ನಮ್ರತಾ ಕಾರ್ತಿಕ್ ಕುಚುಕುಚು, ಉರಿ ತಡೆಯಲಾರದೆ ಲೈವ್ ಬಂದು ಕೂಗಾಡಿದ ಸ್ನೇಹಿತ್

 | 
ವ

ನಮ್ರತಾ, ಕಾರ್ತಿಕ್​ ಜೊತೆ ಸಲುಗೆಯಿಂದ ಇರಲು ಆರಂಭಿಸಿದ ಬಳಿಕ ನಮ್ರತಾರ ವ್ಯಕ್ತಿತ್ವವನ್ನು ಹೀಗಳೆಯುವ ಕೆಲವು ಪೋಸ್ಟ್​ಗಳು ಹರಿದಾಡಲು ಆರಂಭವಾಗಿವೆ. ಈ ಬಗ್ಗೆ ಸ್ನೇಹಿತ್ ಮಾತನಾಡಿದ್ದಾರೆ. ಹೌದು ಬಿಗ್​ಬಾಸ್ 10ರ ಸ್ಪರ್ಧಿ ನಮ್ರತಾ ಇತ್ತೀಚೆಗೆ ಸಹ ಸ್ಪರ್ಧಿ ಕಾರ್ತಿಕ್ ಮಹೇಶ್ ಜೊತೆ ಸಲುಗೆಯಿಂದಿದ್ದಾರೆ. ಇಬ್ಬರೂ ಕೈ-ಕೈ ಹಿಡಿದುಕೊಂಡು ಮಾತನಾಡುತ್ತಿರುವುದು ಹಿಂದೆ ಎಂದೂ ಇರದಷ್ಟು ಪರಸ್ಪರ ಆತ್ಮೀಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ಆದರೆ ನಮ್ರತಾ, ಸ್ನೇಹಿತ್ ಜೊತೆಗೂ ಇಷ್ಟೇ ಆತ್ಮೀಯವಾಗಿದ್ದರು. ಸ್ನೇಹಿತ್, ಬಿಗ್​ಬಾಸ್ ಮನೆಯಲ್ಲಿಯೇ ಹಲವು ಬಾರಿ ನಮ್ರತಾ ಎದುರು ಪ್ರೇಮನಿವೇದನೆ ಮಾಡಿಕೊಂಡಿದ್ದರು. ಆದರೆ ನಮ್ರತಾ ಅದಕ್ಕೆ ಉತ್ತರಿಸಿರಲಿಲ್ಲ, ಆದರೆ ಇಬ್ಬರೂ ಸಾಕಷ್ಟು ಆತ್ಮೀಯವಾಗಿದ್ದರು. ಆದರೆ ಈಗ ನಮ್ರತಾ, ಕಾರ್ತಿಕ್ ಜೊತೆ ಆತ್ಮೀಯವಾಗಿರುವುದನ್ನು ಕೆಲವರು ಟ್ರೋಲ್ ಮಾಡುತ್ತಿದ್ದು, ನಮ್ರತಾರ ವ್ಯಕ್ತಿತ್ವದ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಈ ಬಗ್ಗೆ ಸ್ನೇಹಿತ್ ಮಾತನಾಡಿದ್ದು ಮನವಿಯೊಂದನ್ನು ಮಾಡಿದ್ದಾರೆ.

ನಮ್ರತಾ ನನಗೆ ಮೋಸ ಮಾಡಿದರು ಎಂಬ ಮಾತುಗಳು ಹೇಳುವುದನ್ನು ದಯವಿಟ್ಟು ನಿಲ್ಲಿಸಿ. ನಮ್ರತಾ ಎಂದಿಗೂ ನಿಮ್ಮ ಮೇಲೆ ನನಗೆ ಪ್ರೀತಿ ಎಂದು ನನಗೆ ಹೇಳಿರಲಿಲ್ಲ. ಅವರ ಬಗೆಗಿನ ನನ್ನ ಪ್ರೀತಿ ಏಕಮುಖಿಯಾಗಿತ್ತು ಅಷ್ಟೆ. ನೀವೇನು ಈಗ ನಮ್ರತಾ ಬಗ್ಗೆ ಟ್ರೋಲ್, ಮೀಮ್ ಮಾಡುತ್ತಿದ್ದೀರೋ ಇದರಿಂದ ಅವರ ಕುಟುಂಬದವರಿಗೆ ಮಾತ್ರವಲ್ಲದೆ ನನಗೂ ಬೇಸರ ತರಿಸಿದೆ. ಈ ಮೀಮ್, ಟ್ರೋಲ್​ಗಳಿಂದ ಒಬ್ಬರ ವ್ಯಕ್ತಿತ್ವಕ್ಕೆ ಧಕ್ಕೆ ಆಗುತ್ತಿದೆ ಅದು ಆಗಬಾರದು ಎಂದಿದ್ದಾರೆ.

ನನ್ನ ಹಾಗೂ ನಮ್ರತಾ ನಡುವೆ ಏನೇ ನಡೆದಿದ್ದರೂ, ಆ ಮನೆಯಲ್ಲಿ ನಮ್ರತಾ ನನ್ನ ಮೊದಲ ಗೆಳತಿ. ನಮ್ರತಾ ನನಗೆ ಸದಾ ಬೆಂಬಲ, ಸಹಾಯ ಮಾಡಿದ್ದಾರೆ. ಹಸಿದಾಗ ಊಟ ಕೊಟ್ಟಿದ್ದಾರೆ, ಪ್ರೊಟೀನ್ ಕೊಟ್ಟಿದ್ದಾರೆ. ಅದೆಲ್ಲ ಏನೂ ಬದಲಾಗುವುದಿಲ್ಲ. ನನ್ನ, ವಿನಯ್ ಹಾಗೂ ನಮ್ರತಾ ಮಧ್ಯೆ ಇದ್ದಿದ್ದ ಗೆಳೆತನ ಅವರು ಮನೆಯಿಂದ ಹೊರಗೆ ಬಂದ ಬಳಿಕವೂ ಮುಂದುವರೆಯಲಿದೆ. ಆದರೆ ಈಗ ನಮ್ರತಾ ವ್ಯಕ್ತಿತ್ವದ ಬಗ್ಗೆ ಮಾಡುತ್ತಿರುವ ಟ್ರೋಲ್, ಮೀಮ್​ಗಳನ್ನು ನಿಲ್ಲಿಸಿ, ಇದು ನನ್ನ ಕಡೆಯಿಂದ ಎಲ್ಲರಿಗೂ ಮನವಿ ಎಂದಿದ್ದಾರೆ ಸ್ನೇಹಿತ್. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.