ಕೊನೆಗೂ ಕರುನಾಡಿಗೆ ಸಿಹಿಸುದ್ದಿ ಕೊಟ್ಟ ನಮ್ರತಾ ಗೌಡ; ಕಾರ್ತಿಕ್ ಮನೆಗೆ ಭೇಟಿ ಕೊಟ್ಟ ನಾಗಿಣಿ

 | 
Js

ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮದಲ್ಲಿ ಗೆಲುವಿನ ನಗೆ ಬೀರಿದವರು ನಟ ಕಾರ್ತಿಕ್ ಮಹೇಶ್. ಬಿಗ್ ಬಾಸ್’ ಮನೆಯಲ್ಲಿದ್ದಾಗ ಗರ್ಭಿಣಿ ತಂಗಿ ತೇಜಸ್ವಿನಿ ಅವರನ್ನ ಕಾರ್ತಿಕ್ ತುಂಬಾ ನೆನಪಿಸಿಕೊಳ್ಳುತ್ತಿದ್ದರು. ಫಿನಾಲೆ ವೀಕ್‌ನಲ್ಲಿ ಬಾಣಂತಿ ತಂಗಿ ಹಾಗೂ ಅಳಿಯನ ಜೊತೆ ವಿಡಿಯೋ ಕಾಲ್‌ನಲ್ಲಿ ಕಾರ್ತಿಕ್ ಮಾತುಕತೆ ನಡೆಸಿದ್ದರು.

ಬಿಗ್ ಬಾಸ್ ಮೂಲಕ ಕಾರ್ತಿಕ್ ತಂಗಿ ತೇಜಸ್ವಿನಿ ಕೂಡ ಜನಪ್ರಿಯತೆ ಪಡೆದಿದ್ದಾರೆ. ತೇಜಸ್ವಿನಿ ಹಾಗೂ ಮಗುವನ್ನ ಭೇಟಿ ಮಾಡಲು ಕಾರ್ತಿಕ್‌ ಮನೆಗೆ ನಟಿ ನಮ್ರತಾ ಗೌಡ, ಅನುಪಮಾ ಗೌಡ ಹಾಗೂ ನೇಹಾ ಗೌಡ ತೆರಳಿದ್ದರು. ನಮ್ರತಾ, ಅನುಪಮಾ ಹಾಗೂ ನೇಹಾ ಅವರನ್ನ ಭೇಟಿಯಾಗಿ ತೇಜಸ್ವಿನಿ ಸಂತಸಪಟ್ಟಿದ್ದಾರೆ. ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ತೇಜಸ್ವಿನಿ ಹಂಚಿಕೊಂಡಿದ್ದಾರೆ.

ಇನ್ನು ಕೆಲ ದಿನಗಳ ಹಿಂದಷ್ಟೇ ಬಿಗ್ ಬಾಸ್  ಸ್ಪರ್ಧಿಗಳು ಆಚೆ ಬಂದ ಮೇಲೂ ತಮ್ಮ ನಡುವಿನ ಬಾಂಧವ್ಯವನ್ನು ಮತ್ತೆ ಮತ್ತೆ ಮನೆಯಿಂದ ಪಡಿಸುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಕಾರ್ತಿಕ್ ಅವರ ತಂಗಿಯ ಸೀಮಂತ ಮತ್ತು ಹೆರಿಗೆ ಕುರಿತಂತೆ ಮಾತುಕತೆ ನಡೆಯುತ್ತಲೇ ಇತ್ತು. ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಕಾರ್ತಿಕ್ ತಂಗಿಯ ಮಗುವಿಗೆ ತನಿಷಾ ಕುಪ್ಪಂಡ ಸಣ್ಣದೊಂದು ಉಡುಗೊರೆ ನೀಡಿದ್ದರು. ಇದೀಗ ಮತ್ತೆ ಉಡುಗೊರೆ ಕೊಟ್ಟಿದ್ದಾರೆ.

ಅಷ್ಟೇ ಅಲ್ಲದೇ  ಬಿಗ್ ಬಾಸ್‌ ಮನೆಯೊಳಗೆ ಸಿರಿ ಹಾಗೂ ಕಾರ್ತಿಕ್ ಮಧ್ಯೆ ಬಾಂಡಿಂಗ್ ಚೆನ್ನಾಗಿತ್ತು. ಬಹುಮುಖ್ಯ ನಿರ್ಧಾರಗಳನ್ನ ತೆಗೆದುಕೊಳ್ಳುವುದಾಗ ಸಿರಿ ಅವರ ಅಭಿಪ್ರಾಯವನ್ನೂ ಕಾರ್ತಿಕ್‌ ಕೇಳುತ್ತಿದ್ದರು. ಕಾರ್ತಿಕ್ ಅವರನ್ನ ತಮ್ಮನಾಗಿ ಸಿರಿ ಕಂಡಿದ್ದರು. ಬಿಗ್ ಬಾಸ್‌ ಮುಗಿದ್ಮೇಲೂ ಇವರ ನಡುವಿನ ಆತ್ಮೀಯತೆ ಮುಂದುವರೆದಿದೆ.ಕಾರ್ತಿಕ್ ಫ್ಯಾಮಿಲಿಯನ್ನ ಸಿರಿ ಮೀಟ್ ಮಾಡಿದ್ದಾರೆ. ಕಾರ್ತಿಕ್‌ ಅವರ ತಂಗಿ ಹಾಗೂ ತಾಯಿಯನ್ನ ಸಿರಿ ಭೇಟಿ ಮಾಡಿದ್ದಾರೆ. ಕಾರ್ತಿಕ್ ಅಳಿಯನನ್ನ ಸಿರಿ ಅಪ್ಪಿ ಮುದ್ದಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.