ಸಿದ್ದರಾಮಯ್ಯ ಬಸ್ಸ್ ಟಿಕೆಟ್ ಫ್ರೀ ಕೊಟ್ಟ ಬಳಿಕ ನನ್ನ ಹೆಂಡತಿ ಮನೆಗೆ ಬರ್ತಿಲ್ಲ, ಪತ್ನಿಯ ಮುಖ ನೋಡದೆ ಕಂಗಾಲಾದ ಪತಿ

 | 
ರಿ

ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದ ದಿನದಿಂದ ಸಾರಿಗೆ ಬಸ್​ನಲ್ಲಿ ಸಂಚರಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಮನೆಯಲ್ಲಿ ಕುಳಿತು ಬೇಸರಗೊಂಡಿದ್ದ ಮಹಿಳೆಯರು ಪ್ರವಾಸಕ್ಕೆ ತೆರಳುತ್ತಿದ್ದಾರೆ. ಭಾನುವಾರ ಅಮವಾಸ್ಯೆ ಹಿನ್ನೆಲೆ ರಾಜ್ಯದ ಧಾರ್ಮಿಕ ಕ್ಷೇತ್ರಗಳಿಗೆ ಅಪಾರ ಸಂಖ್ಯೆಯಲ್ಲಿ ಮಹಿಳಾ ಭಕ್ತರು ತೆರಳಿದ್ದರು. 

ಫ್ರೀ ಬಸ್​ ಇತ್ತು ಅಲ್ಲವಾ, ಅದಕ್ಕೆ ದೇವರ ದರ್ಶನಕ್ಕೆ ಬಂದಿದ್ದೇವೆ ಎಂದು ಮಹಿಳೆಯರು ಹೇಳುತ್ತಿದ್ದರು. ಈ ಬಗ್ಗೆ ಮಾತನಾಡಿದ ವ್ಯಕ್ತಿಯೊಬ್ಬರು, ಫ್ರೀ ಬಸ್ ​ ಬಂದಾಗಿನಿಂದ ನನ್ನ ಹೆಂಡತಿ ಮನೆಯಲ್ಲಿ ಇಲ್ಲ. ಇದು ಹೀಗೆ ಮುಂದುವರೆದರೆ ನಾನು ಬದುಕುವುದಿಲ್ಲ. ಸಾಯುತ್ತೇನೆ ಎಂದು ತಮ್ಮ ಗೋಳುತೋಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಕೇವಲ ಮಹಿಳೆಯರೇ ವೋಟ್ ಹಾಕಿದ್ದಾರೆ ಅನ್ನೋ ರೀತಿಯಲ್ಲಿ ಅವರಿಗೆ ಉಚಿತ ಪ್ರಯಾಣ ಮಾಡಿದ್ದಾರೆ. ಪುರುಷರು ಯಾರೂ ವೋಟ್ ಹಾಕೇ ಇಲ್ಲವಾ ಎಂದು ಪ್ರಶ್ನೆ ಮಾಡಿದ್ದಾರೆ. ಬಸ್​ನಲ್ಲಿ ನಮಗೆ ಹತ್ತಲು ಸಹ ಆಗುತ್ತಿಲ್ಲ. ಈಗ ಕೇಂದ್ರದವರು ಕೊಡ್ತಿಲ್ಲ ಎಂದು ಹೇಳಿ ಅಕ್ಕಿ ಕೊಡಲು ಪರದಾಡುತ್ತಿದ್ದಾರೆ. 60 ವರ್ಷ ಮೇಲ್ಪಟ್ಟವರಿಗೆ ಅರ್ಧ ಚಾರ್ಜ್ ತೆಗೆದುಕೊಳ್ಳಬಹುದು. 

ಮಹಿಳೆಯರಿಗೂ ಅರ್ಧ ದರ ನಿಗದಿ ಮಾಡಿದ್ರೆ ಡೀಸೆಲ್​ಗಾದ್ರೂ ಹಣ ಆಗಿರೋದು. ಇಲ್ಲಿ ಫ್ರೀ ಮಾಡಿ ಎಣ್ಣೆ ಮೇಲೆ 20 ರೂಪಾಯಿನಷ್ಟು ಹೆಚ್ಚು ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಎಣ್ಣೆ ರೇಟ್ ಹೆಚ್ಚು ಮಾಡಿದ್ದರಿಂದ ನಮ್ಮ ಹೆಂಗಸರ ಬಸ್​ ಚಾರ್ಜ್ ನಾವೇ ಕೊಟ್ಟಂಗೆ ಆಯ್ತು ಅಲ್ಲವಾ ಎಂದು ಹಿರಿಯ ಪ್ರಯಾಣಿಕ ಕಿಡಿಕಾರಿದರು. 

ಗಂಡಸರೇನೋ ವೋಟ್ ಹಾಕೇ ಇಲ್ಲವಾ? ಮುಂದಿನ ಸಲ ಚುನಾವಣೆಗೆ ಬನ್ನಿ. ಇನ್ನು ಮುಂದೆ ಪಿಕ್ಚರ್ ಬಾಕಿ ಇದೆ. ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.