ಚಿರು ಸಾ.ವಿನ ಬಳಿಕವೂ ಎರಡು ತಲೆದಿಂಬು ಉಪಯೋಗಿಸುತ್ತಿರುವ ಮೇಘನಾ ರಾಜ್, ಯಾಕೆ ಗೊ‌.ತ್ತಾ

 | 
ರ

ಸ್ಯಾಂಡಲ್‌ವುಡ್ ಬ್ಯೂಟಿ ಮೇಘನಾ ರಾಜ್ ಮತ್ತೆ ಸುದ್ದಿಯಲ್ಲಿದ್ದಾರೆ. ಸಿನಿಮಾಗಿಂತ ತಮ್ಮ ವೈಯಕ್ತಿಕ ವಿಚಾರವಾಗಿ ಸದ್ದು ಮಾಡ್ತಿದ್ದಾರೆ. ನಟಿ ಮೇಘನಾ ಎರಡನೇ ಮದುವೆಯ ವದಂತಿ ಸಖತ್ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ನಟಿ ಕೂಡ ಸ್ಪಷ್ಟನೆ ನೀಡಿದ್ದಾರೆ. 

ನಟಿ ಮೇಘನಾ ರಾಜ್, ಸದ್ಯ ಮಗುವಿನ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗ ರಾಯನ್ ಖುಷಿಯಲ್ಲೇ ಮೇಘನಾ ಜೀವನ ಸಾಗಿಸುತ್ತಿದ್ದಾರೆ. 2020ರಲ್ಲಿ ನಟ ಚಿರಂಜೀವಿ ಸರ್ಜಾ ಕೊನೆಯುಸಿರೆಳೆದಿದ್ದರು. ಪತಿಯ ನೆನಪಿನಲ್ಲೇ ಇರುವ ನಟಿಗೆ ಇದೀಗ ಹೊಸ ವದಂತಿಯೊಂದನ್ನ ಎದುರಿಸುತ್ತಿದ್ದಾರೆ. ತಮ್ಮ ಎರಡನೇ ಮದುವೆಯ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮೇಘನಾ ರಾಜ್‌ಗೆ ಎರಡನೇ ಮದುವೆಯ ಬಗ್ಗೆ ಯೋಚಿಸಿದ್ದೀರಾ ಎಂದು ನಿರೂಪಕ ಕೇಳಿದ್ದರು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ನಟಿ, ಮದುವೆಯಾಗು ಎಂದು ಸಲಹೆ ಕೊಡುವವರ ಗುಂಪಿದೆ. ಮದುವೆಯಾಗು ಅಂತಾ ಸಲಹೆ ಕೊಡುವವರ ಗುಂಪಿದೆ. ಮಗನೊಂದಿಗೆ ಖುಷಿಯಾಗಿರಬೇಕು ಎಂದು ಹೇಳುವವರ ಮತ್ತೊಂದು ಗುಂಪಿದೆ. ಹಾಗಾದರೆ ಯಾರ ಮಾತು ಕೇಳಲಿ. ಆದರೆ ಮೇಘನಾ ಅವರೇ ಹೇಳಿದಂತೆ ಅವರಿನ್ನೂ ಮರು ವಿವಾಹದ ಬಗ್ಗೆ ಯೋಚನೆ ಮಾಡಿಲ್ಲ. 

'ಚಿರು ನನ್ನ ಜೊತೆಗೆ ಅವರ ಯೋಚನಾ ಕ್ರಮವನ್ನು ಬಿಟ್ಟು ಹೋಗಿದ್ದಾರೆ. ಅವರೇ ಹೇಳಿದಂತೆ ನಾಳೆ ಏನಾಗುತ್ತೆ ಅನ್ನೋದರ ಬಗ್ಗೆ ಆಗಲೀ, ಇನ್ನೊಂದಿಷ್ಟು ದಿನಗಳಾದ ಮೇಲೆ ನನ್ನ ಬದುಕು ಏನಾಗಬಹುದು ಅನ್ನೋದರ ಬಗೆಗಾಗಲಿ ತಲೆ ಕೆಡಿಸಿಕೊಳಲ್ಲ. ನಾನು ಈ ಕ್ಷಣದಲ್ಲಿ ಜೀವಿಸುವವಳು. ಕೆಲವರೆಲ್ಲ ನೀವು ಇತ್ತೀಚೆಗೆ ಚಿರು ಅವರ ಫೋಟೋ ಪೋಸ್ಟ್ ಮಾಡ್ತಿಲ್ಲ, ಅವರನ್ನ ಮರೀತಿದ್ದೀರಿ ಅನ್ನೋ ಮಾತುಗಳನ್ನೆಲ್ಲ ಹೇಳುತ್ತಿದ್ದಾರೆ. 

ನನಗೆ ಚಿರುವಿನ ಮೇಲಿರುವ ಪ್ರೀತಿಯನ್ನು ನಾನು ಫೋಟೋ ಹಾಕುವ ಮೂಲಕ ಪ್ರೂವ್ ಮಾಡಬೇಕಿಲ್ಲ. ನಾನು ಆತನ ಬಗ್ಗೆ ಯಾವಾಗ ಯೋಚಿಸುತ್ತೇನೆ ಅನ್ನೋದನ್ನೂ ಹೇಳಬೇಕಿಲ್ಲ. ಇದು ಸಂಪೂರ್ಣವಾಗಿ ನನ್ನೊಬ್ಬಳಿಗೇ ಸಂಬಂಧಿಸಿದ್ದು. ನನ್ನ ಬದುಕಿನ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ಸ್ಟ್ರೆಂಥ್ ನನ್ನಲ್ಲಿದೆ. ಆದರೆ ನಾನು ನನ್ನ ಬದುಕಿನ ಬಗ್ಗೆ ಏನೇ ನಿರ್ಧಾರ ತೆಗೆದುಕೊಂಡರೂ ಅದರ ಹಿಂದೆ ಚಿರು ಇರ್ತಾರೆ. ನಿನ್ನ ಮನಸ್ಸಿನ ಮಾತನ್ನಷ್ಟೇ ಕೇಳಬೇಕು ಅನ್ನೋದನ್ನೇ ನಾನು ಬದುಕಿನ ಕೊನೆಯವರೆಗೂ ಪಾಲಿಸಿಕೊಂಡು ಬರುತ್ತೇನೆ' ಎಂಬ ಮಾತುಗಳನ್ನೂ ಮೇಘನಾ ಹೇಳಿದ್ದಾರೆ.