ಸ್ವಂತ ತಂದೆ ತಾಯಿ ಬೀದಿಯಲ್ಲಿ ಬಿಟ್ರು, ನನ್ನ ಜೀವನದ ಪರಿಸ್ಥಿತಿ ಯಾರಿಗೂ ಬೇಡ ಎಂದ‌ ವಿನಯ್

 | 
ರ

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಗ್ರ್ಯಾಂಡ್​ ಫಿನಾಲೆ ನಡೆಯುತ್ತಿದೆ. ಸದ್ಯ ಬಿಗ್​​ ಮನೆಯಲ್ಲಿ ಕೇವಲ 3 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಕಳೆದ ಸಂಚಿಕೆಯಲ್ಲಿ ಬಿಗ್​ಬಾಸ್​ ಮನೆಯಿಂದ ತುಕಾಲಿ ಸಂತೋಷ್​ ಆಚೆ ಬಂದಿದ್ದರು. ಬಳಿಕ​​ ಹಳ್ಳಿಕಾರ್​ ಒಡೆಯ ವರ್ತೂರು ಸಂತೋಷ್​ ಅವರು ಆಚೆ ಬಂದಿದ್ದರು. ಇದೀಗ ಅಚ್ಚರಿ ರೀತಿಯಲ್ಲಿ ವಿನಯ್​​​ ಗೌಡ ಬಿಗ್​ಬಾಸ್ 3ನೇ ರನ್ನರ್​ ಅಪ್​​​​​ ಆಗಿದ್ದಾರೆ.

ಬಿಗ್ಬಾಸ್ ಮನೆಯಲ್ಲಿ ಸದಾ ರಾಜನಂತಿದ್ದ ಅವರ ಬದುಕಲ್ಲಿ ನೋವಿನ ಸಂಗತಿ ಬಹಳಷ್ಟಿದೆ. ಪ್ರತಿಯೊಬ್ಬರ ಜೀವನದಲ್ಲಿ ಒಂದು ನೋವಿನ ಕಥೆ ಇದ್ದೇ ಇರುತ್ತದೆ. ಅದೇ ರೀತಿ ವಿನಯ್ ಜೀವನದಲ್ಲೂ ನಡೆದಿದೆ. ಹತ್ತನೇ ವರ್ಷದವರೆಗೂ ಕೂಡ ವಿನಯ್ ರಾಜನಂತೆ ಬೆಳೆದಿದ್ದರು. ಆದರೆ ಮನೆಯಲ್ಲಿ ತಂದೆಗೆ ಆದ ಒಂದು ಸಣ್ಣ ಅಪಘಾತ ಎಲ್ಲಾ ಖುಷಿಯನ್ನೇ ನುಂಗು ಹಾಕಿ ಬಿಟ್ಟಿದೆ.

ಒಬ್ಬನೇ ಮುದ್ದಿನ ಮಗನಾಗಿ ಬೆಳೆದ ವಿನಯ್‌ಗೆ ತಂದೆ ಜೊತೆ ಇರುವುದೋ ಅಥವಾ ತಾಯಿಯ ಜೊತೆ ಇರುವುದು ಎಂಬ ಪರಿಸ್ಥಿತಿ ಬಂದಿದೆ. ತಂದೆ- ತಾಯಿ ಇಬ್ಬರು ಕೂಡ ಡಿವೋರ್ಸ್ ಪಡೆದುಕೊಂಡಿದ್ದಾರೆ. ಒಮ್ಮೆ ತಂದೆ ಕೋಪದಿಂದ ವಿನಯ್ ಮೇಲೆ ರೇಗಾಡಿದ್ದಾರೆ. ಇದರಿಂದ ಕೋಪ ಮಾಡಿಕೊಂಡ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಅದು ಏನೆಂದರೆ ತಾನು ಯಾರ ಮೇಲೂ ಕೂಡ ಅವಲಂಬಿತನಾಗಬಾರದು ಸ್ವಾಭಿಮಾನದಿಂದ ಬದುಕಬೇಕು ಎಂದು ಮುಂಬೈಗೆ ಹೋಗಿದ್ದಾರೆ.

ಮುಂಬೈನಲ್ಲಿದ್ದ ದಿನಗಳಲ್ಲಿ ವಿನಯ್ ತುಂಬಾ ಕಷ್ಟಪಟ್ಟಿದ್ದಾರೆ. ಅಲ್ಲಿ ನಾಯಿಗೆ ಊಟ ಸಿಗುತ್ತಿತ್ತು, ಆದರೆ ಮನುಷ್ಯರಿಗೆ ಊಟ ಸಿಗುತ್ತಿರಲಿಲ್ಲ ಎಂದು ತಮ್ಮ ಕಷ್ಟದ ದಿನಗಳನ್ನ ಬಿಗ್ ಬಾಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ನಾನು ಮೂರು ಹೊತ್ತು ವಡಾ ಪಾವ್ ತಿಂದು ಬದುಕು ಸಾಗಿಸಿದ್ದೇನೆ. ನಂತರ ಮುಂಬೈನಲ್ಲಿ ಏನು ಆಗುವುದಿಲ್ಲ ಎಂದುಕೊಂಡ ಮೇಲೆ ನಾನು ಬೆಂಗಳೂರಿಗೆ ವಾಪಸ್ ಬಂದೆ. 

ಅದೇ ವೇಳೆ ನನ್ನನ್ನು ಲವ್ ಮಾಡುತ್ತಿದ್ದ ನನ್ನ ಹೆಂಡತಿ ಮದುವೆಯಾಗದೆ ನನಗೋಸ್ಕರ ಕಾಯುತ್ತಾ ಇದ್ದಳು ಎಂದು ತಮ್ಮ ಹೆಂಡತಿ ತಮಗಾಗಿ ಮಾಡಿದ ತ್ಯಾಗದ ಬಗ್ಗೆಯೂ ಹೇಳಿ ಕಣ್ಣೀರು ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.