ನನ್ನ ಮಗ ತುಂಬಾ ಕಷ್ಟ ಪಟ್ಟು ಮೇಲೆ‌ ಬಂದವ; ಆದರೆ ಈಗ ಕೊ ಲೆಗಾರ ಆಗ್ತಾನೆ ಅಂದುಕೊಂಡಿರಲಿಲ್ಲ

 | 
Us

ಕನ್ನಡ ಚಿತ್ರರಂಗ ಕಂಡ ಅದ್ಭುತ ನಟರಲ್ಲಿ ತೂಗುದೀಪ ಶ್ರೀನಿವಾಸ್ ಕೂಡ ಪ್ರಮುಖರು. ಚಿತ್ರರಂಗದಲ್ಲಿ ದಶಕಗಳ ಕಾಲ ಖಳನಾಯಕನಾಗಿ, ಪೋಷಕ ಪಾತ್ರಗಳಲ್ಲಿ ಸಿನಿ ಪ್ರಿಯರನ್ನು ರಂಜಿಸಿದ್ದರು. ಡಾ.ರಾಜ್‌ಕುಮಾರ್ ನಟಿಸಿದ ಬಹುತೇಕ ಸಿನಿಮಾಗಳಲ್ಲಿ ತೂಗುದೀಪ್ ಶ್ರೀನಿವಾಸ್ ಖಳನಾಯಕನಾಗಿ ಕಾಣಿಸಿಕೊಂಡರೇ ಕಳೆ ಬರುತ್ತಿತ್ತು. ಇವರಿಬ್ಬರ ಜೋಡಿಗೆ ಆಮಟ್ಟಿಗೆ ಬೇಡಿಕೆ ಇತ್ತು.

ತೂಗುದೀಪ ಶ್ರೀನಿವಾಸ್ ಕುಟುಂಬ ಮೈಸೂರಿನಲ್ಲಿ ನೆಲೆಸಿತ್ತು. ಪತ್ನಿ ಮೀನಾ ಹಾಗೂ ಮೂವರು ಮಕ್ಕಳೊಂದಿಗೆ ನೆಲೆಸಿದ್ದರು. ಆದರೆ, ಇತ್ತ ತೂಗುದೀಪ ಶ್ರೀನಿವಾಸ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುತ್ತಿದ್ದರು. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದ ತೂಗುದೀಪ ಶ್ರೀನಿವಾಸ್ ಮನೆಗೆ ಹೋಗುತ್ತಿದ್ದದ್ದೇ ವಿರಳ ಎನಿಸಿತ್ತು. ಆ ಮಟ್ಟಿಗೆ ಬ್ಯುಸಿಯಾಗಿರುತ್ತಿದ್ದರು.ಎಲ್ಲವೂ ಸರಿಯಾಗಿದೆ ಅನ್ನುವಾಗಲೇ ತೂಗುದೀಪ ಶ್ರೀನಿವಾಸ್ ಅವರ ಎರಡೂ ಕಿಡ್ನಿಗಳು ವಿಫಲವಾಗಿದ್ದವು.

ಆಗ ಪತ್ನಿ ಮೀನಾ ತೂಗುದೀಪ ಅವರು ಒಂದು ಕಿಡ್ನಿಯನ್ನು ಪತಿಗೆ ಕೊಟ್ಟಿದ್ದರು. ಈ ಹಿಂದೆ ನೀಡಿದ ಬಾರೀ ಹಳೆಯ ಸಂದರ್ಶನವೊಂದರಲ್ಲಿ ತಾನೇಕೆ ಕಿಡ್ನಿ ಕೊಡುವುದಕ್ಕೆ ಮುಂದೆ ಬಂದೆ ಅನ್ನೋದನ್ನು ಮೀನಾ ತೂಗುದೀಪ ಅವರು ಹೇಳಿಕೊಂಡಿದ್ದರು. ಆ ವಿಡಿಯೋವನ್ನು ರಾಘುರಾಮ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಕಿಕೊಂಡಿದ್ದರು. ಅದೀಗ ಮತ್ತೆ ವೈರಲ್ ಆಗುತ್ತಿದೆ. ಅದರಲ್ಲಿ ಅವರ ಮಾತಿನ ಝಲಕ್ ಇಲ್ಲಿದೆ.

ತೂಗುದೀಪ ಶ್ರೀನಿವಾಸ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರಿಂದ ಹೆಚ್ಚು ಕಾಲ ಬೆಂಗಳೂರಿನಲ್ಲಿ ಇರುತ್ತಿದ್ದರು. ಪತ್ನಿ, ಮಕ್ಕಳೊಂದಿಗೆ ಮನೆಯಲ್ಲಿ ಇರುತ್ತಿದ್ದಿದ್ದು ಕೇವಲ ಐದು ದಿನ ಮಾತ್ರ ಅಂತ ಆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅವರಿಗೆ ಮಕ್ಕಳ ಮೇಲೆ ತುಂಬಾ ಪ್ರೀತಿ. ನನಗಿಂತಲೂ ಒಂದು ಕೈ ಹೆಚ್ಚು ಪ್ರೀತಿ. ಎಲ್ಲೂ ಹೋಗುತ್ತಿರಲಿಲ್ಲ. ಅವರು ಬರುತ್ತಿದ್ದಿದ್ದೇ ವೀಕೆಂಡ್‌ನಲ್ಲಿ ಅಂತ ಅನಿಸುತ್ತಿದೆ. 

20 ರಿಂದ 25 ದಿನ ಬೆಂಗಳೂರಿನಲ್ಲಿ ಇರೋರು. ಒಂದು ಐದು ದಿನ ನಮ್ಮ ಜೊತೆ ಮನೆಯಲ್ಲಿ ಇರೋರು. ಮನೆಯಲ್ಲಿ ಇದ್ದಾಗ ಪೂರ್ತಿ ಮಕ್ಕಳ ಜೊತೆನೇ ಇರೋರು. ಮಕ್ಕಳು ಓದಿನ ಬಗ್ಗೆ ಎಲ್ಲಾ ವಿಚಾರಿಸೋರು. ಎಲ್ಲೂ ಹೋಗುವುದೇನಿಲ್ಲ. ಹೊರಗೇ ಹೋಗುತ್ತಿರಲಿಲ್ಲ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.