ನಾಗವಲ್ಲಿಯ ನಿಜವಾದ ಮನೆ ಕೇರಳದಲ್ಲಿದೆ, ಈ ಮನೆ ಒಳಗೆಡೆ ಈಗಲೂ ನಾಗವಲ್ಲಿ ನಡೆದಾಡುತ್ತಾಳೆ

 | 
ಪಗದ೮
ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಕಾಡಿದ ಪಾತ್ರ ಯಾವುದೆಂದು ಕೇಳಿದ್ರೆ ಮೊದಲು ನೆನಪಾಗುವುದೇ ನಾಗವಲ್ಲಿಯ ಪಾತ್ರ. ಹೌದು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಹಳವಾಗಿ ಕಾಡಿದ ಹೆಸರೇ ನಾಗವಲ್ಲಿ. ಯಾರೀಕೆ? ಏನಾಗಿದ್ದಳು? ಎಲ್ಲಿಯವಳು? ಇದ್ದಕ್ಕಿದ್ದಂತೆ ಈಕೆಯ ಹೆಸರು ಕೇಳಿಬಂದಿದ್ದೇಕೆ? ಎಂಬಿತ್ಯಾದಿ ಪ್ರಶ್ನೆಗಳು ಈಗಲೂ ತರ್ಕಕ್ಕೆ ನಿಲುಕದೆ ಕಾಡುತ್ತಿವೆ. ಕೆಲವರು ನಾಗವಲ್ಲಿ ಕಾಲ್ಪನಿಕ ಪಾತ್ರಮಾತ್ರ ಎಂದರೆ ಇನ್ನು ಕೆಲವರು ಇಲ್ಲ ಇದು ಸತ್ಯ ಘಟನೆ ಎನ್ನುತ್ತಾರೆ. ಆದ್ರೆ ನಮಗೀಗ ಸಿಕ್ಕಿರುವ ಮಾಹಿತಿ ಪ್ರಕಾರ ನಾಗವಲ್ಲಿಯ ನಿಜ ಕಥೆಯಲ್ಲಿ ಅವಳು ನರ್ತಕಿಯು ಅಲ್ಲ. ರಾಜ ರಾಜೇಂದ್ರ ಬಹದ್ದೂರ್ ಎನ್ನುವ ರಾಜನೂ ಇಲ್ಲ.
ಮಲಯಾಳಂನ ಯಶಸ್ವಿ ಚಿತ್ರ ಮಣಿಚಿತ್ರಥಾಝು ಚಿತ್ರದ ರೀಮೇಕ್ ಚಿತ್ರವೇ ಆಪ್ತಮಿತ್ರ. ಈ ಚಿತ್ರದ ಬಿಡುಗಡೆಗೂ ಮುನ್ನ ತಾರೆ ಸೌಂದರ್ಯಾ ವಿಮಾನ ಅಪಘಾತದಲ್ಲಿ ಮೃತಪಟ್ಟರು. ನಾಗವಲ್ಲಿ ಕಥನವನ್ನೇ ಹೇಳಿದ ಆಪ್ತರಕ್ಷಕ ಚಿತ್ರ ಬಿಡುಗಡೆಯಾದ ಬಳಿಕ ವಿಷ್ಣುವರ್ಧನ್ ಕಾಲವಶರಾದ್ದರಿಂದ ನಾಗವಲ್ಲಿ ಕೊಲೆ ಪಾತಕಿ ಎನ್ನಿಸಿ ಕೊಳ್ಳುವಂತಾಯಿತು.ಘಟನೆಗಳ ಬಳಿಕ ಮುಖ್ಯವಾಗಿ ಇದನ್ನು ಲಾಭ ಮಾಡಿಕೊಂಡಿದ್ದು ಜ್ಯೋತಿಷಿಗಳು. ಇದಕ್ಕೆ ನಾಗವಲ್ಲಿ ದೋಷ ಎಂದು ಹೆಸರಿಟ್ಟು ಜನರನ್ನು ಸುಲಿಗೆ ಮಾಡಲು ಮುಂದಾದರು. ಟಿವಿ ಚಾನಲ್ ಗಳಲ್ಲಿ ದೋಷದ ಪರಿಹಾರ ಹೇಗೆ ಎಂಬಿತ್ಯಾದಿ ವಿಷಯಗಳನ್ನು ಕೇಳುಗರ ಕಿವಿಗೆ ಹಾಕಿ ಕಿವಿಗೆ ಪುಷ್ಪಾರ್ಚನೆಯನ್ನೂ ಮಾಡಿಬಿಟ್ಟರು.
ಸ್ನೇಹಿತರೇ..
500 ವರ್ಷಗಳ ಹಿಂದೆ ಕೇರಳದಲ್ಲಿ ಜಾತೀಯತೆ ಬಹಳವಿತ್ತು. ಮೇಲ್ಜಾತಿ ಕೆಳಜಾತಿ ಎನ್ನುವ ಭಾವನೆ ಎಲ್ಲರಲ್ಲೂ ಮನೆ ಮಾಡಿತ್ತು. ಈಗಿನ ತಿರುವನಂತಪುರಂ ತಿರುವಂಕೂರ್ ಎಂದು ಕರೆಸಿಕೊಂಡಿತ್ತು.ಅಲ್ಲಿನ ಮಹಾರಾಜರು ಕೇರಳವನ್ನು ಕೂಡಾ ಆಳುತ್ತಿದ್ದರು. ಆಗ ಅಲಪಣ್ ಎಂಬ ಜಿಲ್ಲೆಯಲ್ಲಿ ಇಬ್ಬರು ಕೆಳ ಜಾತಿಯ ಸಹೋದರರಿದ್ದರು ಅವರು ಯುದ್ದದ ಎಲ್ಲ ಕಲೆಗಳನ್ನು ಕಲಿತು ಯುದ್ದಕ್ಕೆ ಹೇಳಿ ಮಾಡಿಸಿದಂತಹ ಪರಾಕ್ರಮಿಗಳಾಗಿದ್ದರು.ಅವರ ಬಗ್ಗೆ ಬಹಳಷ್ಟು ಕೇಳಿ ತಿಳಿದಿದ್ದ ಮಹಾರಾಜರು ಅವರಿಬ್ಬರನ್ನು ಆಸ್ಥಾನಕ್ಕೆ ಕರೆತರಲು ಭಟರನ್ನು ಕಳಿಸಿದ್ದರು. ಮಹಾರಾಜರು ತಮಗೇನಾದರೂ ಮಾಡಿಬಿಟ್ಟರೆ , ತಮ್ಮ ಪರಾಕ್ರಮ ಅಡಗಿಸಲು ಕೊಲೆ ಮಾಡಿಬಿಟ್ಟರೆ ಎಂಬ ಯೋಚನೆಯಲ್ಲಿ ಆ ಕೆಳ ಜಾತಿಯ ಸಹೋದರರು ಆಸ್ಥಾನಕ್ಕೆ ಹೋಗುವ ಬದಲು ವೀರ ಮರಣ ಅಪ್ಪುವುದು ಒಳಿತು ಎಂದು ತಾವೇ ಯುದ್ದ ಮಾಡಿಕೊಂಡು ವೀರ ಮರಣ ಅಪ್ಪುತ್ತಾರೆ.
ಇಬ್ಬರು ಸಹೋದರರ ಸಾವಿನಿಂದ ಕಂಗೆಟ್ಟ ಅವರ ಸಹೋದರಿ ಮಹಾರಾಜರ ಮುಂದೆ ತನ್ನ ನೋವನ್ನು ತೋಡಿಕೊಂಡಾಗ ಮಹಾರಾಜರು ತನ್ನ ಕಾರ್ಯಕ್ಕೆ ಬೇಸರಗೊಂಡು ಅಲಪಣ್ ಮೇಳ ಎಂಬಲ್ಲಿ ದೊಡ್ದ ಬಂಗಲೆಯನ್ನು ನಿರ್ಮಿಸಿಕೊಡುತ್ತಾರೆ. ಅವಳಿಗೆ ಸಾಕಷ್ಟು ಚಿನ್ನ, ಬೆಳ್ಳಿ, ಜಮೀನನ್ನು ನೀಡಿ ತನ್ನ ತಪ್ಪಿಗೆ ಪಶ್ಚಾತ್ತಾಪ ಪಡುತ್ತಾನೆ. ಹೀಗೆ ಬಡವಳಾಗಿದ್ದ ಆ ಕೆಳ ಜಾತಿಯ ಸಹೋದರಿ ಮಹಾರಣಿಯಂತೆ ಆ ಬಂಗಲೆಯಲ್ಲಿ ಬದುಕುತ್ತಾಳೆ. ಹೀಗೆ ಅವಳ ಹಲವು ತಲೆಮಾರು ಶ್ರೀಮಂತಿಕೆಯಿಂದ ನೆಮ್ಮದಿಯಿಂದ ಅಲ್ಲಿ ಬದುಕುತ್ತಾರೆ. ಸರಿ ಸುಮಾರು 400 ವರ್ಷಗಳ ನಂತರ ಇಲ್ಲಿ ನಾಗವಲ್ಲಿಯ ಕಥೆ ಆರಂಭವಾಗುತ್ತದೆ.
ಸ್ನೇಹಿತರೇ.. ಸಹೋದರಿಯ ಮುಂದಿನ ತಲೆಮಾರುಗಳಲ್ಲಿ ಒಬ್ಬಳಾದ ನಾರಾಯಣಿ ಅಮ್ಮ ಎಂಬ ಮಹಿಳೆ ಅಲ್ಲಿನ ಜಮೀನನ್ನು, ಆಸ್ತಿಯನ್ನು ನೋಡಿಕೊಳ್ಳುತ್ತಿರುತ್ತಾಳೆ . ಅವಳಿಗೆ ವಯಸ್ಸಾದ ಕಾರಣ ಕೊಚ್ಚುಕುನ್ನಿ ಖಾನರ್ ಎಂಬ ವ್ಯಕ್ತಿಯನ್ನು ಆಸ್ತಿಯನ್ನು ನೋಡಿಕೊಳ್ಳಲೆಂದು ನೇಮಿಸಿಕೊಳ್ಳುತ್ತಾಳೆ. ಆಪ್ತಮಿತ್ರ ಸಿನೆಮಾ ಅಲ್ಲಿ ಬರುವ ರಾಜ ರಾಜೇಂದ್ರ ಬಹದ್ದೂರ್ ಪಾತ್ರ ಇವನನ್ನು ನೋಡಿಯೇ ಬರೆದಿದ್ದು. ಆದರೆ ಅಲ್ಲಿ ಹೇಳುವಂತೆ ಇವನು ಕೆಟ್ಟವನಾಗಿರುವುದಿಲ್ಲ ಬದಲಿಗೆ ಬಡವರ ಕಂಡರೆ ಕರುಣೆ. ಹೆಂಗಸರ ಕಂಡರೆ ಗೌರವ ಹೊಂದಿರುವ ವ್ಯಕ್ತಿಯಾಗಿರುತ್ತಾನೆ. ಆವನ ಕೀರ್ತಿ ದಿನದಿಂದ ದಿನಕ್ಕೆ ಎಲ್ಲೆಡೆ ಪ್ರಚಾರವಾಗುತ್ತಿರುತ್ತದೆ. ತಿರುವಾಂಕೂರು ಸಂಸ್ಥಾನದ ಮಹಾರಾಜರು ಅವನಿಗೆ ಈ ಪ್ರಾಂತ್ಯದ ಪಾಳೆಗಾರನನ್ನಾಗಿ ಬೇರೆ ನೇಮಿಸಿ ಬಿಡುತ್ತಾರೆ.ಇದನ್ನೆಲ್ಲ ಕಂಡ ನಾರಾಯಣಿ ಅಮ್ಮ ಮನೆಯವರಿಗಿಂತ ಕರೆತಂದ ಆಳು ಹೆಚ್ಚು ಹೆಸರು ಮಾಡುತ್ತಿರುವುದನ್ನು ನಾರಾಯಣಿ ಅಮ್ಮ ಹಾಗೂ ಅವರ ಮಕ್ಕಳಿಗೆ ಸಹಿಸಲು ಸಾಧ್ಯವಾಗದೆ ಖಾನಾರ್ ವಿರುದ್ಧ ಕತ್ತಿ ಮಸೆಯುತ್ತಲೇ ಇರುತ್ತಾರೆ. ಖಾನರ್ ಗೆ ಇವರ ದ್ವೇಷದ ಅರಿವೂ ಕೂಡಾ ಇರೋದಿಲ್ಲ.
ಸ್ನೇಹಿತರೇ.. ಖನಾರ ದಿನವಿಡಿ ಕೆಲಸ ಮಾಡಿ ಸಂಜೆ ವೇಳೆಯಲ್ಲಿ ನೃತ್ಯ ವೀಕ್ಷಣೆಯ ಹವ್ಯಾಸ ಬೆಳೆಸಿಕೊಂಡಿರುತ್ತಾನೆ. ಆಗ ಅಲ್ಲಿ ಪರಿಚಯವಾದವಳೇ ನಾಗವಲ್ಲಿ. ಕಣ್ಣಿನಲ್ಲೇ ನೃತ್ಯದ ಭಾವ ಹೊಮ್ಮಿಸಿ ಖಾನರ್ ಮನಗೆದ್ದಿದ್ದಳು. ಬಡವರ ಮನೆಯ ಮಗಳಾದ ಅವಳನ್ನು ಪ್ರೀತಿಸಿ ಮದುವೆಯಾದ ಖಾನಾರ್ ಅವಳ ಪ್ರೀತಿಯಲ್ಲಿ ಸಂತೋಷವಾಗಿ ಜೀವನ ನಡೆಸಲು ಆರಂಭಿಸಿದ ಕೆಲವೇ ದಿನಗಳಲ್ಲಿ ಕೋಣೆಯೊಂದರಲ್ಲಿ ಖಡ್ಗದಿಂದ ಕೊಚ್ಚು ಕೊಂದಿರುವ ರೀತಿಯಲ್ಲಿ ಸಾವನೊಪ್ಪುತ್ತಾನೆ. ನಾಗವಲ್ಲಿಯ ಮದುವೆ ಮಾಡಿಕೊಂಡು ಬಂದಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ನಾರಾಯಣಿ ಅಮ್ಮನ ಮೇಲೆ ಎಲ್ಲರ ದೃಷ್ಟಿ ಬೀಳುತ್ತದೆ. ಆದರೆ ನಾರಾಯಣಿ ಅಮ್ಮ ಆಗಲಿ ಅವರ ಮಕ್ಕಳಾಗಲಿ ಈ ಕೃತ್ಯ ಮಾಡಿರುವುದಿಲ್ಲ. ಒಂದು ವೇಳೆ ಮಾಡುವುದಿದ್ದರೆ ಈ ಮೊದಲೇ ಮಾಡಿಬಿಡುತ್ತಿದ್ದರು. ಆದರೆ ಅದಕ್ಕಿಂತ ಆಘಾತ ತಂದಿದ್ದ ಸುದ್ದಿಯೆಂದರೆ ಅಲಪಣ್ ಮೇಳದಿಂದ ನಾಗವಲ್ಲಿ ಕಾಣೆಯಾಗಿದ್ದು. ಖಾನರ್ ಅವಳಿಗೆ ಏನೋ ಮಾಡಿಬಿಟ್ಟಿದ್ದಾನೆ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಊಹಾಪೋಹ ಹರಿದಾಡುತ್ತಿದ್ದಾಗಲೆ ಊರ ಜನರಿಗೆ ತಿಳಿಯುತ್ತದೆ ನಾಗವಲ್ಲಿ ಸತ್ತಿಲ್ಲ ಬದಲಾಗಿ ನೃತ್ಯ ಕಲಾವಿದ ರಾಮನಾಥನೊಂದಿಗೆ ಓಡಿ ಹೋಗಿದ್ದಾಳೆ ಎಂಬುದಾಗಿ. 
ಹೌದು ಸ್ನೇಹಿತರೇ.. ನಾಗವಲ್ಲಿ ತನ್ನ ಸಹ ನೃತ್ಯಗಾರ ರಾಮನಾಥನಿಗೆ ಮನಸೋತಿರುತ್ತಾಳೆ. ಅದೊಂದು ದಿನ ಅವರಿಬ್ಬರೂ ಏಕಾಂತವಾಗಿ ಕೋಣೆಯಲ್ಲಿ ಕಳೆಯುತ್ತಿದ್ದಾಗ ಖಾನರ್ ಗೆ ಸತ್ಯ ದರ್ಶನವಾಗುತ್ತದೆ. ಕೋಪಗೊಂಡು ಅವರಿಬ್ಬರನ್ನು ಕೊಲ್ಲಲೆಂದು ಎತ್ತಿದ ಖಡ್ಗವನ್ನು ಅವನಿಗೆ ಹಾಕಿ ನಾಗವಲ್ಲಿ ರಾಮನಾಥ ಇಬ್ಬರು ಅಲ್ಲಿದ್ದ ಚಿನ್ನ, ಹಣವೆಲ್ಲವನ್ನು ಬಾಚಿಕೊಂಡು ಅಲ್ಲಿಂದ ತಪ್ಪಿಸಿಕೊಂಡು ಊರು ಬಿಟ್ಟು ಓಡಿ ಹೋಗುತ್ತಾರೆ. ಕತೆಯಲ್ಲಿ ಬರುವ ನಾಗವಲ್ಲಿ ಅಮಾಯಕ ಮುಗ್ಧ ಹೆಣ್ಣಾಗಿದ್ದರೆ ನಿಜ ಜೀವನದಲ್ಲಿ ನಾಗವಲ್ಲಿ ಒಬ್ಬ ವಂಚಕ ಆಸೆ ಬುರುಕ ಹೆಣ್ಣಾಗಿ ಕಾಣುತ್ತಾಳೆ. ಅಲ್ಲಿಂದ ಮುಂದೆ ಅಲಪಣ್ ಮೇಳ ಹೇಳ ಹೆಸರಿಲ್ಲಂದಾಗಿ ಅವನತಿ ಹೊಂದುತ್ತದೆ. 
ಸ್ನೇಹಿತರೇ....ಇದನ್ನೇ ಕಥೆಯಾಗಿಟ್ಟುಕೊಂಡು ಈಗಾಗಲೇ ಹಲವಾರು ಭಾಷೆಗಳಲ್ಲಿ ಚಿತ್ರ ನಿರ್ಮಿಸಲಾಗಿದೆ. ಆದರೆ ಅದ್ಯಾವ ಚಿತ್ರದಲ್ಲೂ ನಾಗವಲ್ಲಿಯ ನೈಜ ಚಿತ್ರಣ ತೋರಿಸಲೇ ಇಲ್ಲ ಎಂಬುದು. ವಿಷಾದದ ಸಂಗತಿಯಾಗಿದೆ ಎನ್ನುತ್ತಾ ಮತ್ತೂಂದು ಇಂಟ್ರೆಸ್ಟಿಂಗ್ ಮಾಹಿತಿಯೊಂದಿಗೆ ಮುಂದಿನ ಸಂಚಿಕೆಯಲ್ಲಿ ನಿಮ್ಮ ಮುಂದೆ ಬರ್ತೇನೆ ಧನ್ಯವಾದಗಳು...