40ನೇ ವರ್ಷದ ಸನಿಹದಲ್ಲಿ ಕನ್ನಡದ ಖ್ಯಾತ ನಟನ ಜೊತೆ ಮದುವೆ ಆಗೋಕೆ ಮುಂದಾದ ಮೇಘನಾ ಗಾಂವ್ಕರ್
Jul 24, 2025, 14:42 IST
|

ಇದೇ ವೇಳೆ ಅಭಿಮಾನಿಗಳಿಗೆ ಇದು ತಮ್ಮ ಮದುವೆ ಸುದ್ದಿಯಲ್ಲ ಎಂದು ನಟಿ ಮೇಘನಾ ಗಾಂವ್ಕರ್ ಸ್ಪಷ್ಟನೆ ನೀಡಿದ್ದು, ಇದು ನನ್ನ ಶೈಕ್ಷಣಿಕ ಸಾಧನೆ ಎಂದು ಹೇಳಿದ್ದಾರೆ. ಸಿನಿಮಾ ಮತ್ತು ಸಾಹಿತ್ಯ ವಿಚಾರದಲ್ಲಿ ಮೇಘನಾ ಗಾಂವ್ಕರ್ ಡಾಕ್ಟರೇಟ್ ಪದವಿ ಪಡೆದ ವಿಚಾರವಾಗಿ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ನಿಮಗೆಲ್ಲರಿಗೂ ಡಾ. ಮೇಘನಾ ಗಾಂವ್ಕರ್ ಅವರನ್ನು ಪ್ರಸ್ತುತಪಡಿಸುತ್ತಿದ್ದೇನೆ. ಈ ಮಹಿಳೆಯ ಬಗ್ಗೆ ತುಂಬಾ ಹೆಮ್ಮೆಯಿದೆ. ಕಳೆದ 6 ವರ್ಷಗಳಿಂದ ಈ ಪಿಎಚ್‌ಡಿ ಪ್ರಯಾಣ ಸುಲಭವಾಗಿರಲಿಲ್ಲ. ಆದರೆ ನಾನು ನನ್ನ ಶ್ರದ್ಧೆ ಹಾಗೂ ಇಚ್ಛಾಶಕ್ತಿಯಿಂದ ಇದನ್ನು ಪೂರ್ಣಗೊಳಿಸಿದ್ದೇನೆ ಎಂದು ಪಿಎಚ್‌ಡಿ ಪ್ರಮಾಣ ಪತ್ರದೊಂದಿಗಿನ ಫೋಟೋವನ್ನು ಮೇಘನಾ ಗಾಂವ್ಕರ್ ಹಂಚಿಕೊಂಡಿದ್ದಾರೆ.
ಇವತ್ತು ನಾನು ನಿಮ್ಮೆಲ್ಲರ ಜೊತೆ ಖುಷಿಯ ವಿಚಾರ, ಹೆಮ್ಮೆಯ ವಿಚಾರ, ಸಿಹಿ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕಳೆದ ಆರು ವರ್ಷಗಳಿಂದ ನಾನು ನನ್ನ ಪಿಎಚ್‌ಡಿ ಮಾಡುತ್ತಿದ್ದೆ. 2024ರ ಅಕ್ಟೋಬರ್‌ನಲ್ಲಿ ನಾನು ನನ್ನ ಪಿಎಚ್‌ಡಿ ವರದಿಯನ್ನು ಯಶಸ್ವಿಯಾಗಿ ಸಲ್ಲಿಸಿದ್ದೆ. ಕಳೆದ ವಾರ ನನ್ನ ವೈವಾ ಕೂಡ ಆಯ್ತು. ಇವತ್ತು ನಾನು ನನ್ನ ಡಾಕ್ಟರೇಟ್ ಪದವಿಯನ್ನು ಹೆಮ್ಮೆಯಿಂದ ಸ್ವೀಕರಿಸಿದ್ದೇನೆ. ಇದು ತುಂಬಾ ವಿಶೇಷವಾದದ್ದು. ಯಾಕೆಂದರೆ ಈ ಪಿಎಚ್‌ಡಿ ಪಯಣ ಅಷ್ಟು ಸುಲಭ ಆಗಿರಲಿಲ್ಲ ಎಂದು ಹೇಳಿದ್ದಾರೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023