ಅವ್ನು ಕೈಕೊಟ್ಟಿದ್ದಕ್ಕೆ ಇವತ್ತು ನನ್ನ ಫಿಗರ್ ಇಷ್ಟು ಚೆನ್ನಾಗಿರೋದು; ನಮ್ರತಾ ಗೌಡ

 | 
Jx

ಇಂದು ಸೋಶಿಯಲ್‌ ಮೀಡಿಯಾದಲ್ಲಿ ಪಾಸಿಟಿವ್‌ ಪ್ರತಿಕ್ರಿಯೆಗಿಂತ ಜಾಸ್ತಿ ನೆಗೆಟಿವ್‌ ಮಾತುಗಳೇ ಕೇಳಿ ಬರುತ್ತವೆ. ಅದರಲ್ಲಿಯೂ ನಟಿಯರ ಸೋಶಿಯಲ್‌ ಮೀಡಿಯಾ ಅಕೌಂಟ್‌ಗಳಲ್ಲೇ ನೆಗೆಟಿವ್‌ ಕಾಮೆಂಟ್‌ಗಳು ರಾರಾಜಿಸೋದು ಜಾಸ್ತಿ. ನಟಿ ನಮ್ರತಾ ಗೌಡ ಒಮ್ಮೆ ಬಿಕಿನಿ ಫೋಟೋದಿಂದ ಸಾಕಷ್ಟು ಮಾತುಗಳನ್ನು ಕೇಳುವ ಹಾಗಾಯ್ತು. ಬಾಲಿ ಪ್ರವಾಸ ಹೋದಾಗ ನಮ್ರತಾ ಗೌಡ ಅವರು ಬಿಕಿನಿ ಧರಿಸಿದ್ದರು.

ಈ ಫೋಟೋಗಳನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆಗೆಲ್ಲ ಪಾಸಿಟಿವ್‌, ನೆಗೆಟಿವ್‌ ಪ್ರತಿಕ್ರಿಯೆ ಸಿಕ್ಕಿತ್ತು. ಈ ಬಗ್ಗೆ ಅವರು ಆರ್‌ಜೆ ರಾಜೇಶ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. ನಾನು ನನ್ನ ಬಾಯ್ ಫ್ರೆಂಡ್ ಬ್ರೇಕಪ್‌ ಆಗಿ ಆರು ತಿಂಗಳಾಗಿತ್ತು. ನಾನು ಜೀವನದಲ್ಲಿ ಏನಾದರೂ ಸಾಧಿಸಬೇಕು ಅಂತ ಅನಿಸಿತು. ಆ ರೆಬೆಲ್‌ ಹಂತ ನನ್ನದಾಗಿತ್ತು. ಬ್ರೇಕಪ್‌ ಆದರೆ ಹುಡುಗರು ಸಿಕ್ಸ್‌ಪ್ಯಾಕ್‌ ಮಾಡ್ತಾರೆ, ನಾನು ಬಿಕಿನಿ ಬಾಡಿ ಮಾಡಿಕೊಳ್ಳಬೇಕು ಅಂತ ಅನಿಸಿತ್ತು.

ಭಾವನಾತ್ಮಕವಾಗಿ ನಾನು ತುಂಬ ಒದ್ದಾಡ್ತಿದ್ದೆ. ನನಗೊಂದು ಬ್ರೇಕ್‌ ಬೇಕಿತ್ತು. ನಾನು ಸಿಕ್ಕಾಪಟ್ಟೆ ಡಯೆಟ್‌ ಮಾಡಿದೆ, ವರ್ಕೌಟ್‌ ಮಾಡಿದೆ. ಬಿಕಿನಿ ಬಾಡಿ ತೋರಿಸೋಕೆ ಹಾಗೆ ನಾವು ವರ್ಕೌಟ್‌ ಮಾಡಬೇಕಾಗುತ್ತದೆ. ಐಶ್ವರ್ಯಾ ಸಿಂಧೋಗಿ ನಾನು ಸೇರಿಕೊಂಡು ಬಾಲಿಗೆ ಹೋದೆವು. ಎಲ್ಲವನ್ನು ನಾವೇ ರಿಸರ್ಚ್‌ ಮಾಡಿ, ರೂಮ್‌ ಬುಕ್‌ ಮಾಡಿದೆವು, ಡ್ರೈವರ್‌ ಬುಕ್‌ ಮಾಡಿಕೊಂಡೆವು ಎಂದು ನಮ್ರತಾ ಗೌಡ ಹೇಳಿದ್ದಾರೆ.

ನಾವಂತೂ ಫುಲ್‌ ಶಾಪ್‌ ಮಾಡಿಕೊಂಡು ಬಾಲಿಗೆ ಹೋದೆ. ಬಾಲಿಯಿಂದ ಬೆಂಗಳೂರಿಗೆ ಬರುತ್ತಿದ್ದಂತೆ ಫುಲ್‌ ಟ್ರೋಲ್‌ ಆಗಿದೆ. ನಾನು ವರ್ಕೌಟ್‌ ಮಾಡಿರೋ ಬಾಡಿ ಅದು, ನನ್ನ ಬಟ್ಟೆ ಅದು, ನಾನು ದುಡಿದ ದುಡ್ಡಿನಲ್ಲಿ ತಗೊಂಡ ಬಿಕಿನಿ ಅದು. ಆಗ ನಾನು ತಪ್ಪು ಮಾಡಿದ್ನಾ ಅಂತ ಅನಿಸಿತು. 

ನನ್ನ ತಾಯಿ ಬಳಿ ಕೇಳಿದಾಗ ಅವರು ಏನೂ ತಪ್ಪಿಲ್ಲ ಅಂದ್ರು. ಆಗ ಸಮಾಧಾನ ಆಯ್ತು. ನಾನು ಟ್ರೋಲ್‌ಗಳ ಬಗ್ಗೆ, ನೆಗೆಟಿವ್‌ ಕಾಮೆಂಟ್‌ಗಳ ಬಗ್ಗೆ ನಾನು ರಿಯಾಕ್ಟ್‌ ಮಾಡಲಿಲ್ಲ. ಹೀಗಾಗಿ ನನ್ನ ಬಾಲಿ ಟ್ರಿಪ್‌ ಮೆಮೊರೆಬೆಲ್‌ ಆಗಿ ಉಳಿದಿದೆ ಎಂದು ನಮ್ರತಾ ಗೌಡ ಅವರು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.