ಪವಿತ್ರ ಸು ಖಕ್ಕಾಗಿ ಭವ್ಯ ಬಂಗಲೆ ನಿರ್ಮಾಣ ಮಾಡಿದ ಎರಡನೇ ಗಂಡ ನರೇಶ್

 | 
ರಹಹ
ತೆಲುಗು ನಟ ನರೇಶ್ ಹಾಗೂ ಕನ್ನಡ ಮೂಲದ ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಸಂಬಂಧ ಮತ್ತು ಮದುವೆ ವಿಚಾರ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಹೊಸ ವರ್ಷದ ಸಂದರ್ಭದಲ್ಲಿ ನರೇಶ್ ತಮ್ಮ ಮತ್ತು ಪವಿತ್ರರ ರೊಮ್ಯಾಂಟಿಕ್ ವಿಡಿಯೊವನ್ನು ಬಿಡುಗಡೆ ಮಾಡಿದ್ದರು. 
ಇದೀಗ ಇಂದು ಅವರ ವಿವಾಹದ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಈ ಮೂಲಕ ತಾವು ಅಧಿಕೃತವಾಗಿ ಸತಿ-ಪತಿಗಳಾಗಿರುವುದಾಗಿ ಹೇಳಿಕೊಂಡಿದ್ದಾರೆ. ಪವಿತ್ರಾ ಲೋಕೇಶ್ ಜೊತೆ ಸಪ್ತಪದಿ ತುಳಿದ ವಿಡಿಯೋನ ನರೇಶ್ ಹಂಚಿಕೊಂಡಿದ್ದಾರೆ. 
ಜೊತೆಗೆ ಆಶೀರ್ವಾದ ಮಾಡುವಂತೆ ಅವರು ಅಭಿಮಾನಿಗಳಲ್ಲಿ ಕೋರಿದ್ದಾರೆ. ಈ ವಿಡಿಯೋಗೆ ಫ್ಯಾನ್ಸ್ ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅನೇಕರು ನವ ದಂಪತಿಗೆ ಶುಭಾಶಯ ಕೋರಿದ್ದಾರೆ. ಅದರೊಂದಿಗೆ ತಮ್ಮ ಮನೆಯ ಹೋಂ ಟೂರ್ ಮಾಡಿದ್ದು ಅದರಲ್ಲಿ ಮನೆಯ ವೈಭೋಗ ತೋರಿಸಿದ್ದಾರೆ.
ಪವಿತ್ರಾ ಲೋಕೇಶ್ ಅವರು ತಾಯಿಯಾಗಿ, ಮಗಳಾಗಿ, ಗೆಳತಿಯಾಗಿ, ಮಾರ್ಗದರ್ಶಕರಾಗಿ, ಹಿತೈಷಿಯಾಗಿ ತಮ್ಮ ಜೀವನದಲ್ಲಿ ಬೆಂಬಲ ನೀಡಿದ್ದಾರೆ ಎಂದರು. ಅವಳಲ್ಲಿ ಎಲ್ಲವನ್ನು ನೋಡುತ್ತಿದ್ದೇನೆ. ಪವಿತ್ರಾ ಪಕ್ಕದಲ್ಲಿದ್ದರೆ ಬೇರೆಯವರನ್ನು ನೋಡುವ ಅಗತ್ಯವಿಲ್ಲ. 
ಅವಳಲ್ಲಿಯೇ ಎಲ್ಲರನ್ನೂ ಕಾಣುತ್ತೇನೆ ಎಂದು ಹೇಳಿದರು. ಪವಿತ್ರಾ ಬಗ್ಗೆ ನರೇಶ್ ಹೇಳಿದ ಮಾತು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.