ಸಂಗೀತ ಶೃಂಗೇರಿ ಮಾಡ್ರನ್ ಡ್ರೆಸ್; ಕನ್ನಡಿಗರು ಸಂಪೂರ್ಣ ಫಿದಾ

 | 
೬೭
ಸ್ಯಾಂಡಲ್ ವುಡ್ ನಟಿ, ಬಿಗ್ ಬಾಸ್ ಸೀಸನ್ 10 ಬೆಡಗಿ ಸಂಗೀತ ಶೃಂಗೇರಿ ಸೈಮಾ ನಾಮಿನೇಶನ್ ಪಾರ್ಟಿಗಾಗಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ಇವರ ಈ ಲುಕ್ ಸದ್ಯ ವೈರಲ್ ಆಗುತ್ತಿದೆ.  ಸ್ಯಾಂಡಲ್ ವುಡ್ ಬೆಡಗಿ ಸಂಗೀತ ಶೃಂಗೇರಿ, ಹೆಚ್ಚು ಜನಪ್ರಿಯತೆ ಗಳಿಸಿದ್ದು ಬಿಗ್ ಬಾಸ್ ಸೀಸನ್ 10 ರಿಂದ. ಬಿಗ್ ಬಾಸ್ ನಲ್ಲಿ ಎಲ್ಲಾ ಸ್ಪರ್ಧಿಗಳಿಗೆ ಟಫ್ ಕಾಂಪಿಟೀಶನ್ ನೀಡಿದ್ದ ಸಿಂಹಿಣಿ ಸಂಗೀತ ಟಾಪ್ 3ರಲ್ಲಿ ಸ್ಥಾನ ಪಡೆಯೋದರಲ್ಲಿ ಯಶಸ್ವಿಯಾಗಿದ್ದರು. 
ಬಿಗ್ ಬಾಸ್ ನಿಂದ ಹೊರ ಬಂದ ಮೇಲೂ ಸಂಗೀತಾ ಕ್ರೇಜ್ ಕಡಿಮೆಯಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಂತೂ ಸಂಗೀತಾ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ. ದಿನಕ್ಕೊಂದು ಫೋಟೊಸ್ ಪೋಸ್ಟ್ ಮಾಡುವ ಮೂಲಕ ಫ್ಯಾನ್ಸ್ ಜೊತೆ ಕನೆಕ್ಟ್ ಆಗಿರ್ತಾರೆ ಸಂಗೀತಾ.ಸಂಗೀತಾ ಶೃಂಗೇರಿ ಇತ್ತೀಚೆಗೆ ನಡೆ ಸೈಮಾ ನಾಮಿನೇಶನ್ ಪಾರ್ಟಿಗೆ ತೆರಳಿದ್ದು, ವಿಭಿನ್ನವಾದ ಲುಕ್ ನಲ್ಲಿ ಸಖತ್ ಸ್ಟೈಲ್ ಆಗಿ ಕಾಣಿಸ್ತಿದ್ದಾರೆ ಚಾರ್ಲಿ 777  ಬೆಡಗಿ.  ರರ
ನೆಚ್ಚಿನ ನಟಿಯ ಹೊಸ ಲುಕ್ ನೋಡಿ ಅಭಿಮಾನಿಗಳು ಮನಸೋತಿದ್ದಾರೆ. ಇತ್ತೀಚೆಗಷ್ಟೇ ನಟಿ ಕೈಯಲ್ಲಿ ತಾವರೆ ಹೂವು ಹಿಡಿದು, ಮಹಾದೇವಿ ಪಾರ್ವತಿಯ ಅವತಾರದಲ್ಲಿ ಫೋಟೊ ಶೂಟ್, ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದರು. ಇದೀಗ ಅದಕ್ಕೆ ತದ್ವಿರುದ್ಧವಾಗಿ ಡಿಫರೆಂಟ್ ಲುಕ್ ನಲ್ಲಿ ಸಂಗೀತಾ ಕಾಣಿಸಿಕೊಂಡಿದ್ದಾರೆ.  
ಸಂಗೀತಾ ಕೆಂಪು ಬಣ್ಣದ ವೆಲ್ವೆಟ್ ಬ್ಲೇಸರ್ ಡ್ರೆಸ್ , ಧರಿಸಿದ್ದು, ಸ್ಪಟಿಕದ ನೆಕ್ಲೆಸ್ ಮತ್ತು ಇಯರಿಂಗ್ ಮ್ಯಾಚ್ ಮಾಡಿದ್ದಾರೆ. ಜೊತೆಗೆ ಕೂದಲನ್ನ ಎತ್ತಿ ಕಟ್ಟಿ ಜಡೆಹಾಕಿ, ಅದರ ಮೇಲೆ ಸಿಲ್ವರ್ ಥ್ರೆಡ್ ನಿಂದ ಕಟ್ಟಿದ್ದು, ಕಾಲಿಗೆ ಬ್ಲ್ಯಾಕ್ ಸ್ಟಾಕಿಂಕ್ಸ್ ಧರಿಸಿದ್ದಾರೆ. ಈ ಲುಕ್ ತುಂಬಾನೆ ವಿಭಿನ್ನ ಜೊತೆಗೆ ಸ್ಟೈಲಿಶ್ ಆಗಿ ಕಾಣುತ್ತಿದೆ. ನಟಿ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡುತ್ತಿದ್ದಂತೆ, ಫ್ಯಾನ್ಸ್ ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.