2024ರ ಚು ನಾವಣೆಗೆ ಮೋದಿ ಮಹಾ ಅ.ಸ್ತ್ರ; ಈಕೆಯ ಮುಂದೆ ಯಾವ ವ್ಯಕ್ತಿಗೂ ಗೆಲ್ಲಲು ಸಾಧ್ಯವಿಲ್ಲ
ಈ ಸಲದ ಲೋಕಸಭಾ ಚುನಾವಣೆಯಲ್ಲಿ 370ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿರುವ ಬಿಜೆಪಿ ಶೂನ್ಯ ದಾಖಲೆ ಇರುವ ಕ್ಷೇತ್ರಗಳಲ್ಲಿ ಖಾತೆ ತೆರೆಯಲು ಶತ ಪ್ರಯತ್ನ ನಡೆಸುತ್ತಿದೆ. ಅಂತಹ ಕ್ಷೇತ್ರಗಳಲ್ಲಿ ಹೈದರಾಬಾದ್ ಕೂಡ ಒಂದಾಗಿದ್ದು, ಕಳೆದ 40 ವರ್ಷಗಳಿಂದ ಓವೈಸಿ ಮನೆತನದ ಭದ್ರಕೋಟೆಯಾಗಿದೆ. ಆ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಎಐಎಂಐಎಮ್‌ನ ಹಾಲಿ ಸಂಸದ ಅಸಾದುದ್ದೀನ್ ಓವೈಸಿ ಎದುರು ಮಹಿಳೆಯನ್ನು ಕಣಕ್ಕಿಳಿಸಿದೆ.
ಬಿಜೆಪಿ ಶನಿವಾರ ಲೋಕಸಭಾ ಚುನಾವಣೆಗೆ ತನ್ನ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು. ಅಚ್ಚರಿ ಎಂಬಂತೆ ಹೈದರಾಬಾದ್ ಕ್ಷೇತ್ರಕ್ಕೆ ಡಾ ಮಾಧವಿ ಲತಾ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಇದರೊಂದಿಗೆ ಬಿಜೆಪಿ ಎಲ್ಲೆಲ್ಲಿ ದುರ್ಬಲವಾಗಿದೆ, ಅಲ್ಲಿ ಪ್ರಯೋಗಕ್ಕೆ ಮುಂದಾಗಿರುವುದು ಸ್ಪಷ್ಟವಾಗಿದೆ. ಮುಸ್ಲಿಂ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಹಿಂದೂ ಮಹಿಳೆಯನ್ನು ಕಣಕ್ಕಿಳಿಸುವ ಮೂಲಕ ಓವೈಸಿಗೆ ಶಾಕ್ ನೀಡಲು ಬಿಜೆಪಿ ಮುಂದಾಗಿದೆ.
ಟಿಕೆಟ್ ಘೋಷಣೆ ಬೆನ್ನಲ್ಲಿಯೇ ಮಾಧವಿ ಲತಾ ಅವರು ಧರ್ಮೋ ರಕ್ಷತಿ ರಕ್ಷಿತಃ ಎಂದು ಹೇಳಿದ್ದಾರೆ. ಆದರೆ, ಹೈದರಾಬಾದ್‌ನಲ್ಲಿ 1984ರಿಂದ ಓವೈಸಿಯ ಮನೆತನ ಗೆಲ್ಲುತ್ತಾ ಬಂದಿದೆ. 1994ರಲ್ಲಿ ಓವೈಸಿಯ ತಂದೆ ಸುಲ್ತಾನ್ ಸಲಾವುದ್ದೀನ್ ಓವೈಸಿ ಗೆದ್ದಿದ್ದರು. ಅವರು ಕೂಡ ಸತತವಾಗಿ ಗೆಲುವನ್ನು ಸಾಧಿಸಿದ್ದರು. ಅದಾದ ಬಳಿಕ 2004ರಿಂದ ಅಸಾದುದ್ದೀನ್ ಓವೈಸಿ ಹೈದರಾಬಾದ್‌ನಲ್ಲಿ ಗೆಲ್ಲುತ್ತಾ ಬಂದಿದ್ದಾರೆ.
ಇಲ್ಲಿ ಬಿಜೆಪಿಗೆ ಹೇಳಿಕೊಳ್ಳುವ ನೆಲೆಯಿಲ್ಲ. 2019ರಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ್ ರಾವ್ ಹಾಗೂ ಓವೈಸಿ ನಡುವಿನ ಅಂತರ ಮೂರು ಲಕ್ಷ ಮತಗಳಿಗಿಂತ ಹೆಚ್ಚು. ಇಂತಹ ಕ್ಷೇತ್ರದಲ್ಲಿ ಬಿಜೆಪಿ ಪ್ರಯೋಗಕ್ಕೆ ಮುಂದಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಹೈದರಾಬಾದ್‌ನಲ್ಲಿ ಮಾಧವಿ ಲತಾ ಅವರು ನಿರಂತರ ಸಂಪರ್ಕ ಹೊಂದಿದ್ದು, ಹಿಂದೂ ಫೈರ್ ಬ್ರಾಂಡ್ ನಾಯಕಿ ಕೂಡ ಆಗಿದ್ದಾರೆ.
ಓವೈಸಿ ವಿರುದ್ಧ ಸತತ ಹೋರಾಟ ಸಂಘಟಿಸುತ್ತಿರುವ ಮಾಧವಿ ಲತಾ ಅವರು ಈ ಬಾರಿ ಕಮಾಲ್ ಮಾಡಬಹುದು ಎನ್ನುವ ನಿರೀಕ್ಷೆಯನ್ನು ಬಿಜೆಪಿ ಹೊಂದಿದ್ದು, ಹೈದರಾಬಾದ್ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಂದ ಇರುವ ಓವೈಸಿ ಭದ್ರಕೋಟೆಯನ್ನು ಪುಡಿಗೊಳಿಸುತ್ತಾ ಕಾದು ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.