ಹಿಂದೂ ಪುರುಷರಿಗಿಂತ ಹೆಚ್ಚು ಸುಖ ಮುಸ್ಲಿಂ ಹುಡುಗರು ಕೊಡುತ್ತಾರೆ, ಸ್ವರ ಭಾಸ್ಕರ್

 | 
Jjj
ತಮ್ಮ ನೇರಾ ನೇರ ಮಾತುಗಳಿಂದ ಮೊದಲೆಲ್ಲ ಸುದ್ದಿಯಾಗುತ್ತಿದ್ದವರು ಸ್ವರಾ ಭಾಸ್ಕರ್. ಸಾಮಾಜಿಕವಾಗಿ ಅದೇನೇ ನಡೆದರೂ ಅದಕ್ಕೂ ತಮಗೂ ಸಂಬಂಧವಿಲ್ಲ ಎಂದು ಸುಮ್ಮನಾಗುವ ಬಾಲಿವುಡ್‌ನ ಅನೇಕ ತಾರೆಯರ ನಡುವೆ ಸ್ವರಾ ಭಾಸ್ಕರ್ ಅನೇಕ ವಿಚಾರಗಳಿಗೆ ಧ್ವನಿಯನ್ನು ಎತ್ತಿದ್ದರು. ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಚಿತ್ರರಂಗದಲ್ಲಿಯೇ ತಮ್ಮ ಸಹ ಕಲಾವಿದರ ಕೆಂಗಣ್ಣಿಗೆ ಕೂಡ ಗುರಿಯಾಗಿದ್ದವರು ಸ್ವರಾ ಭಾಸ್ಕರ್.
ಇಂಥಾ ಸ್ವರಾ ಭಾಸ್ಕರ್ ಎರಡು ಕಾರಣಗಳಿಂದ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಆ ಪೈಕಿ ಸ್ವರಾ ಭಾಸ್ಕರ್ ದೇಹದಲ್ಲಾದ ಬದಲಾವಣೆ ಒಂದು ಕಾರಣವಾದರೆ, ಮುಸ್ಲಿಂ ಮುಖಂಡ ಮೌಲಾನಾ ಸಜ್ಜದ್ ನೊಮಾನಿ ಜೊತೆ ನಗು ನಗುತ್ತಾ ತೆಗೆಸಿಕೊಂಡ ಭಾವಚಿತ್ರ ಮತ್ತೊಂದು ಕಾರಣ.ಹೌದು, ಮಹಿಳೆಯರ ಹಕ್ಕು , ಶಿಕ್ಷಣ, ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಕುರಿತು ಮೊದಲಿಂದ ಮಾತನಾಡುತ್ತಾ ಬಂದ ಸ್ವರಾ ಭಾಸ್ಕರ್, ಸ್ತ್ರೀ ವಿರೋಧಿ ಮನಸ್ಥಿತಿ ಇರುವ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬಾರದೆಂದು ಈ ಹಿಂದೆ ಹೇಳಿ ದೇಶವ್ಯಾಪಿ ಆಕ್ರೋಶಕ್ಕೆ ಗುರಿಯಾಗಿದ್ದ ಮೌಲಾನಾ ಸಜ್ಜದ್ ನೊಮಾನಿಯನ್ನು ತಮ್ಮ ಪತಿ ಫಹಾದ್ ಅಹ್ಮದ್ ಜೊತೆ ಭೇಟಿಯಾಗಿದ್ದಾರೆ. 
ಹೀಗಾಗಿಯೇ ಕೆರಳಿ ಕೆಂಡವಾಗಿರುವ ಅನೇಕರು ಸ್ವರಾ ಭಾಸ್ಕರ್ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಹೇಳುವುದು ವೇದಾಂತ ಮಾಡುವುದು ರಾದ್ಧಾಂತ ಎನ್ನುವುದಕ್ಕೆ ಸ್ವರಾ ಭಾಸ್ಕರ್ ಜ್ವಲಂತ ಸಾಕ್ಷಿ ಎನ್ನುತ್ತಿದ್ಧಾರೆ. ನಿಮ್ಮಂತಹ ಬೂಟಾಟಿಕೆ ವ್ಯಕ್ತಿಗಳಿಂದ ಸಮಾಜ ಹಾಳಾಗುತ್ತಿರುವುದು ಎಂದು ಕಿಡಿ ಕಾರುತ್ತಿದ್ದಾರೆ. ತಾಲಿಬಾನ್ ಸಹಾನುಭೂತಿಯನ್ನು ಹೊಂದಿರುವ ಆ ಮೌಲಾನಾ ಸಜ್ಜದ್ ನೊಮಾನಿ ಬಳಿ ನಿಮಗೇನು ಕೆಲಸ ಎಂದು ಪ್ರಶ್ನೆಯನ್ನು ಮಾಡುತ್ತಿದ್ದಾರೆ.
ಇನ್ನೂ ಮೊದಲೆಲ್ಲ ಸ್ವರಾ ಭಾಸ್ಕರ್ ಹೆಣ್ಣು ಮಕ್ಕಳ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿದ್ದರು. ರಾಜಕಾರಣಿಗಳು ನಟಿಯರ ಬಟ್ಟೆಯ ಕುರಿತು ಮಾತನಾಡಿದಾಗೆಲ್ಲ ಕೆಂಡ ಕಾರುತ್ತಿದ್ದರು. ನಟಿಯರ ಬಟ್ಟೆಯ ಉದ್ದವನ್ನು ನೋಡುವುದನ್ನು ಬಿಟ್ಟು ತಮ್ಮ ಕೆಲಸದತ್ತ ರಾಜಕಾರಣಿಗಳು ಗಮನ ನೀಡಲಿ ಎಂದು ಹೇಳಿದ್ದರು. 
ಆದರೆ ಈಗ ಸ್ವರಾ ಭಾಸ್ಕರ್ ಮೈಯನ್ನು ಸಂಪೂರ್ಣವಾಗಿ ಮುಚ್ಚಿಕೊಂಡು ಹೋಗಿದ್ದಾರೆ. ತಲೆಯ ಮೇಲೆ ದುಪ್ಪಟ್ಟಾವನ್ನು ಕೂಡ ಹಾಕಿಕೊಂಡು ಮೌಲಾನಾ ಸಜ್ಜದ್ ನೊಮಾನಿ ಎದುರು ನಿಂತಿದ್ದಾರೆ. ಈ ಕಾರಣಕ್ಕೂ ಕೆರಳಿರುವ ಅನೇಕರು ಈಗೆಲ್ಲಿ ಹೋಯ್ತು ನಿಮ್ಮ ಸಮಾನತೆ, ಘನತೆ ಮತ್ತು ನಾಗರೀಕ ಹಕ್ಕು ಎಂದು ಪ್ರಶ್ನೆಯನ್ನು ಮಾಡುತ್ತಿದ್ದಾರೆ. ಹೀನಾಮಾನವಾಗಿ ಸ್ವರಾ ಭಾಸ್ಕರ್ ಅವರನ್ನು ಟ್ರೋಲ್ ಮಾಡುತ್ತಿದ್ಧಾರೆ. ಇಸ್ಲಾಂಗೆ ಮತಾಂತರಗೊಂಡಿದ್ದರೆ ಅದನ್ನು ಧೈರ್ಯವಾಗಿ ಹೇಳಿ ಎನ್ನುತ್ತಿದ್ದಾರೆ.