ಕಾರ್ತಿಕ್ ಜೊತೆ ನಮ್ರತಾ ಕುಚುಕುಚು, ನೀನು ಮೋಸಗಾತಿ ಎಂದು ಕೂಗಾಡಿದ ಸ್ನೇಹಿತ್

 | 
H

ಬಿಗ್ ಬಾಸ್ 10ರ ಮನೆಗೆ ಎಲಿಮಿನೆಟ್ ಆದ ಸ್ಪರ್ಧಿಗಳ ರೀ ಎಂಟ್ರಿಯಾಗಿದೆ. ಬಿಗ್​ಬಾಸ್ ಮನೆಮಂದಿಗೆ ಒಂದು ಸರ್ಪೈಸ್ ಕೊಟ್ಟಿದ್ದಾರೆ. ಎರಡು ಗಿಫ್ಟ್ ಬಾಕ್ಸ್​ಗಳನ್ನು ಇಟ್ಟು ಮನೆಮಂದಿಗೆ ರಿಯಲ್ ಸರ್ಪೈಸ್ ಕೊಟ್ಟಿದ್ದಾರೆ. ಗಾರ್ಡನ್ ಏರಿಯಾಗೆ ಬಂದ ಕಂಟೆಸ್ಟೆಂಟ್ಸ್​ಗೆ ಅಚ್ಚರಿ ಮೂಡಿಸಿದ್ದಾರೆ. ನಿಮಗಾಗಿ ಒಂದು ಸರ್ಪೈಸ್ ಕಾದಿದೆ. ಗಾರ್ಡನ್ ಏರಿಯಾಗೆ ಹೋಗಿ ಎಂದು ಬಿಗ್​ಬಾಸ್ ಸ್ಪರ್ಧಿಗಳಿಗೆ ಹೇಳಿದ್ದಾರೆ. 

ಬಿಗ್​ಬಾಸ್ ಮನೆಯ ಸ್ಪರ್ಧಿಗಳು ಮನೆಗೆ ಬಂದಿರುವುದನ್ನು ನೋಡಿ ಸದ್ಯ ಮನೆಯಲ್ಲಿರುವ ಸ್ಪರ್ಧಿಗಳು ಸಖತ್ ಶಾಕ್ ಆಗಿದ್ದಾರೆ. ಸ್ಪರ್ಧಿಗಳ ರೀಯೂನಿಯನ್ ನಲ್ಲಿ ಸ್ನೇಹಿತ್ ಕೂಡ ದೊಡ್ಮನೆಗೆ ಬಂದಿದ್ದಾರೆ. ನಮ್ರತಾಗೆ ಸ್ನೇಹಿತ್ ಕೈ ಮುಗಿದಿದ್ದಾರೆ. ಬಿಗ್​ಬಾಸ್ ಮನೆಯಲ್ಲಿ ಈ ಬಾರಿ ಲವ್​ಸ್ಟೋರಿ ಇಲ್ಲ. ಸ್ನೇಹಿತ್ ಇದ್ದಾಗ ನಮ್ರತಾ ಹಿಂದೆ ಮುಂದೆ ಸುತ್ತುತ್ತಾ ಒಂದು ಲವ್ ಟ್ಯಾಕ್ ಶುರುವಾಗಿತ್ತು. ಆದರೆ ಅವರು ಎಲಿಮಿನೇಟ್ ಆದರು. 

ಸ್ನೇಹಿತ್ ಗೌಡ ಎಲಿಮಿನೇಟ್ ಆದಾಗ ನಮ್ರತಾ ಅವರು ಜೋರಾಗಿ ಅತ್ತಿದ್ದರು. ವಿನಯ್ ಅವರು  ಕೂಡ ಸ್ನೇಹಿತ್ ಬಿಗ್​ಬಾಸ್ ಮನೆಯಿಂದ ಹೊರಹೋಗುವಾಗ ಭಾವುಕರಾಗಿದ್ದರು. ಇದೀಗ ಸ್ನೇಹಿತ್ ಅವರು ಬ್ಲ್ಯಾಕ್ ಟೀಶರ್ಟ್ ಹಾಗೂ ಬ್ಲ್ಯಾಕ್ ಫೇಸ್​ಮಾಸ್ಕ್ ಧರಿಸಿಕೊಂಡು ಕುಳಿತಿದ್ದರು. ಅವರು ಕಣ್ಣುಗಳು ಮಾತ್ರ ಕಾಣುವಂತೆ ಸಂಪೂರ್ಣವಾಗಿ ತಮ್ಮ ಮುಖವನ್ನು ಕವರ್ ಮಾಡಿಕೊಂಡಿದ್ದರು. ಸಡನ್ನಾಗಿ ಕವರ್ ತೆಗೆದು ಎಲ್ಲರಿಗೂ ಸರ್ಪೈಸ್ ಕೊಟ್ಟರು. 

ಮುಖದ ಕವರ್ ತೆಗೆದು ಕೈಗಳನ್ನು ಚಾಚಿ ಎಲ್ಲರಿಗೂ ವಿಶ್ ಮಾಡಿದ್ದಾರೆ. ಎಲ್ಲರಿಗೂ ಸರ್ಪೈಸ್ ಕೊಟ್ಟ ಖುಷಿ ಅವರ ಮುಖದಲ್ಲಿಯೂ ಎದ್ದು ಕಾಣಿಸಿದ್ದು ವಿಶೇಷ.
ಆದರೆ ಈಗ ಎಲಿಮಿನೇಟ್ ಆಗಿದ್ದ ಕಂಟೆಸ್ಟೆಂಟ್​ಗಳು ಮತ್ತೆ ಮನೆಯೊಳಗೆ ಬಂದಿದ್ದು ಸ್ಪರ್ಧಿಗಳಿಗೆ ಹೊಸ ಸರ್ಪೈಸ್ ಆಗಿತ್ತು. ಅದರಲ್ಲಿಯೂ ಸ್ನೇಹಿತ್​ನನ್ನು ನೋಡಿ ಅಚ್ಚರಿಗೊಂಡರು ನಮ್ರತಾ. 

ಸ್ನೆಹಿತ್ ಕೂಡಾ ಅಷ್ಟೇ ಎಲ್ಲರಿಗೂ ನಾರ್ಮಲ್ ಆಗಿ ವಿಶ್ ಮಾಡಿದರೂ ನಮ್ರತಾ ಗೌಡ ಅವರಿಗೆ ಸ್ವಲ್ಪ ವಿಶೇಷವಾಗಿ ಲವ್ಲೀ ಆಗಿ ನಮಸ್ಕಾರ ಎಂದಿದ್ದು ಪ್ರೋಮೋದಲ್ಲಿ ಹೈಲೈಟ್ ಆಗಿದೆ.ನಮ್ರತಾ ಅವರು ಕೂಡಾ ನಾರ್ಮಲ್ ರಿಯಾಕ್ಷನ್ ಕೊಟ್ಟಿಲ್ಲ. ನಾಗಿಣಿ ನಟಿಯ ಮುಖದಲ್ಲಿ ಸ್ನೇಹಿತ್​ನನ್ನು ನೋಡಿದಾಗ ನಾಚಿಗೆಯ ರಂಗು ಮೂಡಿದ್ದು ನಟಿ ಬ್ಲಶ್ ಆಗಿದ್ದಾರೆ. ಮುಂದೆ ಏನಾಗುತ್ತೆ ಅನ್ನೋದನ್ನು ಇಂದಿನ ಬಿಗ್ ಬಾಸ್ ಎಪಿಸೋಡ್ ನಲ್ಲಿ ನೋಡ್ಬೇಕಾಗುತ್ತೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.