'ಮು.ಸ್ಲಿಮರ ಕಿತಾಪತಿ ನೋಡಿ ರೊಚ್ಚಿಗೆದ್ದ ಮೋದಿಜಿ; ಒಮ್ಮೆಲೆ ಸಿಡಿದೆದ್ದ ರಾಹುಲ್ ಗಾಂಧಿ

 | 
Ghu

ಗೊತ್ತೋ ಗೊತ್ತಿಲ್ಲದೆ ಹೇಳಿದ ಆನೇಕ ಹೇಳಿಕೆಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಪ್ರತಿ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗುತ್ತದೆ. ಹೌದು ಸಂಪತ್ತಿನ ಹಂಚಿಕೆಗೆ ಸಂಬಂಧಿಸಿದ ತಮ್ಮ ಹೇಳಿಕೆ ಬಗ್ಗೆ ವಿರೋಧ ಪಕ್ಷಗಳ ಖಂಡನೆ, ಟೀಕೆ, ದೂರುಗಳ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರು ತಾವು ಮಾಡಿದ್ದ ಆರೋಪವನ್ನು ಪುನರುಚ್ಚರಿಸಿದ್ದಾರೆ. 

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಸಂಪತ್ತನ್ನು ಮರುಹಂಚಿಕೆ ಮಾಡುತ್ತದೆ, ಮಂಗಳಸೂತ್ರವನ್ನೂ ಒಳಗೊಂಡಂತೆ ಜನರ ಚಿನ್ನವನ್ನು ಕಸಿದುಕೊಳ್ಳುತ್ತದೆ ಎಂದು ಸೋಮವಾರವೂ ಹೇಳಿಕೆ ನೀಡಿದರು. ಆದರೆ, ಸಂಪತ್ತು ಮುಸ್ಲಿಮರಿಗೆ ಹೋಗುತ್ತದೆ ಎನ್ನುವುದನ್ನು ಈ ಬಾರಿ ಅವರು ಪ್ರಸ್ತಾಪಿಸಲಿಲ್ಲ.

ರಾಜಸ್ಥಾನದ ಚುನಾವಣಾ ರ್‍ಯಾಲಿಯಲ್ಲಿ ಭಾನುವಾರ ಮಾತನಾಡಿದ್ದ ಮೋದಿ, ಕಾಂಗ್ರೆಸ್ ಪಕ್ಷವು ಜನರ ಕಷ್ಟಎದ್ದದ ದುಡಿಮೆಯ ಫಲವನ್ನು ನುಸುಳುಕೋರರಿಗೆ ಮತ್ತು ಹೆಚ್ಚು ಮಕ್ಕಳು ಇರುವವರಿಗೆ ನೀಡಲು ಯೋಜಿಸಿದೆ ಎಂದು ಆರೋಪಿಸಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಅವರ 2006ರ ಹೇಳಿಕೆಯೊಂದನ್ನು ಪ್ರಸ್ತಾಪಿಸಿದ್ದರು.

ಮೋದಿ ಹೇಳಿಕೆಯನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿದ್ದವು. ಪ್ರಧಾನಿ ಮೋದಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ನಿಯೋಗ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಬಿಜೆಪಿಯು ಪ್ರಧಾನಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಅವರು ಜನರ ಮನಸ್ಸಿನಲ್ಲಿರುವುದನ್ನೇ ಹೇಳಿದ್ದಾರೆ ಎಂದಿದೆ.

ಮುಸ್ಲಿಂ ಬಾಹುಳ್ಯದ ಪಶ್ಚಿಮ ಉತ್ತರ ಪ್ರದೇಶದ ಅಲೀಗಢದಲ್ಲಿ ಸೋಮವಾರ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಪಕ್ಷ ಅಧಿಕಾರಕ್ಕೆ ಬಂದರೆ ಯಾರು ಎಷ್ಟು ದುಡಿಯುತ್ತಾರೆ, ಎಷ್ಟು ಸಂಪತ್ತು ಹೊಂದಿದ್ದಾರೆ ಎನ್ನುವುದನ್ನು ತನಿಖೆ ಮಾಡಿಸುತ್ತೇವೆ ಎಂದು ಕಾಂಗ್ರೆಸ್ ಶಹಜಾದೆ ಹೇಳುತ್ತಾರೆ. 

ಅದಷ್ಟೇ ಅಲ್ಲ, ಸರ್ಕಾರವು ಸಂಪತ್ತನ್ನು ವಶಪಡಿಸಿಕೊಂಡು, ಮರುಹಂಚಿಕೆ ಮಾಡುತ್ತದೆ ಎಂದೂ ಹೇಳಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ಅವರು ಇದನ್ನೇ ಹೇಳಿದ್ದಾರೆ ಎಂದು ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.