ಕಾರ್ತಿಕ್ ಟ್ರೋಫಿ ಗೆದ್ದಿದ್ದಕ್ಕೆ ಮಾಧ್ಯಮದ ವೇದಿಕೆಯಲ್ಲಿ ಉರಿದು ಬಿದ್ದ ಸಂಗೀತ
ಬಿಗ್ ಬಾಸ್ ಮನೆಯಲ್ಲಿ ಭಾರೀ ಸದ್ದು ಮಾಡ್ತಿರುವ ಸಂಗೀತಾ ಶೃಂಗೇರಿ ನಿತ್ಯ ಒಂದಲ್ಲ ಒಂದು ಜಗಳ ಮಾಡಿಕೊಳ್ತಾರೆ. ಲವ್ ಬರ್ಡ್ಸ್ನಂತಿದ್ದ ಕಾರ್ತಿಕ್-ಸಂಗೀತಾ ಇದೀಗ ಹಾವು ಮುಗಿಸಿಯಂತೆ ಕಿತ್ತಾಡುತ್ತಿದ್ದಾರೆ. ಇದು ಬಿಗ್ ಬಾಸ್ ಹೊರಗೆ ಹೇಗೆಲ್ಲಾ ಪರಿಣಾಮ ಬೀರುತ್ತಿದೆ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗ್ತಾರೆ.
ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಆಟ-ಕಿತ್ತಾಟ ನೋಡಿದ ಫ್ಯಾನ್ಸ್ ಯಾಕೋ ಬೇಸರಗೊಂಡಂತೆ ಕಾಣ್ತಿದೆ. ಕಾರ್ತಿಕ್ಗೆ ತಲೆ ಬೋಳಿಸುವ ಚಾಲೆಂಜ್ ಕೊಟ್ಟ ಸಂಗೀತಾ ಶೃಂಗೇರಿ ಮೇಲೆ ನೆಟ್ಟಿಗರು ಕಿಡಿಕಾರಿದ್ರು.ತಲೆ ಬೋಳಿಸಬೇಕು ಹಸಿ ಮೆಣಸಿನಕಾಯಿ ತಿನ್ನಬೇಕು ಎಂದೆಲ್ಲಾ ಚಾಲೆಂಜ್ ನೀಡಿದ ಸಂಗೀತಾ ಅಂಡ್ ಟೀಮ್ಗೆ ಬಿಗ್ ಬಾಸ್ ಕೂಡ ಚಾಲೆಂಜ್ ನೀಡುವಾಗ ಮಾನವೀಯತೆ ಮೀರದಿರಲಿ ಎಂದ್ರು.
ಸಂಗೀತಾ ಶೃಂಗೇರಿ ಅಂಡ್ ಟೀಮ್ ಕಾರ್ತಿಕ್-ತುಕಾಲಿಗೆ ಕೂದಲು ತೆಗೆಯುವ ಚಾಲೆಂಜ್ ನೀಡಿದಕ್ಕೆ ಅನೇಕರು ಛೀಮಾರಿ ಹಾಕಿದ್ರು. ಇವರಿಗೆಲ್ಲಾ ಮನುಷ್ಯತ್ವ ಇಲ್ಲ ಎಂದು ಟೀಕಿಸಿದ್ರು. ಸಂಗೀತಾ ಬಿಗ್ ಬಾಸ್ ಮನೆಯ ಆಟ ಹೊರಗೆ ಭಾರೀ ಪರಿಣಾಮವನ್ನೇ ಬೀರಿದೆ. ಇನ್ಸ್ಟಾಗ್ರಾಮ್ನಲ್ಲಿ ಸಂಗೀತಾ ಶೃಂಗೇರಿ ಅವರಿಗೆ 11 ಸಾವಿರ ಫಾಲೋವರ್ಸ್ ಅನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಯಾವುದೇ ಸೆಲೆಬ್ರಿಟಿ ಬಿಗ್ ಬಾಸ್ಗೆ ಕಾಲಿಟ್ಟ ಬಳಿಕ ಅವರ ಜನಪ್ರಿಯತೆ ಹೆಚ್ಚುತ್ತದೆ. ಆದ್ರೆ ಸಂಗೀತಾ ಶೃಂಗೇರಿ ಅಭಿಮಾನಿಗಳನ್ನು ಕಳೆದುಕೊಂಡಿದ್ದಾರೆ. ಇದು ಅವರ ಸಿನಿಮಾ ಕೆರಿಯರ್ ಮೇಲೆ ಕೂಡ ಎಫೆಕ್ಟ್ ಆಗಲಿದೆ. ಸಂಗೀತಾ ಕಾರ್ತಿಕ್ ಹಾಗೂ ತುಕಾಲಿಗೆ ತಲೆ ಬೋಳಿಸುವ ಟಾಸ್ಕ್ ಕೊಡುವುದಕ್ಕೂ ಮೊದಲು ಸಂಗೀತಾಗೆ 4.49 ಲಕ್ಷ ಫಾಲೋವರ್ಸ್ ಇದ್ದರು.
ಅಂದರೆ 449 ಸಾವಿರ ಫಾಲೋವರ್ಸ್. ಈ ಎಪಿಸೋಡ್ ಬಳಿಕ ಈ ಸಂಖ್ಯೆ 4.38 ಲಕ್ಷಕ್ಕೆ ಇಳಿಕೆ ಆಗಿದೆ. ಅಂದರೆ, 438 ಸಾವಿರ ಫಾಲೋವರ್ಸ್ ಆಗಿದ್ದಾರೆ.ಕಾರ್ತಿಕ್ ಜೊತೆ ಕಿತ್ತಾಡಿಕೊಂಡಿದ್ದ ನಟಿ ಸಂಗೀತಾ ಬಿಗ್ ಬಾಸ್ ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿದ್ರು. ಬಳಿಕ ಮನೆಯವರೆಲ್ಲಾ ಆಕೆಯ ಮನವೊಲಿಕೆ ಮಾಡಿದ್ದಾರೆ.