ಸಿಹಿಸುದ್ದಿ ಕೊಟ್ಟ ನಮ್ರತಾ ಗೌಡ ಹಾಗೂ ರಕ್ಷಕ್‌ ಬುಲೆಟ್, ಕಾರ್ತಿಕ್ ಹಾಗೂ ಕಿಶನ್ ಗೆ ಕೈತಪ್ಪಿದ ನಾಗಿಣಿ

 | 
Nns
ನಮ್ರತಾ ಗೌಡ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ ಸ್ಯಾಂಡಲ್‌ವುಡ್‌ಗೆ ಬಾಲ ನಟಿಯಾಗಿ ಎಂಟ್ರಿಕೊಟ್ಟಿದ್ದ ನಮ್ರತಾ ಗೌಡ, ಬಳಿಕ ಕಿರುತೆರೆಯಲ್ಲಿ ನಾಯಕಿಯಾಗಿ ಗಮನ ಸೆಳೆದರು. ನಾಗಿಣಿ ಸೀರಿಯಲ್‌ನಲ್ಲಿ ಶೀರ್ಷಿಕೆ ಪಾತ್ರದಲ್ಲಿ ಕಾಣಿಸಿಕೊಂಡು, ಕನ್ನಡಿಗರ ಮನಗೆದ್ದರು. ಅದಾದ ಮೇಲೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರಲ್ಲಿಯೂ ಸ್ಪರ್ಧಿಯಾಗಿ ಫಿನಾಲೆವರೆಗೂ ಇದ್ದರು. ಇದೀಗ ಇದೇ ನಟಿ, ಸ್ಯಾಂಡಲ್‌ವುಡ್‌ ಪ್ರವೇಶಿಸುತ್ತಿದ್ದಾರೆ.
ಹೌದು ಕೋಣ, ಕುಪ್ಪಂಡ ಪ್ರೊಡಕ್ಷನ್ ಚೊಚ್ಚಲ ಪ್ರಯತ್ನ. ಈ ಬ್ಯಾನರ್‌ ಮೂಲಕ ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ಖ್ಯಾತಿಯ ತನಿಷಾ ಕುಪ್ಪಂಡ, ಕಾರ್ತಿಕ್ ಕಿರಣ್ ಸಂಕಲ್ಪ ಹಾಗೂ ರವಿ ಕಿರಣ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ನೈಜ ಘಟನೆ ಆಧರಿಸಿದ ಸಿನಿಮಾ ಎಂಬ ಕಾರಣಕ್ಕೆ ಕೋಣ ಹೆಚ್ಚು ಕುತೂಹಲ ಮೂಡಿಸಿದೆ. ಎಸ್ ಹರಿಕೃಷ್ಣ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಈ ಕಥೆಯಲ್ಲಿ ಕೋಮಲ್ ಹೀರೋ ಅನ್ನೋದು ಒಂದು ಕಡೆಯಾದ್ರೆ, ಕೋಣ ಈ ಚಿತ್ರದ ಮತ್ತೊಬ್ಬ ಹೀರೋ ಎಂದು ಚಿತ್ರತಂಡ ಈ ಹಿಂದೆಯೇ ಹೇಳಿತ್ತು.ಅದರಂತೆ ಇದೀಗ ಇದೇ ಸಿನಿಮಾದ ನಾಯಕಿ ಯಾರು? ಈ ವಿಚಾರ ಇಲ್ಲಿಯವರೆಗೂ ರಿವೀಲ್‌ ಆಗಿರಲಿಲ್ಲ. ಇದೀಗ ಅದೂ ಬಹಿರಂಗವಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಬಾಲನಟಿಯಾಗಿ ಗುರುತಿಸಿಕೊಂಡಿದ್ದ ಮತ್ತು ಕನ್ನಡ ಕಿರುತೆರೆಯಲ್ಲಿಯೂ ಗಮನ ಸೆಳೆದ ನಟಿ ನಮ್ರತಾ ಗೌಡ, ಕೋಣ ಚಿತ್ರಕ್ಕೆ ನಾಯಕಿಯಾಗಿದ್ದಾರೆ.
ಅಷ್ಟಕ್ಕೂ ನಮ್ರತಾ ಗೌಡ ಅವರ ಬರ್ತ್‌ಡೇ ಪ್ರಯುಕ್ತ ನಿರ್ಮಾಪಕಿ ತನಿಷಾ ಕುಪ್ಪಂಡ, ನಾಯಕಿಯ ಫಸ್ಟ್‌ ಲುಕ್‌ ರಿವೀಲ್‌ ಮಾಡಿದ್ದಾರೆ.ಕೋಣ ಚಿತ್ರದಲ್ಲಿ ಕೋಮಲ್‌ ಕುಮಾರ್‌ಗೆ ಜೋಡಿಯಾಗಲಿರುವ ನಮ್ರತಾ, ಹಳ್ಳಿ ಹುಡುಗಿ ಗೆಟಪ್‌ನಲ್ಲಿ ಎದುರಾಗಿದ್ದಾರೆ. ಅವರಿಗಿಲ್ಲಿ ಶ್ರುತಿ ಹೆಸರಿನ ಪಾತ್ರ. ಹಾಗಾಗಿ ಹೊಸ ಸಿನಿಮಾ ಅಲ್ಲಿ ನಮೃತ ಮಿಂಚಲಿದ್ದಾರೆ. ಅಷ್ಟೇ ಅಲ್ಲ ಕೆಲ ಧಾರವಾಹಿಗಳಲ್ಲೂ ಕಾಣಿಸಿ ಕೊಳ್ಳಲಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.