಾಜ್‌ ಅವರು ತಿಲಾಂಜಲಿ ಹಾಡಿದ್ದಾರೆ.ಮೇಘನಾ ಅವರು ಸೋಷಿಯಲ್‌ ಮೀಡಿಯಾದಲ್ಲಿ ಚಿರಂಜೀವಿ ಸರ್ಜಾ ಅವರೊಂದಿಗೆ ಕಳೆದ ಕ್ಷಣಗಳ ಮುದ್ದಾದ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಸುಂದರ ಕ್ಷಣಗಳ ಫೋಟೋವನ್ನು ಹಂಚಿಕೊಂಡಿರುವ ಅವರು, In every lifetime ಎಂದು ಒಂದೇ ಸಾಲಿನಲ್ಲಿ ಅವರು ಪ್ರತಿ ಜೀವಿತಾವಧಿಯಲ್ಲಿ ನಿನ್ನೊಂದಿಗೆ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.