ಮೇಘನಾ ರಾಜ್ ಒಂಟಿ ಜೀವನಕ್ಕೆ ಬ್ರೇಕ್; ಕನ್ನಡಿಗರಿಗೆ ಸಿಹಿಸುದ್ದಿ
ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿಗಳಲ್ಲಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಜೋಡಿ ಕೂಡ ಒಂದಾಗಿತ್ತು. ಆದರೆ, ಚಿರಂಜೀವಿ ಸರ್ಜಾ ದಿಢೀರ್ ನಿಧನ ಎರಡೂ ಕುಟುಂಬದಲ್ಲಿ ಸೂತಕ ವಾತಾವರಣವನ್ನು ಸೃಷ್ಟಿಸಿಬಿಟ್ಟಿತ್ತು. ಆಗ ಐದು ತಿಂಗಳ ಗರ್ಭಿಣಿಯಾಗಿದ್ದ ಮೇಘನಾ ರಾಜ್ ಮುಂದಿನ ಬದುಕು ಹೇಗಿರುತ್ತೋ ಅಂತ ಮರುಕಪಟ್ಟವರಿಗೇನು ಕಮ್ಮಿಯಿರಲಿಲ್ಲ.
ಈಗ ಚಿರಂಜೀವಿಯನ್ನು ಕಳೆದುಕೊಂಡ ನೋವಿನಿಂದ ಮೇಘನಾ ರಾಜ್ ಹೊರ ಬಂದು ಹೊಸ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಮೇಘನಾ ರಾಜ್ ಬೆನ್ನೆಲುಬಾಗಿ ತಂದೆ ಸುಂದರ್ ರಾಜ್ ಹಾಗೂ ತಾಯಿ ಪ್ರಮೀಳಾ ಜೋಷಾಯ್ ನಿಂತಿದ್ದಾರೆ. ಮತ್ತೆ ಮಗಳ ಬದುಕಿಗೆ ಹೊಸ ರೂಪ ನೀಡುವುದಕ್ಕೆ ಹವಣಿಸುತ್ತಿದ್ದಾರೆ. ಇತ್ತೀಚೆಗೆ ಮಿರ್ಚಿ ಕನ್ನಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸುಂದರ್ ರಾಜ್ ಕೂಡ ಇದೇ ಮಾತುಗಳನ್ನು ಹೇಳಿದ್ದಾರೆ.
ಚಿರು ಅಗಲಿದ ಬಳಿಕ ಮೇಘನಾ ರಾಜ್ ಅವರ ಮನೆಯಲ್ಲೇ ಇದ್ದಾರೆ. ಪುತ್ರ ರಾಯನ್ ರಾಜ್ ಸರ್ಜಾ ಜೊತೆ ಹೊಸ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಮಿರ್ಚಿ ಕನ್ನಡದ ಸಂದರ್ಶನದಲ್ಲಿ ಸುಂದರ್ ರಾಜ್ ತಮ್ಮ ಮಗಳನ್ನು ತಾವೇ ನೋಡಿಕೊಳ್ಳುತ್ತಿದ್ದೇವೆ. ಮಗಳನ್ನು ಸ್ಟ್ರಾಂಗ್ ಮಹಿಳೆಯನ್ನಾಗಿ ಮಾಡುತ್ತೇವೆ ಅಂತ ಹೇಳಿಕೊಂಡಿದ್ದಾರೆ.ಸೊಸೆಯಾಗಿ ಬರುವ ಹೆಣ್ಣು ಮಗಳನ್ನು ಇನ್ನೂ ಜವಾಬ್ದಾರಿಯುತವಾಗಿ ನೋಡಿಕೊಳ್ಳಬೇಕು.
ಯಾಕಂದ್ರೆ, ಒಂದು ಹೆಣ್ಣು ಎಲ್ಲವನ್ನೂ ಬಿಟ್ಟು ಗಂಡನ ಮನೆಗೆ ಬಂದಿರುತ್ತಾಳೆ. ಆ 20 ವರ್ಷ ಅವಳ ಎಲ್ಲವನ್ನೂ ನೋಡಿರುತ್ತಾಳೆ. ಸಾಕು-ಬೇಕುಗಳು, ನೋವು-ನಲಿವುಗಳು, ಚಿಕ್ಕ ಮಕ್ಕಳಾಗಿದ್ದಾಗ ಜ್ವರ ಬಂದಿರುತ್ತೆ. ಅಷ್ಟೆಲ್ಲ ನೋಡಿದ ಮೇಲೆ ಒಂದು ಅಲಂಕಾರದ ಗೊಂಬೆಯಾಗಿ ಮಾಡಿ ಕಳಿಸಿರುತ್ತೇನೆ. ನೀವು ಆ ಅಲಂಕಾರವನ್ನು ಕೀಳಬಾರದು. ಹಾಗೇ ಆ ಮನೆಗೆ ಹೋದ ಹೆಣ್ಣು ಮಗಳು ಕೂಡ ಶೋಭೆ ತರುವಂತೆ ಇರಬೇಕು. ಎಂದು ಹಿರಿಯ ನಟ ಸುಂದರ್ ರಾಜ್ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.