ಬಿಗ್ ಬಾಸ್ ನಲ್ಲಿ ನನ್ನ ಗಂಡನೇ ಗೆಲ್ಲುವುದು, ' ಈ ಮೊದಲೇ ಮಾಹಿತಿ ಸಿಕ್ಕಿದೆ ಎಂದ ಧನರಾಜ್ ಪತ್ನಿ'
Jan 18, 2025, 17:25 IST
|

ಕನ್ನಡ ಕಿರುತೆರೆಯ ಅತ್ಯಂತ ಪಾಪ್ಯುಲರ್ ಪ್ರೋಗ್ರಾಮ್ 'ಬಿಗ್ ಬಾಸ್ ಸೀಸನ್ 11' ಅಂತಿಮ ಘಟ್ಟದಲ್ಲಿದೆ. ಮುಂದಿನ ವಾರಾಂತ್ಯ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ಈ ಮಿಡ್ ವೀಕ್ನಲ್ಲಿ ಓರ್ವರು ಮನೆಯಿಂದ ಹೊರನಡೆಯಬೇಕಿತ್ತು. ಅದರಂತೆ, ಕಳೆದ ಸಂಚಿಕೆಯಲ್ಲಿ ಈ ವಿಷಯನ್ನು ಪ್ರಸ್ತಾಪಿಸಲಾಗಿತ್ತು ಕೂಡಾ. ಆದ್ರೆ ಎಲಿಮಿನೇಷನ್ ಪ್ರಕ್ರಿಯೆಯನ್ನು ಅರ್ಧಕ್ಕೆ ನಿಲ್ಲಿಸಿ, ಸ್ಪರ್ಧಿಗಳೂ ಸೇರಿದಂತೆ ಪ್ರೇಕ್ಷಕರ ಎದೆಬಡಿತ ಹೆಚ್ಚಿಸಿದ್ದರು ಬಿಗ್ ಬಾಸ್.
ದಿನದಿಂದ ದಿನಕ್ಕೆ ಆಟದಲ್ಲಿ ಹಲವು ಟ್ವಿಸ್ಟ್ಗಳಾಗುತ್ತಿವೆ. ರೋಚಕತೆಯಿಂದ ಬಿಗ್ ಬಾಸ್ ಮುನ್ನುಗ್ಗುತ್ತಿದ್ದು, ಪ್ರಸ್ತುತ ಅತ್ಯಂತ ಜನಪ್ರಿಯತೆ ಸಂಪಾದಿಸುವ ಧನರಾಜ್ ಆಚಾರ್ ಅವರು ತಪ್ಪಿತಸ್ಥನ ಜಾಗದಲ್ಲಿ ನಿಂತಿದ್ದಾರೆ. ಈ ಹಿಂದೆ ತಿಳಿದೋ ಅಥವಾ ತಿಳಿಯದೆಯೋ ಭವ್ಯಾ ಅವರ ಕೈಯಿಂದ ಮೋಸಗಳಾಗಿದ್ದವು. ಅದನ್ನು ಕಾರ್ಯಕ್ರಮದ ನಿರೂಪಕ ಸುದೀಪ್ ಅವರು ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಗಳಲ್ಲಿ ಪ್ರಸ್ತಾಪಿಸಿ, ನೀಯತ್ತಿನ ಆಟದ ಬಗ್ಗೆ ಪ್ರತೀ ಸ್ಪರ್ಧಿಗಳಿಗೂ ತಿಳಿ ಹೇಳಿದ್ದರು.
ಈ ವಾರದಲ್ಲಿ ನಡೆದ ಟಾಸ್ಕ್ನಲ್ಲಿ ತಿಳಿದೋ ಅಥವಾ ತಿಳಿಯದೆಯೋ ಧನರಾಜ್ ಆಚಾರ್ ಅವರ ಕೈಯಿಂದಲೂ ಮೋಸ ನಡೆದಿದೆ. ಇದರ ಪರಿಣಾಮ ಎಲಿಮಿನೇಷನ್ ಮೇಲೆ ಬಿದ್ದಿದೆ.ಬ್ರೇಕ್ ನಂತರ ಮುಂದುವರೆಯುತ್ತಿದೆ ವಾರ ಮಧ್ಯದ ಎಲಿಮಿನೇಷನ್ ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನಡಿ ಪ್ರೋಮೋ ಅನಾವರಣಗೊಂಡಿದೆ.
ಇದರಲ್ಲಿ ಮಾಡಿದ ತಪ್ಪನ್ನು ಧನರಾಜ್ ಆಚಾರ್ ಒಪ್ಪಿಕೊಂಡಿದ್ದಾರೆ. ಜೊತೆಗೆ, ತಾನು ಮಾಡಿದ ತಪ್ಪಿಗೆ ಶಿಕ್ಷೆ ಎಂಬಂತೆ ತಮ್ಮ ಹೆಸರನ್ನೂ ಸೇರಿಸಿಕೊಂಡು ಎಲಿಮಿನೇಷನ್ ಪ್ರಕ್ರಿಯೆ ಮುಂದುವರಿಸಲು ಬಿಗ್ ಬಾಸ್ ಬಳಿ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ, ಕಣ್ಣೀರಿಟ್ಟಿದ್ದಾರೆ. ನಡೆದಿರೋ ಮೋಸಕ್ಕೆ ಶಿಕ್ಷೆ ಎಂಬಂತೆ ಎಲಿಮಿನೇಟ್ ಆಗುತ್ತಾರಾ? ಅನ್ನೋ ಪ್ರಶ್ನೆ ಎದ್ದಿದೆ. ಎಲ್ಲದಕ್ಕೂ ಇಂದಿನ ಸಂಚಿಕೆಯಲ್ಲಿ ಸ್ಪಷ್ಟನೆ ಸಿಗಲಿದೆ.
ಇನ್ನು ಈ ಕುರಿತಾಗಿ ಧನರಾಜ್ ಪತ್ನಿ ಪ್ರಜ್ಞಾ ಅಲ್ಲಗಳೆದಿದ್ದಾರೆ
ಈಗಾಗಲೇ ಅಡಿರುವವರು ಹಲವು ಸಲ ಮೋಸ ಮಾಡಿದ್ದಾರೆ. ಅವರೆಲ್ಲ ಮನೆಯಲ್ಲೇ ಇದ್ದಾರೆ. ಅಷ್ಟೇ ಅಲ್ಲ ಇಲ್ಲಿ ಆಟವಾಡಿ ಗೆಲ್ಲುವುದು ಮುಖ್ಯತ್ ಅದರ ಹೊರತಾಗಿ ಬೇರೆ ಇದ್ದಿದ್ದರೆ ಬಿಗ್ಬಾಸ್ ಕನ್ನಡಿಯನ್ನು ಮುಚ್ಚುತ್ತಿದ್ದರು. ಹಲವು ಕಡೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಹಾಗೆ ಮಾಡ್ಬೇಡಿ . ಧನರಾಜ್ ಗೆದ್ದು ಬನ್ನಿ ಎಂದು ಹಾರೈಸಿದ್ದಾಳೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.