ನಮ್ರತಾ ಗೌಡ ಮದುವೆ ಫಿಕ್ಸ್, ಬಿಗ್ ಬಾಸ್ ಮನೆಯಲ್ಲಿ ಹುಡುಗನ ಹೆಸರು ಬಹಿರಂಗ

 | 
ರ

ಬಿಗ್​ಬಾಸ್ ಮನೆಯಲ್ಲಿ ಪ್ರೀತಿ-ಪ್ರೇಮ ಸಾಮಾನ್ಯ ಎಂಬಂತಾಗಿದೆ. ಕೆಲವು ಸ್ಪರ್ಧಿಗಳಂತೂ ಪ್ರೇಕ್ಷಕರನ್ನು ಸೆಳೆಯಲೆಂದೇ ಪ್ರೀತಿ-ಪ್ರೇಮದ ಮಾತನಾಡುವುದು ಹಾಗೆ ನಡೆದುಕೊಳ್ಳುವುದು ಮಾಡುತ್ತಾರೆಂಬ ಆರೋಪವೂ ಇದೆ. ಈ ಸೀಸನ್​ನಲ್ಲಿ ಮನೆಯಲ್ಲಿ ಮೂರು ಪ್ರೇಮಕತೆಗಳ ರೀತಿ ಕಾಣಿಸಿಕೊಂಡವು. ಮೂರೂ ಸಹ ಅರ್ಧದಲ್ಲಿಯೇ ಮುರುಟಿ ಹೋದವು. ಇದೀಗ ಇನ್ನೇನು ಫಿನಾಲೆ ಹತ್ತಿರ ಬರುತ್ತಿರುವಾಗ ಕಾರ್ತಿಕ್ ಹಾಗೂ ನಮ್ರತಾ ನಡುವೆ ಚರ್ಚೆ ಶುರುವಾಗಿದೆ.

ಇನ್ನು ಇದೇ ಸೀಸನ್​ನ ಮಾಜಿ ಸ್ಪರ್ಧಿ ಸ್ನೇಹಿತ್, ನಮ್ರತಾರ ಮುಂದೆ ಪ್ರೀತಿ ವಿಷಯ ಹೇಳಿಕೊಂಡಿದ್ದರು. ನಮ್ರತಾ ಬಗ್ಗೆ ಸ್ನೇಹಿತ್ ಬಹಳ ಗಂಭೀರವಾಗಿದ್ದರು. ಹಲವು ಬಾರಿ ಪ್ರೇಮ ನಿವೇದನೆ ಮಾಡಿದ್ದರು. ಆದರೆ ನಮ್ರತಾ ಅದನ್ನು ತಣ್ಣಗೆ ನಿರಾಕರಿಸುತ್ತಲೇ ಬಂದಿದ್ದರು. ಹೊರಗೆ ಆಗಿದ್ದಿದ್ದರೆ ಯೋಚನೆ ಮಾಡಬಹುದಿತ್ತು ಎಂದ ಸಹ ನಮ್ರತಾ ಹೇಳಿದ್ದರು. ಈಗ ನಮ್ರತಾ, ಕಾರ್ತಿಕ್​ಗೆ ಐ ಲೈಕ್ ಯು ಎಂದಿದ್ದು ನೋಡಿ ಪಾಪ ಸ್ನೇಹಿತ್ ಹೃದಯ ಒಡೆದಿರಬೇಕು.

ಇನ್ನು ಹಲವು ಧಾರಾವಾಹಿಗಳ ಮೂಲಕ ಗುರುತಿಸಿಕೊಂಡ ನಮೃತಾ ಅವರಿಗೆ ಈಗ ಗುರೂಜಿಯ ಆಶೀರ್ವಾದ ಕೂಡ ದೊರೆತಿದೆ. ಹೊಸ ವರ್ಷದ ಹೊಸ್ತಿಲಲ್ಲಿ ಗುರೂಜಿ ಆಶೀರ್ವಾದ ಸಿಕ್ಕಿದೆ.  ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಬಿಗ್‌ಬಾಸ್‌ಮನೆಯೊಳಗೆ ಅಡಿಯಿಟ್ಟು ಎಲ್ಲರನ್ನೂ ಆಶೀರ್ವದಿಸಿದ್ದಾರೆ. ನಮ್ರತಾ ಅವರ ಬಳಿ, ನಿಮ್ಮ ಜೀವನದಲ್ಲಿ ಹೊಸ ಬೆಳಕು, ಹೊಸ ವ್ಯಕ್ತಿಯ ಆಗಮನವಾಗಿದೆ ಎಂದು ಹೇಳಿದ್ದಾರೆ. ಅವರ ಮಾತು ಕೇಳಿ ನಮ್ರತಾ ಗೌಡ ಅವರ ಮುಖದಲ್ಲಿ ನಗುವರಳಿದೆ.

ಇನ್ನು ಬಿಗ್ ಬಾಸ್‌ನಲ್ಲಿ  ನಮ್ರತಾ-ಸ್ನೇಹಿತ ಜೋಡಿ ಮೋಡಿ ಮಾಡಿತ್ತು. ನಮ್ರತಾ ಕಡೆಯಿಂದಲೂ ಸ್ನೇಹಿತ್‌ಗೆ ಪ್ರಪೋಸಲ್‌ಗೆ ಗ್ರೀನ್ ಸಿಗ್ನಲ್ ಇದೆಯಾ ಅದನ್ನು ನಮ್ರತಾ ಹೇಳಿಲ್ಲ. ದೊಡ್ಮನೆಗೆ ಬರುವ ಮುನ್ನವೇ ಹೊರಗೆ ನಮ್ರತಾಗೆ ಲವ್ ಇದ್ಯಾ? ಅಥವಾ ಸ್ನೇಹಿತ್ ಜೊತೆ ಪ್ರೇಮಾಂಕುರವಾಗಿದ್ಯಾ ಇಲ್ಲ ಕಾರ್ತಿಕ ಮೇಲೆ ಪ್ರೀತಿ ಮೂಡಿದೆಯಾ ಅದರ ಬಗ್ಗೆ ಸ್ಪಷ್ಟನೆ ಇಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.