ಬಿಗ್ ಬಾಸ್ ಬಾತ್ ರೂಮ್ ಒಳಗಡೆ ಮೈಕ್ರೋಫೋನ್ ಅಳವಡಿಕೆ, ಸ್ಪರ್ಧಿಗಳು ಹೊರಬಂದ ಬಳಿಕ ಅಡಿಯೋ ಲೀ.ಕ್

 | 
Hs

ಬಿಗ್ ಬಾಸ್ ಮನೆಯಲ್ಲಿ ಮೈಕ್ ಬಳಸದೇ ಇರುವ ಜಾಗ ಎಂದರೆ ಅದು ಬಾತ್​ರೂಂ ಮಾತ್ರ. ಅಲ್ಲಿ ಮೈಕ್ ಧರಿಸಲೇಬೇಕು ಎಂಬ ನಿಯಮ ಇಲ್ಲ. ಹೀಗಾಗಿ, ಸ್ಪರ್ಧಿಗಳು ಕೆಲವೊಮ್ಮೆ ಅಲ್ಲಿ ಹೋಗಿ ಮಾತನಾಡಿದ್ದಿದೆ. ಅಕ್ಕ-ಪಕ್ಕದ ಬಾತ್​ರೂಂನಲ್ಲಿ ಕುಳಿತು ಚರ್ಚೆ ಮಾಡಿದ್ದಿದೆ. ಈ ವಿಚಾರವನ್ನು ಅರಿತ ಹಿಂದಿ ಬಿಗ್ ಬಾಸ್ ಮಂದಿ ಬಾತ್​ರೂಂನಲ್ಲೂ ಮೈಕ್ ಇಟ್ಟಿದ್ದರು. ಈ ವಿಚಾರವನ್ನು ಬಿಗ್ ಬಾಸ್ ಹಿಂದಿ ಸೀಸನ್ 17 ಸ್ಪರ್ಧಿ ಇಶಾ ಮಾಳವಿಯಾ ಹೇಳಿದ್ದಾರೆ.

ಭಾರ್ತಿ ಸಿಂಗ್ ಹಾಗೂ ಹರ್ಷ ಜೊತೆ ಇಶಾ ಮಾತನಾಡಿದ್ದಾರೆ. ಈ ವೇಳೆ ಅವರು ಹಲವು ವಿಚಾರ ಹಂಚಿಕೊಂಡಿದ್ದಾರೆ. ‘ವೀಕೆಂಡ್ ಕಾ ವಾರ್’ನಲ್ಲಿ ಸಲ್ಮಾನ್ ಖಾನ್ ಅವರು ಇಶಾಗೆ ಕ್ಲಾಸ್​ ತೆಗೆದುಕೊಂಡಿದ್ದರು. ಈ ವೇಳೆ ಅವರು ಹೋಗಿ ಬಾತ್​ರೂಂನಲ್ಲಿ ಅತ್ತಿದ್ದರು. ಬಾತ್​ರೂಂನಲ್ಲಿ ಮೈಕ್ರೋಫೋನ್ ಇತ್ತು ಅನ್ನೋ ವಿಚಾರವನ್ನು ಅವರು ರಿವೀಲ್ ಮಾಡಿದ್ದಾರೆ.

ಯಾರಾದರೂ ಬಾತ್​​ರೂಂಗೆ ಮೈಕ್ ಧರಿಸದೇ ಹೋದರೆ ಅದು ಹೆಚ್ಚು ವ್ಯತ್ಯಾಸ ಎನಿಸುವುದಿಲ್ಲ. ಏಕೆಂದರೆ ಬಾತ್​​ರೂಂನ ಛಾವಣಿಯಲ್ಲೇ ಮೈಕ್ರೋಫೋನ್​ಗಳನ್ನು ಇಡಲಾಗಿದೆ. ನೀವು ಬಾತ್​ರೂಂನಲ್ಲಿ ಮಾತನಾಡಿದರೆ ಅಥವಾ ಅತ್ತರೆ ಅದನ್ನು ಕ್ಯಾಪ್ಚರ್ ಮಾಡಲಾಗುತ್ತಿತ್ತು ಎಂದಿದ್ದಾರೆ ಇಶಾ. ಟಾಪ್​ ಐದರಲ್ಲಿ ತಮ್ಮ ಹೆಸರೂ ಇರಬಹುದು ಎಂದು ಇಶಾ ಭಾವಿಸಿದ್ದರು. ಆದರೆ, ಹಾಗಾಗಿಲ್ಲ. ಇದು ಅವರಿಗೆ ಬೇಸರ ತರಿಸಿದೆ.

ಬಿಗ್ ಬಾಸ್ ಹಿಂದಿ ಸೀಸನ್ 17 ಫಿನಾಲೆಯಲ್ಲಿ ಮುನಾವರ್ ಫಾರೂಖಿ, ಅಭಿಷೇಕ್ ಕುಮಾರ್, ಮನ್ನಾರಾ ಚೋಪ್ರಾ, ಅಂಕಿತಾ ಲೋಖಂಡೆ, ಅರುಣ್ ಮಾಶೆಟ್ಟಿ ಇದ್ದರು. ಈ ಪೈಕಿ ಮುನಾವರ್ ಅವರು ಕಪ್ ಗೆದ್ದಿದ್ದಾರೆ. ಮುನಾವರ್ ರಿಲೇಶನ್​ಶಿಪ್ ವಿಚಾರ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಚರ್ಚೆ ಆಗಿತ್ತು. ಆದರೆ, ಈ ಬಗ್ಗೆ ಅಭಿಮಾನಿಗಳು ಹೆಚ್ಚು ಗಮನ ಹರಿಸಿಲ್ಲ. ಈ ಬಗ್ಗೆ ಇಶಾ ಮಾತನಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.