ಸಿನಿಮಾ‌ ಮಾಡುವುದಾಗಿ ಕರೆಸಿಕೊಂಡು ನಿರಂತರ ಅ ತ್ಯಾಚಾರ, ಅಂದರ್ ಆದ ಮೊನಾಲಿಸಾ ಡೈರೆಕ್ಟರ್

 | 
Kkk
ಅತ್ಯಾಚಾರ ಮತ್ತು ಬೆದರಿಕೆ ಆರೋಪದ ಮೇಲೆ, ಮಹಾಕುಂಭ ಮೇಳದಲ್ಲಿ ಪಾಪ್ಯುಲರ್‌ ಆಗಿದ್ದ ಮೋನಾಲಿಸಾಗೆ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದ್ದ ನಿರ್ದೇಶಕ ಸನೋಜ್ ಮಿಶ್ರಾರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಮೊನಾಲಿಸಾ ಭೊನ್ಸಾಲೆ ಎಲ್ಲರ ಮನ ಕದ್ದಿದ್ದಳು. ಮಾಲೆ ಮಾರುವ ಇಂದೋರ್ ಮೂಲದ ಮೊನಾಲಿಸಾ, ಕಣ್ಣಿನಿಂದಲೇ ನೆಟ್ಟಿಗರನ್ನು ಬೆರೆಗುಗೊಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೋರಾತ್ರಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು.
 ಈಕೆಯ ಅಂದ ನೋಡಿ ಹಲವರು ಸಿನಿಮಾದಲ್ಲಿ ನಟಿಸುವಂತೆ ಆಫರ್‌ ನೀಡಿದ್ದರು.ನೈಸರ್ಗಿಕ ಸೌಂದರ್ಯಕ್ಕೆ ಜನರು ಮರುಳಾಗಿದ್ದರು. ಆ ನಂತರ ದಿ ಡೈರಿ ಆಫ್ ವೆಸ್ಟ್ ಬೆಂಗಾಲ್ ಖ್ಯಾತಿಯ ನಿರ್ದೇಶಕ ಸನೋಜ್ ಮಿಶ್ರಾ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ನೀಡಿದ್ದರು. ಮೊನಾಲಿಸಾ ಕುಟಂಬವನ್ನು ಭೇಟಿ ಮಾಡಿ ದಿ ಡೈರಿ ಆಫ್‌ ಮಣಿಪುರ್‌ ಚಿತ್ರದಲ್ಲಿ ನಟಿಸಲು ಮೊನಾಲಿಸಾ ಸಹಿ ಹಾಕಿಸಿಕೊಂಡಿದ್ದರು.
 ಶೂಟಿಂಗ್ ಕೂಡ ಶುರುವಾಗಿದೆ ಎಂಬ ಮಾಹಿತಿ ಕೆಲ ದಿನದ ಹಿಂದೆ ಹರಡಿತ್ತು. ಸದ್ಯದ ಸಂಗತಿಯೆಂದರೆ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಸನೋಜ್ ಮಿಶ್ರಾ ಅವರನ್ನು ದೆಹಲಿಯಲ್ಲಿ ಬಂಧಿಸಲಾಗಿದೆ.ಮೊನಾಲಿಸಾಗೆ ಸಿನಿಮಾ ಆಫರ್‌ ಕೊಡುವ ಮೂಲಕ ಸನೋಜ್ ಮಿಶ್ರಾ ಸುದ್ದಿಯಾಗಿದ್ದರು. ಇದೀಗ ಲೈಂಗಿಕ ದೌರ್ಜನ್ಯ ಆರೋಪದಡಿ ಜೈಲು ಸೇರಿದ್ದಾರೆ. ಮಿಶ್ರಾರಿಂದ ನಿರಂತರ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಸಂತ್ರಸ್ತೆಯೊಬ್ಬಳು ದೂರು ನೀಡಿದ್ದಳು.
2021 ಜೂನ್ 18 ರಂದು, ಮಿಶ್ರಾ ಅವಳನ್ನು ರೆಸಾರ್ಟ್‌ಗೆ ಕರೆದೊಯ್ದ, ಅಲ್ಲಿ ಮದ್ದು ಬರುವ ಜ್ಯೂಸ್‌ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಆಕೆಯ ದೂರಿನ ಪ್ರಕಾರ, ಆಕೆ ಪ್ರಜ್ಞಾವಸ್ಥೆಯಲ್ಲಿ ಇಲ್ಲದಿದ್ದಾಗ, ಸಂತ್ರಸ್ತೆಯ ಅಶ್ಲೀಲ ವೀಡಿಯೊ ರೆಕಾರ್ಡ್ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾಳೆ. 
ಜೊತೆ ತನಗೆ ಬೇಕಾದ ಸಮಯದಲ್ಲಿ ಸಹಕರಿಸದಿದ್ದರೆ ವಿಡಿಯೋ ರಿಲೀಸ್‌ ಮಾಡುವಂತೆ ಬೆದರಿಸಿದ್ದ ಎಂದು ಉಲ್ಲೇಖಿಸಲಾಗಿದೆ. ಹಲವು ಬಾರಿ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub