ಬಿಗ್ ಬಾಸ್ ಮನೆಯಲ್ಲಿ ಮೊಬೈಲ್ ಚಾರ್ಜರ್, ಇದು ಯಾವ ರಿಯಾಲಿಟಿ ಶೋ ಎಂದ ಪ್ರೇಕ್ಷಕರು

 | 
Hhh

ಯಾವುದೇ ಭಾಷೆಯ ಬಿಗ್ ಬಾಸ್ ಎಪಿಸೋಡ್ ತಗೊಳ್ಳಿ, ಮೊಬೈಲ್ ಫೋನ್ ಬಳಕೆಗೆ ಅವಕಾಶವೇ ಇರೋದಿಲ್ಲ. ಕಳೆದ ಬಾರಿ ಹಿಂದಿ ಬಿಗ್ ಬಾಸ್ ಒಟಿಟಿ ಸೀಸನ್ 2ನಲ್ಲಿ ಪೂಜಾ ಭಟ್ ಅವರು ಮೊಬೈಲ್ ಫೋನ್ ಹಿಡಿದುಕೊಂಡ ಫೋಟೋ ವೈರಲ್ ಆಗಿತ್ತು. ಈಗ ಬಿಗ್ ಬಾಸ್ ಕನ್ನಡ ಸೀಸನ್ 10 ಶೋನಲ್ಲಿ ಮೊಬೈಲ್ ಚಾರ್ಜರ್ ವೀಕ್ಷಕರಿಗೆ ಕಂಡಿದೆ. 

ಇದು ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗ್ತಿದೆ. ಅಷ್ಟಕ್ಕೂ ಹೊರಗಡೆ ವಿಷಯ ಯಾವುದು ಬಿಗ್ ಬಾಸ್ ಸ್ಪರ್ಧಿಗಳಿಗೆ ಗೊತ್ತಾಗಬಾರದು, ಸಮಯ ಎಷ್ಟು ಎನ್ನೋದು ಕೂಡ ಗೊತ್ತಾಗಬಾರದು. ಬಿಗ್ ಬಾಸ್ ಎನ್ನುವ ಅರಮನೆಯಲ್ಲಿ ಹೊರಗಡೆ ಜಗತ್ತಿನ ಸಂಪರ್ಕವೇ ಇಲ್ಲದೆ ಸ್ಪರ್ಧಿಗಳು ಸೆರೆಮನೆ ವಾಸ ಅನುಭವಿಸಬೇಕು ಎನ್ನೋದು ಬಿಗ್ ಬಾಸ್ ಶೋನ ನಿಯಮ. 

ಆದರೆ ಇತ್ತೀಚೆಗೆ ಕೆಲ ಬಿಗ್ ಬಾಸ್ ಶೋಗಳಲ್ಲಿ ಸ್ಪರ್ಧಿಗಳು ಮೊಬೈಲ್ ಬಳಕೆ ಮಾಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈಗ ಪೌಡರ್ ರೂಮ್‌ನಲ್ಲಿ ಮೊಬೈಲ್ ಚಾರ್ಜರ್ ಕಾಣಿಸುತ್ತಿದೆ. ಅದು ಮೇಲ್ನೋಟಕ್ಕೆ ಒನ್‌ಪ್ಲಸ್ ಅಥವಾ Oppo ಮೊಬೈಲ್ ಚಾರ್ಜರ್ ನೋಡಿದ ಹಾಗೆ ಆಗುತ್ತದೆ. ಅದು ಮೊಬೈಲ್ ಚಾರ್ಜರ್ ಅಥವಾ ಟ್ರಿಮ್ಮರ್, ಸ್ಟ್ರೇಟನರ್ ಚಾರ್ಜರ್? ಅಂತ ವೀಕ್ಷಕರು ಅನುಮಾನ ಪಡುತ್ತಿದ್ದಾರೆ. 

ಇದಕ್ಕೆ ಸ್ವತಃ ಬಿಗ್ ಬಾಸ್ ಸ್ಪರ್ಧಿಗಳು ಅಥವಾ ಬಿಗ್ ಬಾಸ್ ಆಯೋಜಕರು ಉತ್ತರ ನೀಡಬೇಕಿದೆ. ಒಟ್ಟಿನಲ್ಲಿ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು, ವೀಕ್ಷಕರಂತೂ ಫುಲ್ ಗೊಂದಲಕ್ಕೀಡಾಗಿದ್ದಾರೆ. ಅಂದಹಾಗೆ ಈ ಬಾರಿ ಬೆಂಗಳೂರಿನ ಹೊರವಲಯದಲ್ಲಿ ಬಿಗ್ ಬಾಸ್ ಮನೆ ನಿರ್ಮಾಣ ಮಾಡಲಾಗಿದೆ. ಎಲ್ಲ ಭಾಷೆಯ ಮನೆಗಳಿಗಿಂತ ಈ ಮನೆ ದೊಡ್ಡದಾಗಿದೆ. 

ಈ ಬಾರಿ ಹ್ಯಾಪಿ ಬಿಗ್ ಬಾಸ್ ಅಂತ ಆಯೋಜಕರು ಮೊದಲೇ ಹೇಳಿದ್ದಾರೆ. ಆದರೆ ಬಿಗ್ ಬಾಸ್ ಶೋನಲ್ಲಿ ಈ ಬಾರಿ ಜಗಳ, ವಾದ-ವಿವಾದಗಳೇ ಜಾಸ್ತಿ ಆಗಿವೆ, ಕಾಂಟ್ರವರ್ಸಿಗಳು ಹೆಚ್ಚಾಗಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.