ಬಿಗ್ ಬಾಸ್ ಮನೆಯಿಂದ ಬಂದ ತಕ್ಷಣ ನಮ್ರತಾ ಸ್ನೇಹಿತ್ ಮದುವೆ ಫಿಕ್ಸ್, ಕುಟುಂಬಸ್ಥರ ಮಹತ್ವದ ನಿರ್ಧಾರ

 | 
Hj

ಬಿಗ್‌ಬಾಸ್ ಮನೆಯ ಜರ್ನಿಯನ್ನು ಸ್ನೇಹಿತ್ ಕಳೆದ ವಾರ ಮುಗಿಸಿದ್ದು, ಮನೆಯಲ್ಲಿ ಇದ್ದಾಗ ನಮ್ರತಾ ಹಿಂದೆ ಹಿಂದೆ ಬಿದ್ದು ಕಿರಿಕಿರಿ ಮಾಡುತ್ತಾ ಇದ್ದರು. ಇದನ್ನೂ ಗಮನಿಸಿದ ಸುದೀಪ್‌ ನಮ್ರತಾ ಸ್ನೇಹಿತ್‌ನ ಮಿಸ್ ಮಾಡಿಕೊಳ್ಳುತ್ತಿದ್ದಾರಾ..? ಎಂಬ ಪ್ರಶ್ನೆ ಮನೆಯವರಿಗೆ ಕೇಳಿದಾಗ, ಎಲ್ಲರೂ ಹೌದು ಎಂದಿದ್ದಾರೆ. ಮಿಸ್ ಮಾಡಿಕೊಳ್ಳುತ್ತಾ ಇರುವುದಕ್ಕೇನೆ, ಸ್ನೇಹಿತ್ ಬಳಸುತ್ತಿದ್ದ ಗ್ಲಾಸ್ ಹಾಗೂ ಪ್ಲೇಟ್ ಬಳಸುತ್ತಿದ್ದಾರಂತೆ. 

ಹೌದು ಬಿಗ್ ಬಾಸ್​ನಲ್ಲಿ ಸ್ನೇಹಿತ್ ಹಾಗೂ ನಮ್ರತಾ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆದಿತ್ತು. ನಮ್ರತಾ ಅಂದ್ರೆ ಇಷ್ಟ ಎಂದು ಸ್ನೇಹಿತ್ ಅನೇಕ ಬಾರಿ ಹೇಳಿಕೊಂಡಿದ್ದರು. ಆದರೆ, ನಮ್ರತಾ ಅವರು ಪ್ರೀತಿಗೆಲ್ಲ ಹೆಚ್ಚು ಪ್ರಾಮುಖ್ಯತೆ ನೀಡಿಲ್ಲ. ಈಗ ಸ್ನೇಹಿತ್ ಎಲಿಮಿನೇಟ್ ಆಗಿರುವುದರಿಂದ ನಮ್ರತಾಗೆ ಬೇಸರ ಆಗಿದೆ. ಸ್ನೇಹಿತ್ ಹೊರ ಹೋಗುವಾಗ ನಮ್ರತಾ ಕಣ್ಣೀರು ಹಾಕಿದ್ದಾರೆ. 

ಇದನ್ನೆಲ್ಲ ನೋಡಿದ್ರೆ ಸ್ನೇಹಿತ್ ಅವರು ಈ ಹಿಂದೆ ಹೇಳಿದಂತೆ ಅವರು ನಮೃತಾ ಅವರನ್ನು ಪ್ರೀತಿಸುವಂತೆ ನಮೃತಾ ಕೂಡ ಪ್ರೀತಿಯಲ್ಲಿ ಬಿದ್ದಿರುವ ರೀತಿ ಕಾಣುತ್ತದೆ. ನಾನು ಗೊತ್ತಿದ್ದು ಬೇಕು ಬೇಕು ಅಂತ ಯಾವ ತಪ್ಪನ್ನೂ ಮಾಡಿಲ್ಲಾ, ಆದ್ರೆ ನನಗೆ ತಿಳಿದೇನೇ ಏನಾದ್ರೂ ತಪ್ಪಾಗಿದ್ದು ಅದರಿಂದ ನಿಮಗೆ ನೋವಾಗಿದ್ರೆ ಸಾರಿ  ನನಗೆ ನಮೃತಾ ತುಂಬಾ ಇಷ್ಟವಾಗಿದ್ದಾಳೆ ಅವಳನ್ನು ಮದುವೆ ಆಗುವೆ ಅಂತ ಕೇಳಿದ್ದಾರೆ.

ಇನ್ನು ಎಲಿಮಿನೇಷನ್ ದಿನ ಮಗ ಇಷ್ಟು ದಿನ ಆಡಿದ್ದಕ್ಕೆ ಏನು ಅನಿಸುತ್ತಿದೆ ಎಂದು ಸುದೀಪ್ ಕೇಳಿದರು. ಇದಕ್ಕೆ ಉತ್ತರಿಸಿದ ಅವರು, ಗೆದ್ದಷ್ಟೇ ಖುಷಿ ಇದೆ ಎಂದರು. ಯಾರನ್ನ ಎಂದು ಸುದೀಪ್ ಮರು ಪ್ರಶ್ನೆ ಹಾಕಿದರು. ನಮ್ರತಾನ ಗೆದ್ದಿದ್ರೆ ನಮಗೆ ಖುಷೀನೇ ಎಂದು ಸ್ನೇಹಿತ್ ತಾಯಿ ನೇರ ಮಾತಿನಲ್ಲಿ ಹೇಳಿದ್ದಾರೆ. ಈ ಉತ್ತರಕ್ಕೆ ಸ್ವಲ್ಪ ಮುಜುಗರ ಮಾಡಿಕೊಂಡ ಸ್ನೇಹಿತ್, ಇನ್ನೂ ಏನು ಆಗಿಲ್ಲ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ