ಕಾವೇರಿ ನದಿ ವಿಚಾರಕ್ಕೆ ರೊಚ್ಚಿಗೆದ್ದ ಮೇಘನಾ ರಾಜ್ ತಂದೆ, ' ಅಲ್ಲಪ್ಪ ಚಿತ್ರರಂಗದ ಕಲಾವಿದರು ಮಾತ್ರ ಹೋರಾಟಕ್ಕೆ ಬರಬೇಕಾ'

 | 
ರ್ರಾ

ನಮ್ಮಲ್ಲಿ ನೀರು ಇದ್ದರೆ ನಾವು ಬೇರೆಯವರಿಗೆ ನೀರು ಕೊಡಬಹುದು. ಆದರೆ ಈ ಬಾರಿ ಅಷ್ಟಾಗಿ ಮಳೆ ಇಲ್ಲದ ಕಾರಣಕ್ಕೆ ನಾವು ತಮಿಳುನಾಡಿಗೆ ನೀರು ಕೊಡಲು ಆಗೋದಿಲ್ಲ. ನಾವು ಸಿಕ್ಕಾಪಟ್ಟೆ ನೀರು ಇದ್ದಾಗ ಅವರಿಗೆ ನೀರು ಕೊಟ್ಟಿದ್ದೇವೆ, ಈಗ ಕೊಡಲು ಆಗೋದಿಲ್ಲ" ಎಂಬುದು ಕನ್ನಡಿಗರ ಅಭಿಪ್ರಾಯ. 

ಈ ಬಾರಿ ಕಾವೇರಿಗೋಸ್ಕರ ತಮಿಳುನಾಡಿನವರು ಡಿಮ್ಯಾಂಡ್ ಮಾಡುತ್ತಿದ್ದಾರತೆ. ಹೀಗಾಗಿ ಕರ್ನಾಟಕದಲ್ಲಿ ಇಂದು ಬಂದ್ ಘೋಷಿಸಲಾಗಿದೆ. ಕಾವೇರಿಗೋಸ್ಕರ ಕನ್ನಡ ಚಿತ್ರರಂಗ ಬೆಂಬಲ ಸೂಚಿಸುತ್ತಿದೆ. ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ 'ಕಾವೇರಿ ನಮ್ಮದು' ಎಂದು ಹೋರಾಟ ಮಾಡಲಾಗುತ್ತಿದೆ. 

ಮೊದಲಿನಿಂದಲೂ ಕಾವೇರಿ ಬೇಕು ಎಂಬ ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ ಸೂಚಿಸುತ್ತ ಬಂದಿದೆ. ಅಂತೆಯೇ ಈ ಬಾರಿ ಕೂಡ ಕೆಲ ಕಲಾವಿದರು ಚೇಂಬರ್ಸ್ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ.
ನಟ ದರ್ಶನ್, ನಟ ಶಿವರಾಜ್‌ಕುಮಾರ್, ಉಪೇಂದ್ರ, ಅನು ಪ್ರಭಾಕರ್, ರಘು ಮುಖರ್ಜಿ, ಉಮಾಶ್ರೀ, ಪೂಜಾ ಗಾಂಧಿ, ಧ್ರುವ ಸರ್ಜಾ, ಶ್ರೀಮುರಳಿ, ವಿಜಯ್ ರಾಘವೇಂದ್ರ, ಹಂಸಲೇಖ, ಗಿರಿಜಾ ಲೋಕೇಶ್, ನವೀನ್ ಕೃಷ್ಣ, ಸುಂದರ್ ರಾಜ್, ಪ್ರಮೀಳಾ ಜೋಶಾಯ್, ಮಿತ್ರ, ರೂಪಿಕಾ, ಪದ್ಮಾ ವಾಸಂತಿ, ನಟ ಶ್ರೀನಾಥ್, ಧರ್ಮ ಕೀರ್ತಿರಾಜ್, ಶ್ರೀನಿವಾಸ್ ಮೂರ್ತಿ, ಅನಿರುದ್ಧ, ಚಿಕ್ಕಣ್ಣ ಮುಂತಾದವರು ಹೋರಾಟದಲ್ಲಿ ಭಾಗಿಯಾಗಿದ್ದಾರೆ. 

ನಟ ಉಪೇಂದ್ರ ಅವರು ಹೋರಾಟ ಮಾಡುವ ಸ್ಥಳಕ್ಕೆ ಆಗಮಿಸಿ ಮಾತನಾಡಿದ್ದಾರೆ. ಆನಂತರ ಅವರು ಅಲ್ಲಿಂದ ತೆರಳಿದ್ದಾರೆ. ನೆಲ ಜಲ ಭಾಷೆ ವಿಚಾರಕ್ಕೆ ನಮ್ಮ ಪ್ರಾಣ ಕೊಡಲು ಸಿದ್ಧ ಎಂದು ನಮ್ಮ ತಂದೆ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಇಡೀ ಕುಟುಂಬ ಸಿನಿಮಾ ಇಂಡಸ್ಟ್ರಿ ರೈತರ ಜೊತೆ ನಿಲ್ಲುತ್ತೇವೆ ಎಂದು ಇತ್ತೀಚೆಗೆ ರೈತರ ಹೋರಾಟಕ್ಕೆ ನಟ ರಾಘವೇಂದ್ರ ರಾಜಕುಮಾರ್ ಬೆಂಬಲ ಸೂಚಿಸಿದ್ದರು. ಇನ್ನು ಈ ಕುರಿತಾಗಿ ನಟ ಸುಂದರ್ ರಾಜ್ ಇಂತಹ ಸಂದರ್ಭದಲ್ಲಿ ಬರೀ ಕನ್ನಡ ನಟರು ನೆನಪಾಗುವುದು ಎಂದು ಕಿಡಿಕಾರಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.