ಧ್ರುವ ಸರ್ಜಾ ಮಗುವನ್ನು ನೋಡಿ ಆಸೆ ಪಟ್ಟ ಮೇಘನಾ ರಾಜ್; ಮತ್ತೊಂದು ಮಗುವಿನ ವಿಚಾರಗಳನ್ನು ಧ್ರುವ

 | 
ಹಗ

ಕನ್ನಡ ಚಿತ್ರರಂಗದ ಯುವ ಸಾಮ್ರಾಟ್ ಆಗಿ ಬೆಳ್ಳಿ ತೆರೆ ಮೇಲೆ ವಿಜೃಂಭಿಸಿದ ನಟ ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿ ಇಂದಿಗೆ ನಾಲ್ಕು ವರ್ಷ. ಇಂದು ಪುಣ್ಯಸ್ಮರಣೆ ನಿಮಿತ್ತ ಚಿರು ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಿದರು.2020, ಜೂನ್ 7- ಇದು ಸರ್ಜಾ ಕುಟುಂಬದ ಪಾಲಿಗೆ ಕರಾಳ ದಿನ. ಹೌದು, ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದಾಗಿ ಅಂದು ನಿಧನರಾದರು. 

ಇಂದಿಗೆ ಅವರು ನಿಧನರಾಗಿ ಮೂರು ವರ್ಷ ಕಳೆದಿವೆ. ಆ ಅಗಲಿಕೆಯ ನೋವಿನಿಂದ ಆ ಕುಟುಂಬಕ್ಕೆ ಇನ್ನೂ ಹೊರಬರಲು ಸಾಧ್ಯವಾಗಿಲ್ಲ. ಕನಕಪುರ ರಸ್ತೆಯ ನೆಲಗುಳಿಯ ಧ್ರುವ ಫಾರ್ಮ್ ಹೌಸ್​ನಲ್ಲಿರುವ ಸಮಾಧಿಗೆ ಪತ್ನಿ ಮೇಘನಾ ರಾಜ್, ಸಹೋದರ ಧ್ರುವ ಸರ್ಜಾ, ಪತ್ನಿ ಪ್ರೇರಣಾ, ಚಿರು ಪುತ್ರ ರಾಯನ್ ಸರ್ಜಾ, ಸುಂದರ ರಾಜ್, ಪ್ರಮೀಳಾ ಜೋಷಾಯ್, ಚಿರು ತಂದೆ ವಿಜಯ್, ತಾಯಿ ಅಮ್ಮಾಜಿ ಸೇರಿದಂತೆ ಮೇಘನಾ ರಾಜ್ ಹಾಗೂ ಧ್ರುವ ಸರ್ಜಾ ಕುಟುಂಬದವರು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಚಿರು ಪತ್ನಿ ಮೇಘನಾ ರಾಜ್ ಭಾವುಕರಾದರು‌.

ಚಿರು ಅಂತ್ಯಸಂಸ್ಕಾರ ಮಾಡಿರುವ ಸ್ಥಳದಲ್ಲಿ ಸ್ಮಾರಕ ನಿರ್ಮಿಸಲಾಗಿದ್ದು, ಸಮಾಧಿ ಬಳಿ ಅವರ ಹೆಸರನ್ನು ದೊಡ್ಡ ಅಕ್ಷರಗಳಲ್ಲಿ ಕೆತ್ತಿಸಲಾಗಿದೆ. ಅಭಿಮಾನಿಗಳಿಗೂ ಸಮಾಧಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ನಮ್ಮ ಅಣ್ಣ ನಮಗೆ ನೆನಪಾಗದೇ ಇರುವ ಕ್ಷಣಗಳೇ ಇಲ್ಲ. ನನ್ನ ತಂದೆ-ತಾಯಿಗಿಂತ ಜಾಸ್ತಿ ಸಮಯವನ್ನು ನಮ್ಮಣ್ಣನ ಜೊತೆ ನಾನು ಕಳೆದಿದ್ದೇನೆ. ನಾವಿಬ್ರು ಬೋರ್ಡಿಂಗ್ ಸ್ಕೂಲ್‌ನಲ್ಲಿ ಇದ್ವಿ. ಪೋಷಕರು, ಸಂಬಂಧಿಕರ ಜೊತೆಗೆ ಸಮಯ ಕಳೆದಿದ್ದು ಕಮ್ಮಿ ನಾನು.

ನಮ್ಮ ತಂದೆ ತಾಯಿಯನ್ನು ನೋಡಿದಾಗ ನಾನು ಬ್ಲಾಂಕ್ ಆಗುತ್ತೇನೆ. ನಮ್ಮ ಅಪ್ಪ ಅಮ್ಮ ಬೇಜಾರಾಗುತ್ತಾರೇನೋ ಅಂತ ನಾನು ಜಾಸ್ತಿ ಅಣ್ಣನ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ ಧ್ರುವ ಸರ್ಜಾ.ನಮ್ಮ ಸರ್ಜಾ ಫ್ಯಾಮಿಲಿಗೆ ಕಿಶೋರ್ ಅಂಕಲ್, ನಮ್ಮ ಅಜ್ಜಿ, ಅಜ್ಜ, ಅರ್ಜುನ್ ಅಂಕಲ್ ಎಲ್ಲರೂ ಪಿಲ್ಲರ್ಸ್‌ ಇದ್ದಹಾಗೆ. ಕಳೆದ ವರ್ಷ ಅಜ್ಜಿ ಇದ್ರು, ಈ ವರ್ಷ ಅವರೂ ನಮ್ಮೊಂದಿಗೆ ಇಲ್ಲ. ಅದೊಂದು ಬೇಜಾರು ಕೂಡ ನಮ್ಮನ್ನು ಕಾಡುತ್ತಿದೆ. 

ನಮ್ಮ ಅಣ್ಣನ ಕುರಿತ ಒಂದೆರಡು ನೆನಪುಗಳಾಗಿದ್ರೆ ಹೇಳಬಹುದಿತ್ತು. ನಮ್ಮ ಅಣ್ಣ ನನ್ನೊಳಗೆ ಬೆರೆತಿದ್ದಾನೆ. ಚಿಕ್ಕ ವಯಸ್ಸಿನಿಂದನೂ ಅವನ ಜೊತೆಗೆ ಬೆಳೆದಿದ್ದರಿಂದ ಸಾಕಷ್ಟು ನನೆಪುಗಳಿವೆ ಎಂದು ಅಣ್ಣನ ಜೊತೆಗಿನ ನೆನಪುಗಳ ಬಗ್ಗೆ ಧ್ರುವ ಸರ್ಜಾ ಹೇಳಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.