ನನ್ನ ಮೀಟೂ ಕೇ,ಸ್ ಇನ್ನೂ ಮುಗಿದಿಲ್ಲ, ಬಹಳ ದಿನಗಳ ನಂತರ ಮನಬಿಚ್ಚಿ ಮಾತಾಡಿದ ಶೃತಿ ಹರಿಹರನ್

 | 
ಹಗಗ

ನಟಿ ಶ್ರುತಿ ಹರಿಹರನ್ ಮೀಟೂ ಕೇಸ್ ಗೆ ಮತ್ತೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಟ ಅರ್ಜುನ್ ಸರ್ಜಾ ಕೇಸ್ ಗೆ ಅರ್ಜಿ ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿದ್ದ ಶ್ರುತಿ ಹರಿಹರನ್ ಗೆ ಕೋರ್ಟ್ ನೋಟೀಸ್ ಜಾರಿಯಾಗಿದೆ.ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯದ ನಟಿ ಶ್ರುತಿ ಹರಿಹರನ್ ಗೆ ನೋಟೀಸ್ ಜಾರಿಯಾಗಿದೆ. ಪ್ರಕರಣ ಸಂಬಂಧ ಪೊಲೀಸರಿಗೂ ಸೂಕ್ತ ಸಾಕ್ಷ್ಯಾಧಾರ ನೀಡುವಂತೆ ಸೂಚಿಸಲಾಗಿದೆ. 

2018 ರಲ್ಲಿ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಚಿತ್ರವೊಂದರ ಶೂಟಿಂಗ್ ವೇಳೆ ಅರ್ಜುನ್ ಸರ್ಜಾ ಅವರು ತಮ್ಮ ಮೇಲೆ ದೌರ್ಜನ್ಯ ನಡೆಸಿದ್ದರು. ಅರ್ಜುನ್ ಸರ್ಜಾ ವಿರುದ್ಧ ಸಾಕ್ಷ್ಯಾಧಾರ ಇಲ್ಲ ಅಂತ ರಿಪೋರ್ಟ್ ಸಲ್ಲಿಸಿದ್ದರು. ಪೊಲೀಸರ ಬಿ ರಿಪೋರ್ಟ್ ಚಾಲೆಂಜ್ ಮಾಡಿದ್ದ ಶೃತಿ ಹರಿಹರನ್ ಗೆ ಈಗ ನೋಟಿಸ್ ಸಿಕ್ಕಿದೆ. 

ಅರ್ಜಿ ವಿಚಾರಣೆಯ ಬಳಿಕ ಶ್ರುತಿಗೆ ಪೊಲೀಸ್ ನೋಟಿಸ್ ನೀಡಿದ್ದು, ಆರೋಪಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ನೀಡುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಇನ್ನು ಈ ವಿಚಾರಣೆ ಇನ್ನೂ ಮುಗಿದಿಲ್ಲ ನನ್ನಲ್ಲಿ ಶಕ್ತಿ ಇರುವ ವರೆಗೂ ಹೋರಾಡುತ್ತೇನೆ. ಬಹಳ ಸಲ ಕುತಂತ್ರ ನಡೆಯುವುದಿಲ್ಲ ಚಿತ್ರ ನಟಿ ಶೃತಿ ಹರಿಹರನ್ ಹುಬ್ಬಳ್ಳಿಯಲ್ಲಿ ಹೇಳಿಕೆ ನೀಡಿದ್ದು, ಈಗಲಾದರೂ ಮಹಿಳೆಯರು ಧ್ವನಿ ಎತ್ತುತ್ತಿರುವುದು ಸ್ವಾಗತಾರ್ಹ. ಈ ಅಭಿಯಾನ ಮುಂದುವರೆಯುತ್ತಿದೆ. ಇದರಲ್ಲಿ ದೊಡ್ಡ ದೊಡ್ಡವರ ಹೆಸರು ಬಹಿರಂಗಗೊಳ್ಳುತ್ತಿದೆ.ಈ ಅಭಿಯಾನ ‌ಗೇಮ್ ಚೆಂಜರ್ ಆಗಲಿದೆ ಎಂದಿದ್ದಾರೆ.

ಯಾವಾಗ ಹೇಳಿದರು ಸತ್ಯ ಸತ್ಯವೇ ಎಂದಿರುವ ಅವರು, ಒಬ್ಬ‌ ಮಹಿಳೆಗೆ ಲೈಂಗಿಕ ದೌರ್ಜನ್ಯ ಸಹಿಸಿಕೊಳ್ಳುವದು‌ ಕಷ್ಟಕರ. ಇದು ಮೀಡಿಯಾ ಸೆನ್ಸೆಸನಲ್ ಆಗುತ್ತಿದೆ. ಎಲ್ಲರ ಮೇಲೂ ಕ್ರಮ ಕೈಗೊಳ್ಳಲು ಆಗದಿದ್ರು ಕೆಲವರಿಗೆ ಶಿಕ್ಷೆಯಾಗಲಿ ಎಂದರು.ಮುಂದಿನ ದಿನಗಳಲ್ಲಿ ದೌರ್ಜನ್ಯ ಮಾಡುವರು ವಿಚಾರ ಮಾಡುವಂತಾಗಬೇಕು. ಇದು ಗಂಡು ಮತ್ತು ಹೆಣ್ಣಿನ ಪ್ರಶ್ನೆಯಲ್ಲ. ಅಧಿಕಾರ ಬಲ ಹಾಗೂ ಹಣಬಲದಿಂದ ಇಂತ ಕೃತ್ಯ ನಡೆಯುತ್ತಿವೆ ಎಂದಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.