ಮುರುಘಾಶ್ರೀ ರಿಲೀಸ್, ಮುಗುಳ್ನಗುತ್ತಾ ಮಾಧ್ಯಮಗಳಿಗೆ ಫಸ್ಟ್ ರಿಯಾಕ್ಷನ್

 | 
He
 ಪೋಕ್ಸೋ ಪ್ರಕರಣದಲ್ಲಿ 2 ವರ್ಷಗಳ ಜೈಲುವಾಸದ ಬಳಿಕ ಮುರುಘಾ ಶ್ರೀಗಳು ಇದೀಗ ಬಿಡುಗಡೆಯಾಗಿದ್ದಾರೆ. ಜೈಲಿನಿಂದ ನಗುನಗುತ್ತಲೇ ಹೊರಬಂದ ಮುರುಘಾ ಶರಣರನ್ನು ಅವರ ಭಕ್ತರು ಅದ್ಧೂರಿಯಾಗಿ ಹೂಮಾಲೆ ಹಾಕಿ ಜಯಘೋಷದೊಂದಿಗೆ ಸ್ವಾಗತಿಸಿದ್ದಾರೆ. ಈ ವೇಳೆ ಅವರು ಏನು ಮಾತನಾಡಬಹುದೆಂಬ ಬಗ್ಗೆ ಎಲ್ಲರಿಗೂ ಕುತೂಹಲವಿತ್ತು. ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ನಗುಮುಖದಿಂದ ಉತ್ತರಿಸಿದ ಅವರು, ಜೈಲಲ್ಲಿನ ಅನುಭವ ಹೇಳಲು ಇದು ಸಕಾಲ ಅಲ್ಲ. 
ಬಸವೇಶ, ಮುರುಘೇಶನ ದಯೆಯಿಂದ ನಾವು ಹೊರ ಬಂದಿದ್ದೇವೆ. ನಾವೀಗ ದಾವಣಗೆರೆ ಶಿವಯೋಗ ಆಶ್ರಮಕ್ಕೆ ಹೊರಟಿದ್ದೇವೆ. ಮುಂದೆ ವಿಚಾರ ಮಾಡಿ ಹೆಜ್ಜೆ ಇಡೋಣ ಎಂದು ಜೈಲಿನಿಂದ ಬಿಡುಗಡೆಯಾಗಿರುವ ಚಿತ್ರದುರ್ಗಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಸ್ವಾಮೀಜಿ ಅವರು ತಿಳಿಸಿದ್ದಾರೆ.ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಮುರುಘಾ ಶರಣರ ಸಾಕ್ಷ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಚಿತ್ರದುರ್ಗ ಕೋರ್ಟ್ ಅವರ ಬಿಡುಗಡೆ ಆದೇಶ ಹೊರಡಿಸಿದೆ.
ಮುರುಘಾ ಶ್ರೀಗಳು ಜೈಲಿಂದ ಬಿಡುಗಡೆಯಾಗಿ ನಗುತ್ತಲೇ ಹೊರ ಬಂದರು. ಈ ವೇಳೆ ಭಕ್ತರು ಹಾರ ಹಾಕಿ ಜೈಕಾರ ಕೂಗಿದರು. ಬಸವಪ್ರಭು ಶ್ರೀಗಳು, ಮಠದ ಕಿರಿಯ ಸ್ವಾಮೀಜಿಗಳಾದ ಬಸವಾದಿತ್ಯ ದೇವರು ಕಾಲಿಗೆ ನಮಸ್ಕರಿಸಿದರು. ಜೈಲಿನಿಂದ ತೆರಳಿರುವ ಮುರುಘಾ ಶರಣರು ದಾವಣಗೆರೆಯ ಶಿವಯೋಗಾಶ್ರಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ.
ಮುರುಘಾ ಶ್ರೀಗಳ ವಿರುದ್ಧ ಮಠದ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ 2022ರ ಆಗಸ್ಟ್ 26ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗ 6 ದಿನಗಳ ಬಳಿಕ ಅಂದರೆ ಸೆಪ್ಟೆಂಬರ್ 2ರಂದು ಚಿತ್ರದುರ್ಗದ ಪೊಲೀಸರು ಮುರುಘಾ ಶರಣರನ್ನು ಬಂಧಿಸಿದ್ದರು.
ಪ್ರಕರಣದಲ್ಲಿ ಏ 1 ಆರೋಪಿ ಅಗಿರುವ ಮುರುಘಾ ಶ್ರೀಗಳಿಗ ಈ ಹಿಂದೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಕೋರ್ಟ್ ನಲ್ಲಿ ಸಾಕ್ಷ್ಯಗಳ ವಿಚಾರ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ ಮೇರೆಗೆ ಮತ್ತೆ ಮುರುಘಾ ಶ್ರೀಗಳನ್ನು, ವಿಚಾರಣೆ ಪೂರ್ಣಗೊಳಿಸುವವರೆಗೆ ಬಂಧಿಸಲಾಗಿತ್ತು. ಸೋಮವಾರ ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಳಿಸಿ ಬಿಡುಗಡೆ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಇದೀಗ ತಪ್ಪೇ ಮಾಡಿಲ್ಲದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.