ನಮ್ರತಾ ಸಹವಾಸ ಬೇಡ ಎಂದು ಕೈಮುಗಿದ ಸ್ನೇಹಿತ್, ಇಬ್ಬರ ನಡುವೆ ಹುಳಿ ಹಿಂಡಿದ್ದು ಯಾರು ಗೊ.ತ್ತಾ

 | 
ಗ

ಬಿಗ್ ಬಾಸ್ ಕನ್ನಡ ಸೀಸನ್ 10 ಈ ವರ್ಷ ಸೆನ್ಸೇಷನ್ ಕ್ರಿಯೇಟ್ ಮಾಡಿದ ಶೋ. ಸೀಸನ್‌ನ ವಿನ್ನರ್ ಆಗಿ ಕಾರ್ತಿಕ್ ಮಹೇಶ್ ಹೊರಹೊಮ್ಮಿದ್ದಾರೆ. ಇದೆಲ್ಲಾ ಕಳೆದು 2 ವಾರಗಳಾಗಿವೆ. ಈ ಬೆನ್ನಲ್ಲೇ ಬಿಗ್ ಬಾಸ್ ಮನೆಯ ಗುಂಪು ಜೊತೆಯಾಗಿದ್ದಾರೆ.ಬಿಗ್ ಬಾಸ್ ಶೋ ಮುಗಿದ ಮೇಲೆ ಕೆಲ ದಿನಗಳ ಹಿಂದೆ ಕಾರ್ತಿಕ್, ನಮ್ರತಾ, ವಿನಯ್, ಸಂಗೀತಾ ಭೇಟಿಯಾಗಿದ್ದರು. ಈ ಬೆನ್ನಲ್ಲೇ ದೊಡ್ಮನೆಯ ಗುಂಪು ರಕ್ಷಕ್, ವಿನಯ್, ನಮ್ರತಾ ಗೌಡ, ಇಶಾನಿ, ಮೈಕಲ್ ಅಜಯ್, ಪವಿ ಪೂವಪ್ಪ ಮತ್ತೆ ಭೇಟಿಯಾಗಿದ್ದಾರೆ. 

ಈ ತಂಡದ ಜೊತೆ ವಿನಯ್ ಪತ್ನಿ ಅಕ್ಷತಾ ಕೂಡ ಸಾಥ್ ನೀಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಈ 3 ಗುಂಪುಗಳಾಗಿ ಹೈಲೆಟ್ ಆಗಿತ್ತು. ಸಂತು-ಪಂತು ಗುಂಪು, ಮತ್ತೊಂದು ಸಂಗೀತಾ, ಕಾರ್ತಿಕ್, ತನಿಷಾರ ಟ್ರಯೋ ಫ್ರೆಂಡ್‌ಶಿಪ್, ಹಾಗೆಯೇ ವಿನಯ್ ಗುಂಪಲ್ಲಿ ಇಶಾನಿ, ಮೈಕಲ್, ನಮ್ರತಾ, ರಕ್ಷಕ್, ಪವಿ, ಸ್ನೇಹಿತ್ ಗೌಡ ಹೈಲೆಟ್ ಆಗಿದ್ದರು. ಈಗ ಇದೇ ವಿನಯ್ ಟೀಮ್ ಭೇಟಿಯಾಗಿ ಕೆಲ ಸಮಯ ಕಾಲ ಕಳೆದಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸ್ನೇಹಿತ್ ಎಲ್ಲಿ? ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ನಮ್ರತಾ  ಜೊತೆಗೆ ಫ್ರೆಂಡ್‌ಶಿಪ್ ಬ್ರೇಕಪ್ ಆದ್ಮೇಲೆ ವಿನಯ್  ತಂಡದ ಜೊತೆ ಸ್ನೇಹಿತ್ ಎಲ್ಲೂ ಕಾಣಿಸಿಕೊಂಡಿಲ್ಲ. ಹಾಗಾಗಿ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ‘ಬಿಗ್ ಬಾಸ್’ ಸ್ಪರ್ಧಿ ಪವಿ ಪೂವಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲರಿಗೂ ನಮಸ್ಕಾರ, ಸ್ನೇಹಿತ್ ಆ ದಿನ ಬ್ಯುಸಿಯಾಗಿದ್ದರು. ಹಾಗೆಯೇ ಅವರು ಪಾರ್ಟಿ ಮಾಡದ ಕಾರಣ ಬರಲಿಲ್ಲ. ಆದರೆ ಸ್ನೇಹಿತ್ ಯಾವಾಗಲೂ ನಮ್ಮ ಗುಂಪಿನಲ್ಲಿಯೇ ಇರುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪವಿ ಸ್ಪಷ್ಟನೆ ನೀಡಿದ್ದಾರೆ.

ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ನಮ್ರತಾ ಮೇಲೆ ಸ್ನೇಹಿತ್‌ಗೆ ಲವ್ ಆಗಿತ್ತು. ದೊಡ್ಮನೆಯಲ್ಲಿ ಇರುವಾಗಲೇ ನಮ್ರತಾಗೆ ಹಲವು ಬಾರಿ ಸ್ನೇಹಿತ್ ಪ್ರೇಮ ನಿವೇದನೆ ಮಾಡಿದ್ದರು. ಆದರೆ ನಮ್ರತಾ ಗ್ರೀನ್ ಸಿಗ್ನಲ್ ನೀಡಿರಲಿಲ್ಲ. ಸ್ನೇಹಿತ್ ಎಲಿಮಿನೇಷನ್ ನಂತರ ಕಾರ್ತಿಕ್ ಜೊತೆ ನಮ್ರತಾ ಒಡನಾಟದ ಬಗ್ಗೆ ಭಾರೀ ಟ್ರೋಲ್ ಆಗಿತ್ತು. ಫಿನಾಲೆ ಕೊನೆಯ ವಾರದಲ್ಲಿ ಸ್ನೇಹಿತ್ ದೊಡ್ಮನೆಗೆ ಎಂಟ್ರಿ ಕೊಟ್ಟಾಗ ಕಾರ್ತಿಕ್ ಜೊತೆಗಿನ ಟ್ರೋಲ್ ಬಗ್ಗೆ ಸ್ನೇಹಿತ್ ಮಾತನಾಡಿದ ರೀತಿ ನಮ್ರತಾಗೆ ಘಾಸಿ ಆಗಿತ್ತು. 

ಬಿಗ್ ಬಾಸ್ ಶೋ ಮುಗಿದ ಮೇಲೆ ನಿಮ್ಮನ್ನು ಎಂದೂ ಭೇಟಿ ಮಾಡಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದರು ನಮ್ರತಾ. ಇದೀಗ ದೊಡ್ಮನೆಯ ಆಟ ಮುಗಿದ ಮೇಲೂ ಇಬ್ಬರು ಮುನಿಸು ಮುಂದುವರೆದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.