// custom css

ಸಿದ್ದು ಎಡೆಮುರಿ ಕಟ್ಟಲು ನನ್ನ ಮಗ ಕುಮಾರಸ್ವಾಮಿ ರೆಡಿಯಾಗಿದ್ದಾನೆ; ಬಿಜೆಪಿ ಗೆದ್ದರೆ ಎಲ್ಲವೂ ಸಾಧ್ಯ

 | 
Ghi

ಸಿದ್ದರಾಮಯ್ಯ ಬಗ್ಗೆ ಹುಷಾರಾಗಿರಿ. ಅವರು ಮೋಸ ಮಾಡುತ್ತಾರೆ ಎಂದು ರಾಮಕೃಷ್ಣ ಹೆಗಡೆ ನನಗೆ ಹೇಳಿದ್ದರು. ಅವರ ಮಾತು ಕೇಳದೆ ಸಿದ್ದರಾಮಯ್ಯನನ್ನು ಜನತಾ ದಳಕ್ಕೆ ಕರೆತಂದು ತಪ್ಪು ಮಾಡಿದೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ ದೇವೇಗೌಡ ಅಸಮಾಧಾನ ಹೊರಹಾಕಿದರು.

ಈ ಹಿಂದೆ ದೇವೆಗೌಡರು ಮೋದಿ ಪ್ರಧಾನಿ ಆದರೆ ತಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಎಂದೆಲ್ಲಾ ಬಡಾಯಿ ಕೊಚ್ಚಿಕೊಳ್ಳುವ ಮೂಲಕ ಜನರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಇದೀಗ ಅಳಿಯನನ್ನು ಬಿಜೆಪಿಯಲ್ಲಿಯೆ ಕಣಕ್ಕೆ ಇಳಿಸಿದ್ದಾರೆ ಇದರಿಂದಲೇ ತಿಳಿಯುತ್ತದೆ ಅವರು ಇಂತಹವರು ಎಂದು ಹರಿಹಾಯ್ದಿದಿದ್ದಾರೆ.

ಬನ್ನಿ ಈಗಲೂ ನೀವೇ ಚುನಾವಣೆಗೆ ನಿಲ್ಲಿ, ವರುಣಾಗೆ ರಾಜೀನಾಮೆ ನೀಡಿ ನನ್ನ ಎದುರು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದು ಚುನಾವಣೆ ಎದುರಿಸಿ. ಇಲ್ಲಾ ಬನ್ನಿ ಲೋಕಸಭೆಯಲ್ಲಿ ಜನ ನಿಮಗೆ ಮತ ಹಾಕುತ್ತಾರೋ ನನಗೆ ಹಾಕುತ್ತಾರೋ ನೋಡುತ್ತೇನೆ ಎಂದು ಜೆಡಿಎಸ್  ಹಿರಿಯರಾದ ದೇವೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.

ಸಿದ್ದರಾಮಯ್ಯ ಇನ್ನೂ ಬದುಕಿದ್ದಾನೆ, ಅವರನ್ನೇ ಕೇಳಿ ಎಂದು ಹೇಳಿದ್ದಾರೆ. ತನ್ನದೇ ಸಮಾಜದವರನ್ನು ಸಿದ್ದರಾಮಯ್ಯ ಬೆಳೆಯಲು ಬಿಡಲಿಲ್ಲ. ದೇವೇಗೌಡರ ಆಪ್ತರೆಂಬ ಕಾರಣಕ್ಕೆ ಹಲವರನ್ನು ಮಂತ್ರಿ ಮಾಡಲಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರ ಗೆಲುವಿಗೆ ಹೆಚ್​ಡಿ ದೇವೇಗೌಡ ರಾಜಕೀಯ ತಂತ್ರ ರೂಪಿಸಿದ್ದಾರೆ ಹಾಗೂ ಸಿದ್ಧರಾಮಯ್ಯ ಕುರಿತು ಟೀಕೆ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.