'ಗಂಡಸರು ಕುಡುಕರು ಎಂದ ಡಿಕೆಶಿ; ಎದ್ದುಬಿದ್ದು ರೊ ಚ್ಚಿಗೆದ್ದ ರಂಗಣ್ಣ

 | 
Yu

ಪುರುಷರ ಮೇಲೆ ನಮಗೆ ನಂಬಿಕೆ ಇಲ್ಲ.  ಅವರು ಕುಡಿದು ಹಣ ಖಾಲಿ ಮಾಡುತ್ತಾರೆ. ಹಾಗಾಗಿ ಹೆಣ್ಣು ಮಕ್ಕಳ ಖಾತೆಗೆ ನೇರವಾಗಿ ಹಣ ಹಾಕುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​ ಹೇಳಿದರು.ಕೆಪಿಸಿಸಿ ಕಚೇರಿ ಸಮೀಪದ ಭಾರತ್​ ಜೋಡೋ ಸಭಾಂಗಣದಲ್ಲಿ ಶನಿವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರೊಂದಿಗಿನ ಸಭೆ ಉದ್ದೇಶಿಸಿ ಅವರು ಮಾತನಾಡಿದ್ದಾರೆ.

ಹೆಣ್ಣುಮಕ್ಕಳ ಮೇಲೆ ನಮಗೆ ನಂಬಿಕೆ ಇದೆ. ಹೆಣ್ಣು ಕುಟುಂಬದ ಕಣ್ಣು. ಹಾಗಾಗಿ, ಅವರ ಖಾತೆಗೆ ಹಣ ಹಾಕುತ್ತಿದ್ದೇವೆ. ನಿಮ್ಮ ಕೈಗೆ ಹಣ ಕೊಟ್ಟರೆ ವೈನ್‌ಶಾಪ್‌ಗೆ ಹೋಗಿಬಿಡ್ತೀರಿ. ಮಹಿಳೆಯರಿಗೆ ಹಣ ಕೊಟ್ಟರೆ, ಮಕ್ಕಳ ಸ್ಕೂಲ್​​ ಫೀಸ್​​ ಕಟ್ಟಲು ಉಪಯೋಗವಾಗುತ್ತದೆ. ಗ್ಯಾಸ್​ ಹಣ ಕಟ್ಟಲು ಬಳಸುತ್ತಾರೆ. ಆಸ್ಪತ್ರೆ ಮತ್ತಿತರ ಖರ್ಚು-ವೆಚ್ಚಗಳಿಗೆ ವ್ಯಯವಾಗುತ್ತದೆ. 

ಒಟ್ಟಾರೆ ಹೀಗೆ ಕುಟುಂಬ ನಿರ್ವಹಣೆಗೆ ನೆರವಾಗುತ್ತದೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಕೂಲಗಳ ಬಗ್ಗೆ ಸಮೀಕ್ಷೆಯನ್ನೂ ನಡೆಸಲಾಗುತ್ತಿದೆ ಎಂದಿದ್ದಾರೆ.ನಮಗೆ ಪುರುಷರ ಮೇಲೆ ನಂಬಿಕೆ ಇಲ್ಲದ ಕಾರಣ ಸರ್ಕಾರದ ಗ್ಯಾರಂಟಿ ಯೋಜನೆಯಡಿ ಬರುವ ಹಣವನ್ನು ಮಹಿಳೆಯರ ಖಾತೆಗಳಿಗೆ ಜಮೆ ಮಾಡುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​ ವ್ಯಂಗ್ಯವಾಡಿದ್ದಾರೆ.

ಇದಕ್ಕೆ ಸಿಡಿದೆದ್ದ ಪುರುಷರು ಹಾಗಿದ್ದರೆ ನಮ್ಮ ಮತ ಕೇಳಬೇಡಿ ನಾವು ಪುರುಷರು , ಕುಡುಕರು , ಕೆಟ್ಟವರು, ಮತ್ತೆ ನೀವೇನು? ಮಹಿಳೆಯರ? ಇಲ್ಲ ಪುರುಷರ ಸಾಲಿಗೆ ಸೇರಿದವರ ಎಂದು ವ್ಯಂಗ್ಯವಾಗಿಯೆ ಕೇಳಿದ್ದಾರೆ. ಇನ್ನು ರಂಗಣ್ಣ ಕೂಡ ಇದಕ್ಕೆ ಸಿಟ್ಟಿಗೆದ್ದು ಎನ್ ಅಂತ ಮಾತಾಡ್ತೀರಿ ಎಂದಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಏನೇನೋ ಹೇಳಿಕೆ ನೀಡಿರುವ ಶಿವಕುಮಾರ್ ಈಗ ಸೋರಿ ಕೇಳ್ತಾರಾ ನೋಡಬೇಕಿದೆ.