ಹಿಂದೂ ಯುವಕನ ಜೊತೆ ಫೇಮಸ್ ಮುಸ್ಲಿಂ ನಟಿ ಮದುವೆ ನಿಶ್ಚಿತಾರ್ಥ? fact check
ಹುಡುಗರು ನಿಮ್ಮ ಹಾರ್ಟ್ ಗಟ್ಟಿ ಮಾಡ್ಕೊಂಡು ಓದಿ ಪ್ಲೀಸ್ ಈ ಫೋಟೋ ನೋಡಿ ಯಾರೂ ಕಣ್ಣೀರು ಹಾಕಬಾರದು! ಯಾಕೆಂದ್ರೆ ಅದೆಷ್ಟೋ ಪಡ್ಡೆ ಹೈಕಳ ನಿದ್ದೆ ಕದ್ದಿದ್ದ ಬಾಲಿವುಡ್ ನಟಿ ಉರ್ಫಿ ಜಾವೇದ್ ಎಂಗೇಜ್ ಆಗಿದ್ದಾರಂತೆ! ತನ್ನ ವಿಚಿತ್ರ ಫ್ಯಾಷನ್‌ನಿಂದಲೇ ಜನರನ್ನು ಬೆರಗುಗೊಳಿಸುತ್ತಿರುವ ಉರ್ಫಿ ಜಾವೇದ್ ಅವರ ಹೊಸ ಸೋಶಿಯಲ್ ಮೀಡಿಯಾ ಪೋಸ್ಟ್ ಸಖತ್ ಸಂಚಲನ ಮೂಡಿಸಿವೆ.
ಈ ಚಿತ್ರಗಳಲ್ಲಿ ನಟಿ ಹೊಸ ನಮೂನೆಯ, ಚಿತ್ರ ವಿಚಿತ್ರ ಉಡುಗೆ ಧರಿಸಿ ಕಾಣಿಸಿಕೊಂಡಿಲ್ಲ. ಆದರೆ ಪೂಜೆ ಮಾಡುತ್ತಿರುವುದು ಕಂಡುಬಂದಿದೆ. ನಟಿಯ ಪಕ್ಕದಲ್ಲಿ ಯುವಕನೊಬ್ಬ ಕುಳಿತಿದ್ದಾನೆ ಆದರೆ ಅವನ ಗುರುತು ಪತ್ತೆ ಮಾಡಬಾರದೆಂದು ಮುಖಕ್ಕೆ ಹಾರ್ಟ್ ಇಮೋಜಿ ಹಾಕಿ ಮುಖ ಕವರ್ ಮಾಡಲಾಗಿದ್ದು ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಈ ಫೋಟೋದಲ್ಲಿ ಉರ್ಫಿ ಜಾವೇದ್ ನೀಲಿ ಬಣ್ಣದ ಸೂಟ್ ಧರಿಸಿದ್ದಾರೆ. ತಲೆಯ ಮೇಲೆ ಸ್ಕಾರ್ಫ್ ಮತ್ತು ಹಣೆಯಲ್ಲಿ ತಿಲಕವಿದೆ. ಆಕೆಯ ನಗುಮುಖವನ್ನು ನೋಡಿದರೆ ನಟಿಗೆ ತುಂಬಾ ಸಂತೋಷವಾಗಿದೆ ಎಂದನಿಸುತ್ತಿದೆ.ಅಲ್ಲದೆ ಇದೇ ಮೊದಲ ಬಾರಿ ನಟಿ ದೇಹ ಮುಚ್ಚುವ ಫುಲ್ ಬಟ್ಟೆ ದರಿಸಿದ್ದಾಳೆ.
ಉರ್ಫಿ ಜಾವೇದ್ ಮತ್ತು ಈ ವ್ಯಕ್ತಿ ಒಟ್ಟಿಗೆ ಪೂಜೆ ಮಾಡುತ್ತಿರುವುದನ್ನು ಫೋಟೋದಲ್ಲಿ ನೋಡಬಹುದಾಗಿದೆ. ಈ ಫೋಟೋವನ್ನು ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು ಉರ್ಫಿ ಜಾವೇದ್ ಹಿಂದೂ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದಾರೆಯೇ? ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಉರ್ಫಿಯ ಎರಡು ಫೋಟೋಗಳು ವೈರಲ್ ಆಗುತ್ತಿವೆ. ಈ ಚಿತ್ರಗಳನ್ನು ನೋಡಿದ ಅನೇಕರು ಉರ್ಫಿ ಗುಟ್ಟಾಗಿ ಮದುವೆ ನಿಶ್ಚಯ ಮಾಡಿಕೊಂಡಿದ್ದಾರೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಅವರಿಗೆ ಹೊಸ ಆರಂಭದ ಶುಭಾಶಯಗಳನ್ನೇ ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.