ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕಿಸ್ತಾ.ನ ಸೋಲಲಿ ಎಂದು ನಿನ್ನೆ ಆಂಜನೇಯನಿಗೆ ಪೂಜೆ ಸಲ್ಲಿಸಿದ್ದ ಮು.ಸ್ಲಿಂ ಬಾಂಧವರು

 | 
ಕ ಪು

 ಭಾರತ ಪಾಕಿಸ್ತಾನ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತಕ್ಕೆ ಜಯ ಸಿಗಲಿ ಎಂದು ರಾಮನಗರ ಮುಸ್ಲಿಂ ಬಾಂಧವರು ಆಂಜನೇಯನಿಗೆ ಪೂಜೆ ಸಲ್ಲಿಸಿದ್ದಾರೆ.ಬದ್ಧ ವೈರಿಗಳು ಎಂದು ಗುರುತಿಸಲ್ಪಟ್ಟಿರುವ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್‌ ತಂಡಗಳ ನಡುವೆ ಅಹಮದಾಬಾದ್‌ನಲ್ಲಿ ಶನಿವಾರ ಮಧಾಹ್ನ ಹೈವೋಲ್ಟೇಜ್‌ ಪಂದ್ಯಾವಳಿ ನಡೆದಿತ್ತು.

ಇನ್ನು ಈ ಎರಡು ತಂಡಗಳ ನಡುವೆ ಪಂದ್ಯಾವಳಿ ಎಂದರೆ ಅಭಿಮಾನಿಗಳಿ 10 ಪಟ್ಟು ಉತ್ಸಾಹ. ಭಾರತ ತಂಡ ಗೆಲ್ಲಲೇ ಬೇಕು ಎಂಬ ಆಶಯ. ಹೀಗಾಗಿ, ದೇವರಿಗೆ ಪೂಜೆ ಸಲ್ಲಿಸುವುದು, ಹರಕೆ ಕಟ್ಟಿಕೊಳ್ಳುವುದು, ಹೋಮ ಹವನ ಮಾಡಿಸುವುದು ಮಾಡುತ್ತಾರೆ.

ಸದ್ಯ ರಾಮನಗರದಲ್ಲಿ ಮುಸ್ಲಿಂ ಸಮುದಾಯದ ಗೆಳೆಯರ ಬಳಗವು ಭಾರತ ಗೆಲ್ಲಲ್ಲಿ ಎಂದು ಹಿಂದೂ ದೇವರಾದ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪಾಕಿಸ್ತಾನ ಸೋಲ ಬೇಕು ಭಾರತಕ್ಕೆ ಜಯ ಸಿಗಬೇಕು ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ರಾಮನಗರ ಅಗ್ರಹಾರ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ‌ ಕ್ರಿಕೆಟ್ ಅಭಿಮಾನಿಗಳು ಬಳಿಕ ತ್ರಿವರ್ಣ ಧ್ವಜ ಹಿಡಿದು ಶುಭಕೋರಿದರು. ಪಾಕ್ ಸೋಲಲಿ, ಭಾರತ ಗೆಲ್ಲಲಿ ಎಂದು ಘೋಷಣೆ ಕೂಗಿ ತಮ್ಮ ನೆಚ್ಚಿನ ತಂಡಕ್ಕೆ ಶುಭಕೋರಿದರು.ಅವರೆಲ್ಲರ ಹಾರೈಕೆಯಿಂದಾಗಿ ನಿನ್ನೆ ನಡೆದ ಮ್ಯಾಚ್ ಅಲ್ಲಿ ಭಾರತ ಜಯಗಳಿಸಿದ್ದು ಪಾಕ್ ಪರಾಭವಗೊಂಡಿದೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.