ನನಗೆ ಮದುವೆ ಆಗೋಕೆ ಭಯ ಎಂದ ನಮ್ರತಾ ಗೌಡ, ಕಾರಣ ಕೇಳಿ ಶಾಕ್ ಆದ ಗಂಡಸರು
ಇತ್ತೀಚೆಗಿನ ದಿನಗಳಲ್ಲಿ ಮದುವೆ ಎಂಬ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವಂತ ವಿಚಾರ. ಸುಮಾರು ಜನರಲ್ಲಿ ಮದುವೆ ವಿಚಾರ ಆಸಕ್ತಿಯಿಂದ ದೂರವಾದಂತ ವಿಚಾರವಾಗಿದೆ. ಸಾಕಷ್ಟು ಸರ್ವೇಗಳಲ್ಲೂ ಮದುವೆಯಾಗುವುದಕ್ಕೆ 90% ಮಂದಿ ನಿರಾಸಕ್ತಿ ತೋರಿಸಿರುವ ಉದಾಹರಣೆ ಇದೆ.
ಬಿಗ್ ಬಾಸ್ ಕನ್ನಡ ಸೀಸನ್ 10ನಲ್ಲಿ ಹಲವು ವಿಭಿನ್ನ ವ್ಯಕ್ತಿತ್ವದ ವ್ಯಕ್ತಿಗಳು ಬಂದಿದ್ದಾರೆ. ಪ್ರತಿ ಸೀಸನ್‌ನಲ್ಲಿಯೂ ಅದು ಸಹಜವೇ ಸರಿ. ಅದಕ್ಕೆ ಹಲವು ಟೀಂಗಳು ಆಗುತ್ತವೆ. ಇನ್ನು ಹಲವರು ಶತ್ರುಗಳಾಗಿಯೂ ಬದಲಾಗುತ್ತಾರೆ. ಈ ಬಾರಿಯೂ ವಿಭಿನ್ನ ಮನಸ್ಥಿತಿಗಳನ್ನು ನೋಡುತ್ತಾ ಇದ್ದೀವಿ. ಜೊತೆಗೆ ಒಂದಷ್ಟು ಹಾಡು ಹರಟೆ ಹೊಡೆಯುವುದಕ್ಕೂ ಟೀಂಗಳು ಆಗುತ್ತವೆ. ಇದೀಗ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ವೈಯಕ್ತಿಕ ವಿಚಾರಗಳ ಚರ್ಚೆಗಳು ನಡೆಯುತ್ತಿವೆ.
ಎಲ್ಲರೂ ವೈಯಕ್ತಿಕ ವಿಚಾರಗಳನ್ನು ಎಲ್ಲೆ ಬಳಿಯೂ ಹಂಚಿಕೊಳ್ಳುವುದಿಲ್ಲ. ಅದಕ್ಕೆ ಅಂತ ಒಂದು ಬಾಂಡಿಂಗ್ ಬೇಕಾಗಿರುತ್ತದೆ. ಬಿಗ್ ಬಾಸ್ ಮನೆಯಲ್ಲಿ ಸಿರಿ ವಿಚಾರಕ್ಕೆ ಅದು ಬೇಗನೇ ಸಿಕ್ಕಿದೆ. ಸಿರಿ ತನ್ನ ವೈಯಕ್ತಿಕ ವಿಚಾರವನ್ನು ಮನಬಿಚ್ಚಿ ಮಾತನಾಡಿದ್ದಾರೆ. ಅದರಲ್ಲೂ ಮದುವೆ ವಿಚಾರವನ್ನು. ಫ್ರೆಂಡ್ಸ್ ಜೊತೆಗೆ ಕೂತು ಮಾತನಾಡಿದ್ದಾರೆ. ಮದುವೆ ಯಾಕೆ ಆಗಿಲ್ಲ ಎಂಬ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಆಗ ವಿನಯ್ ಗೌಡ ಅವರೂ ಕೂಡ ತನ್ನ ಹೆಂಡತಿ ಮದುವೆ ಆದರೂ ಕೂಡ ಬಹಳಷ್ಟು ಹೊತ್ತು ಅವಳ ತಾಯಿಯೊಂದಿಗೆ ಮಾತನಾಡುತ್ತಲೇ ಇರುತ್ತಾಳೆ ಅದೇನು ಮಾತನಾಡುವುದು ಇರುತ್ತದೆ ಪ್ರತಿದಿನ ಎಂದಿದ್ದಾರೆ. ಆಗ ನಮೃತಾ ನಾನೂ ಕೂಡ ಅದೇ ಕಾರಣಕ್ಕೆ ಇನ್ನು ಮದುವೆ ಆಗಿಲ್ಲ. ನಾಳೆ ಬಂದವರು ಅಮ್ಮನನ್ನು ನನ್ನನ್ನು ದೂರ ಮಾಡುವ ನೋವು ನನಗೆ ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.