ಮಗನ ಆಸೆಯಂತೆ ಸೀರೆ ಉಟ್ಟು ಬ್ರೇಕ್ ಡ್ಯಾನ್ಸ್ ಮಾಡಿದ ಮೇಘನಾ ರಾಜ್, ಮೆಚ್ಚಿಕೊಂಡ ಕನ್ನಡಿಗರು
ತತ್ಸಮ ತದ್ಭವ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡಿರೋ ನಟಿ ಮೇಘನಾ ರಾಜ್ ಸರ್ಜಾ ಮತ್ತೊಂದು ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ. ಇದರ ಜೊತೆ ಕಿರುತೆರೆಯಲ್ಲೂ ಸಕ್ರಿಯರಾಗಿದ್ದಾರೆ. ಆದರೆ ಇದೆಲ್ಲದರ ಮಧ್ಯೆಯೂ ಮೇಘನಾ ಸದಾ ಮಗನಿಗಾಗಿ ಕನಸುಗಳನ್ನು ಕಟ್ಟುತ್ತಲೇ ಇರುತ್ತಾರೆ. ಸಿನಿಮಾ ಸಕ್ಸಸ್‌ಮಧ್ಯೆ ಮಾತನಾಡಿರೋ ಮೇಘನಾ ಮಗ ರಾಯನ್ ರಾಜ್ ಸರ್ಜಾ ಬಗ್ಗೆ ಕಂಡಿರೋ ಕನಸುಗಳನ್ನು ಹಂಚಿಕೊಂಡಿದ್ದಾರೆ.
ಅವರಿಗೆ ಮಗನಿಗೆ ಒಳ್ಳೆಯ ಡ್ಯಾನ್ಸ್ ಕಲಿಸಬೇಕಂತೆ ಹೌದು ಈಗಾಗಲೇ ಚಿಕ್ಕಪ್ಪ ಧ್ರುವ ಸರ್ಜಾ ಜೊತೆ ಹಲವಾರು ಹಾಡಿಗೆ ಹೆಜ್ಜೆ ಹಾಕಿರುವ ರಾಯನ್ ಸರ್ಜಾ ಚಂದವಾಗಿ ಡ್ಯಾನ್ಸ್ ಮಾಡಿ ಹಲವಾರು ಜನರ ಮನಗೆದ್ದಿದ್ದಾರೆ. ಈಗ ತೆಲುಗು ಹಾಡೊಂದಕ್ಕೆ ಸಕತ್ತಾಗಿ ಡ್ಯಾನ್ಸ್ ಮಾಡಿರುವ ವೀಡಿಯೊ ಎಲ್ಲೆಡೆ ವೈರಲ್ ಆಗಿದ್ದು ಮುಂದೆ ಇನ್ನಷ್ಟು ಸೂಪರ್ ಡ್ಯಾನ್ಸ್ ಮಾಡೋದ್ರಲ್ಲಿ ಅನುಮಾನವೇ ಇಲ್ಲ ಅಂತಿದ್ದಾರೆ.
ಇದೀಗ ಎರಡು ವರ್ಷಗಳ ಕಾಲ ನಾನು ಒಂದು ಪೋನ್ ಕಾಲ್ ಮಾಡಲು ಸಮಯ ಹೊಂದಿಸಲು ಕಷ್ಟಪಡುತ್ತಿದ್ದೆ. ಯಾಕೆಂದರೇ ರಾಯನ್ ಗೆ ನಾನು ಸಮಯ ಕೊಡಬೇಕಿತ್ತು. ಅವನು ಮಲಗಿದಷ್ಟೇ ಹೊತ್ತಿನಲ್ಲಿ ನಾನು ಎಲ್ಲವನ್ನೂ ಮಾಡಿಕೊಳ್ಳಬೇಕಿತ್ತು. ಆದರೆ ಈಗ ರಾಯನ್ ಶಾಲೆಗೆ ಹೋಗ್ತಿರೋದರಿಂದ ನನಗಾಗಿ ಒಂದಿಷ್ಟು ಸಮಯ ಸಿಗ್ತಿದೆ.
ಆ ಸಮಯದಲ್ಲಿ ಅಂದ್ರೇ ರಾಯನ್ ಶಾಲೆಗೆ ಹೋದ ಸಂದರ್ಭದಲ್ಲಿ ನಾವು ನಮ್ಮ ಎಲ್ಲ ಕೆಲಸ ಮಾಡಿಕೊಳ್ಳಲು ಆರಂಭಿಸಿದ್ದೇವೆ. ಈಗ ಬದುಕಿಗೆ ಒಂದು ರೂಟಿನ್ ಸೆಟ್ ಆಗಿದೆ ಎಂದಿದ್ದಾರೆ. ನಾನು ಪಾರ್ಲರ್, ಜಿಮ್ ಎಂದೆಲ್ಲ ಓಡಾಡುವಷ್ಟು ಫ್ರೀ ಆಗಿದ್ದೇನೆ. ಇನ್ಮೇಲೆ ಮತ್ತೂಂದು ಸಿನಿಮಾ ಶೂಟಿಂಗ್ ಆರಂಭವಾಗಲಿದೆ. ಆಗ ಮತ್ತೆ ಮನೆ,ಮಗು ಮತ್ತು ವರ್ಕ್ ಮಧ್ಯೆ ಬ್ಯಾಲೆನ್ಸ್ ಸರ್ಕಸ್ ಆರಂಭವಾಗುತ್ತೆ ಎಂದಿದ್ದಾರೆ.