ಆತನಿಗಿಂತ ಜಾಸ್ತಿ ನನ್ನ ಗಂಡನ ಬಳಿ ಇದೆ, ಯಶ್ ಬಗ್ಗೆ ಮೌನ ಮುರಿದ ದೀಪಿಕಾ ದಾಸ್
Feb 27, 2025, 09:15 IST
|

ಅವರಿವರ ಹೆಸರು ಹೇಳಿಕೊಂಡು ಬೆಳೆವವರ ನಡುವೆ ದೀಪಿಕಾ ದಾಸ್ ತುಂಬಾ ಡಿಫರೆಂಟ್ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಹಾಗೂ ದೀಪಿಕಾ ದಾಸ್ ತಾಯಿ ಇಬ್ಬರೂ ಅಕ್ಕ-ತಂಗಿಯರು. ಹೀಗಾಗಿ ಸಂಬಂಧದಲ್ಲಿ ಯಶ್ ಅವರ ತಂಗಿ ದೀಪಿಕಾ ದಾಸ್. ಆದರೆ ಅವರು ಎಲ್ಲಿಯೂ ಯಶ್ ತಂಗಿ ಎಂದು ಹೇಳಿಕೊಳ್ಳೋದಿಲ್ಲ, ಯಶ್ ಮನೆಯ ಕಾರ್ಯಕ್ರಮಗಳಲ್ಲಿ ದೀಪಿಕಾ ದಾಸ್ ಹಾಜರಿ ಇರೋದಿಲ್ಲ, ದೀಪಿಕಾ ದಾಸ್ ಮದುವೆಯಲ್ಲಿ ಯಶ್ ಕುಟುಂಬದ ಹಾಜರಿಯೂ ಇರಲಿಲ್ಲ. ಈ ಬಗ್ಗೆ ಅವರು ರಾಜೇಶ್ ಗೌಡ ಯುಟ್ಯೂಬ್ ಚಾನೆಲ್ ಜೊತೆ ಮಾತನಾಡಿದ್ದಾರೆ.
ನಾನು ತುಂಬಾ ಚಿಕ್ಕವಳು, ನಾನು ಮೂರು ವರ್ಷ ಇದ್ದಾಗ ಅಪ್ಪ-ಅಮ್ಮ ಬೇರೆ ಬೇರೆಯಾದರು. ನಮ್ಮ ಅಮ್ಮ ತುಂಬಾ ಸ್ವಾಭಿಮಾನಿ. ಒಂದು ರೂಪಾಯಿಯನ್ನು ಸಹ ಅಪ್ಪನ ಬಳಿ ಕೇಳುತ್ತಿರಲಿಲ್ಲ. ನಮಗೆ ಏನಾದರೂ ಕೊಡಿಸುವಾಗಲೂ ಕೂಡ ಅಪ್ಪನಿಂದ ಒಂದು ರೂಪಾಯಿ ತೆಗೆಸುತ್ತಿರಲಿಲ್ಲ. ನಮ್ಮ ಅಪ್ಪ ಕೊಡಲು ಬಂದರೂ ಸಹ ಅವರು ಒಪ್ಪಿಕೊಳ್ಳುತ್ತಿರಲಿಲ್ಲ ಎಂದರು.
ನನಗೆ ಚಿಕ್ಕವಳಿದ್ದಾಗ ಅಮ್ಮನ ಬಗ್ಗೆ ಅಷ್ಟು ಗೊತ್ತಿರಲಿಲ್ಲ. ನಾನು ಅವರ ಜೊತೆ ಹೆಚ್ಚು ಸಮಯ ಕಳೆಯುತ್ತಿರಲಿಲ್ಲ. ಆದರೆ ನಿಜ ಹೇಳಬೇಕು ಅಂದರೆ ನಮ್ಮ ಅಪ್ಪ ಹೋದ ಮೇಲೆ ಅಮ್ಮನ ಬೆಲೆ ಏನೂ ಅಂತಾ ಗೊತ್ತಾಯ್ತು. ನಮ್ಮ ತಂದೆ ಈಗಿಲ್ಲ. ನಾನು ನಟನೆಗೆ ಬಂದು ಒಂದು ವರ್ಷ ಆಗಿತ್ತು ಅಷ್ಟೇ. ಕೃಷ್ಣ ರುಕ್ಮಿಣಿ ಧಾರಾವಾಹಿ ಮಾಡಿ ಒಂದು ವರ್ಷ ಆಗಿತ್ತು. ಅದರ ನಡುವೆ ಬೇರೆ ಸಿನಿಮಾ ನೋಡುತ್ತಿದೆ. ಈ ಮಧ್ಯೆ ಅಪ್ಪ ತೀರಿ ಹೋದರು.
ನಮ್ಮ ಮಧ್ಯೆ ಜಗಳ ಅಂಥ ಏನೂ ಇಲ್ಲ. ನನಗೆ ನಮ್ಮಿಬ್ಬರ ಪ್ರೊಫೆಶನ್ ಡಿಫರೆಂಟ್ ಆಗಿಟ್ಟುಕೊಳ್ಳಲು ಪ್ರಯತ್ನಪಡ್ತೀವಿ. ಇಬ್ಬರಿಗೂ ಪರಸ್ಪರ ಗೌರವವಿದೆ. ಎಲ್ಲಿಯೂ ತಂಗಿ, ಅಣ್ಣ ಅಂತ ಹೇಳೋದು ಇಷ್ಟ ಇಲ್ಲ. ಮುಂಚಿನಿಂದಲೂ ನಾನು ಎಲ್ಲಿಯೂ ಈ ಥರ ಮಾತನಾಡಿಲ್ಲ, ಈಗಲೂ ಅದನ್ನೇ ಕಂಟಿನ್ಯೂ ಮಾಡ್ತೀನಿ. ನನ್ನ ಕೆಲಸ ಚೆನ್ನಾಗಿದ್ದಾಗ ಅವರು ಪ್ರಶಂಸೆ ಕೊಡ್ತಾರೆ. ಅದನ್ನು ನಾನು ಎಲ್ಲಿಯೂ ಪಬ್ಲಿಕ್ ಮಾಡೋಕೆ ಇಷ್ಟಪಡೋದಿಲ್ಲ. ಇದನ್ನು ಬಿಟ್ಟರೆ ಬೇರೆ ಏನೂ ಇಲ್ಲ ಎಂದು ದೀಪಿಕಾ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.