ಮುದ್ದಾಗಿ ಬೆಳೆಸಿದ ಸ್ವಂತ ಮಗನನ್ನೇ ಕೊ.ಲೆ ಮಾಡಿದ ತಾಯಿ, ನಿಜ ವಿಚಾರ ಕೇಳಿ ಬೆ ಚ್ಚಿಬಿದ್ದ ಅಧಿಕಾರಿಗಳು

 | 
ರ
ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ತಾಯಿ ಇರುವದಿಲ್ಲ ಎಂಬ ಮಾತನ್ನು ಕೇಳಿರುತ್ತೀರಿ. ಆದರೆ ಇದು ಮನ ಕಲಕುವ ಕಥೆ ಹೌದು ಮೇಲಿನ ಹೇಳಿಕೆಯನ್ನೇ ಸುಳ್ಳು ಮಾಡಿದ ಘಟನೆ. ಕೌಟುಂಬಿಕ ಕಲಹದ ಕಾರಣಕ್ಕೆ ತನ್ನದೇ ಮಗುವನ್ನು ಕೊಂದು ಬಳಿಕ ಸಿಕ್ಕಿಬಿದ್ದ ಮಹಿಳಾ ಉದ್ಯಮಿ, ಎಐ ಸ್ಟಾರ್ಟಪ್ ಕಂಪನಿ ಸಿಇಒ ಸುಚನಾ ಸೇಠ್, ಗಂಡನಿಂದ ಮಗು ಹಾಗೂ ಆಕೆಯ ನಿರ್ವಹಣೆಗೆ ಪ್ರತಿ ತಿಂಗಳು 2.5 ಲಕ್ಷ ಹಣ ವಸೂಲಿಗೆ ಬಯಸಿದ್ದರು ಎಂದು ತಿಳಿದು ಬಂದಿದೆ.  
ಕಳೆದ ಆಗಸ್ಟ್ನಲ್ಲಿ ಈ ಪಶ್ಚಿಮ ಬಂಗಾಳ ಮೂಲದ ಸುಚನಾ ಸೇಠ್ ಗಂಡ ಕೇರಳ ಮೂಲದ ವೆಂಕಟರಾಮನ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಕೇಸ್ ದಾಖಲಿಸಿ ಗಂಡನ ವಿರುದ್ಧ ತಡೆಯಾಜ್ಞೆ ತಂದಿದ್ದಳು.  ತನ್ನ ಹಾಗೂ ಮಗುವಿನ ಮೇಲೆ ಆತ ದೈಹಿಕವಾಗಿ ಹಲ್ಲೆ ನಡೆಸಿ ದೌರ್ಜನ್ಯವೆಸಗಿದ್ದಾನೆ ಎಂದು ದೂರಿದ್ದಳು. ಅಲ್ಲದೇ ತನ್ನ ಪತಿ ವೆಂಕಟರಾಮನ್ ವಾರ್ಷಿಕ ಆದಾಯವೇ ತಿಂಗಳಿಗೆ ಒಂದು ಕೋಟಿ ಮೇಲೆ ಇದೆ ಎಂದು ದೂರಿನಲ್ಲಿ ತಿಳಿಸಿದ್ದ ಆಕೆ ಬಳಿಕ ತನಗೆ ತಿಂಗಳಿಗೆ ಆತ ನಿರ್ವಹಣಾ ವೆಚ್ಚವಾಗಿ 2.50 ಲಕ್ಷ ನೀಡಬೇಕು ಎಂದು ಬಯಸಿದ್ದಳು ಎಂದು ಕೋರ್ಟ್ ದಾಖಲೆಗಳಲ್ಲಿದೆ. 
ಆದರೆ ಇದಾದ ನಂತರ ಕಳೆದ ವರ್ಷದ ಸೆಪ್ಟೆಂಬರ್‌ನಿಂದ ಮಧ್ಯಂತರ ನಿರ್ವಹಣೆಗಾಗಿ ಪ್ರತಿ ತಿಂಗಳು 20 ಸಾವಿರ ರೂಪಾಯಿ ನೀಡಬೇಕು ಎಂದು ಆತನಿಗೆ ಕೋರ್ಟ್ ತಿಳಿಸಿತ್ತು. ಇದರ ಜೊತೆಗೆ  ತಂದೆಗೆ ಮಗುವನ್ನು ವಾರದಲ್ಲಿ ಒಮ್ಮೆ ಭಾನುವಾರ ಮಗುವನ್ನು ಭೇಟಿ ಮಾಡುವ ಹಕ್ಕನ್ನು ಕೂಡ ನೀಡಲಾಗಿತ್ತು.  ಆದರೆ ಇದರಿಂದ ಕೊಲೆಗಾತಿ ಸುಚನಾ ಸೇಠ್ ಅಸಮಾಧಾನಗೊಂಡಿದ್ದಳು. ಹಾಗಾಗಿ ಮಗುವನ್ನೇ ಕೊಂದಿದ್ದಾಳೆ.
ಸುಚನಾ ಸೇಠ್ ಅವರು ಗೋವಾಗೆ ಹೋಗಿ ಹೋಟೆಲೊಂದರಲ್ಲಿ ತಾನು ಹೆತ್ತ 4 ವರ್ಷದ ಮಗುವನ್ನೇ ಕೊಲೆಗೈದು ಬೆಂಗಳೂರಿಗೆ ಮೃತದೇಹ ತರುವಾಗ ಸಿಕ್ಕಿಬಿದ್ದಿದ್ದು, ಈತ ಸ್ವತಃ ತಾನೇ ಮಗುವಿನ ಕೊಲೆ ಬಗ್ಗೆ ಇಂಚಿಂಚು ಮಾಹಿತಿ ನೀಡಿದ್ದಾರೆ. ಗೋವಾ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ. ನ್ಯಾಯಾಲಯದ ಆದೇಶದಂತೆ ಮಗುವನ್ನು ವೆಂಕಟರಮಣನಿಗೆ ತೋರಿಸಲು ಸುತಾರಾಂ ಇಷ್ಟವಿರಲಿಲ್ಲ. ನನ್ನ ಮಗು ಕಂಡರೆ ನನಗೆ ಬಹಳ ಪ್ರೀತಿಯಿತ್ತು. ನಾನು ಇಷ್ಟು ಪ್ರೀತಿಸುವ ಮಗುವನ್ನು ನಾನು ದ್ವೇಷ ಮಾಡುವ ವೆಂಕಟರಮಣಿಗೆ ತೋರಿಸಲು ಮನಸ್ಸು ಒಪ್ಪುತ್ತಿರಲಿಲ್ಲ. 
ಹೀಗಾಗಿ ನಾನು ಭಾನುವಾರ ಗಂಡ ಕರೆ ಮಾಡುವ ವೇಳೆಗೆ ಮಗುವಿನ  ಪ್ರಜ್ಞೆ ತಪ್ಪಿಸಲು ದಿಂಬಿನಿಂದ ಒತ್ತಿ ಹಿಡಿದೆ. ಆಗ, ಮಗು ಪ್ರಜ್ಞೆ ತಪ್ಪಿದೆ ಎಂದುಕೊಂಡಿದ್ದೆನು. ಆದರೆ, ದುರಾದೃಷ್ಟವಶಾತ್ ಮಗು ಸಾವನ್ನಪ್ಪಿತ್ತು. ನಾನು ನನ್ನ  ಕೈಯಾರೆ ಹೆತ್ತ ಮಗುವನ್ನು ಕೊಂದುಬಿಟ್ಟೆನಲ್ಲಾ ಎಂಬ ನೋವಿನಲ್ಲಿ ನಾನು ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಕೈ ಕೊಯ್ದುಕೊಂಡೆನು. ಆಗ ರಕ್ತಸ್ರಾವ ಉಂಟಾಗುತ್ತಿದ್ದಾಗ ನೋವು ಹೆಚ್ಚಾಗಿದ್ದರಿಂದ ನಾನು ಕೈಗೆ ಬ್ಯಾಂಡೇಜ್‌ ಮಾಡಿಕೊಂಡು ಸಾವಿನಿಂದ ಪಾರಾದೆನು. 
ನಂತರ ಗಾಬರಿಯಲ್ಲಿ ಏನು ಮಾಡಬೇಕೆಂದು ತಿಳಿಯದೇ ಟ್ಯಾಕ್ಸಿ ಮಾಡಿಸಿಕೊಂಡು ಬೆಂಗಳೂರಿಗೆ ಬರಲು ತೀರ್ಮಾನಿಸಿದ್ದೆನು. ಹೀಗಾಗಿ, ಮೃತ ಮಗುವಿನ ದೇಹವನ್ನು ಸೂಟ್‌ಕೇಸ್‌ನಲ್ಲಿ ಹಾಕಿಕೊಂಡು ಅಲ್ಲಿಂದ ಪರಾರಿ ಆಗಲಿ ಯತ್ನಿಸಿದೆ ಎಂದು ಗೋವಾ ಪೊಲೀಸರ ಮುಂದೆ ಸುಚನಾ ಸೇಠ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾಳೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.