ಡಿ ವೋರ್ಸ್ ಗೆ ಸಿಕ್ತು ಕಾರಣ, ಮಾಸ್ಟರ್ ಆನಂದ್ ಜೊತೆ ನಯನಾ ಕುಚುಕುಚು

 | 
ಕಿ
ಮಾಸ್ಟರ್ ಆನಂದ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ.ಗಣೇಶನ ಮದುವೆ ಅಂತಹ ಹಿಟ್ ಚಿತ್ರಗಳಲ್ಲಿ ಬಾಲ್ಯದಿಂದಲೇ ಅಭಿನಯಿಸಿದ್ದಾರೆ.ಇದೀಗ ಕೂಡಾ ಕಿರುತೆರೆಯಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಪತ್ನಿ ಯಶಸ್ವಿನಿ ಹಾಗೂ ಪುತ್ರಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ವಂಶಿಕಾ ಕೂಡ ನೆಟ್ಟಿಗರ ಗಮನ ಸೆಳೆದಿದ್ದಾರೆ. 'ನನ್ನಮ್ಮ ಸೂಪರ್ ಸ್ಟಾರ್' ಶೋನಲ್ಲಿ ಯಶಸ್ವಿನಿ ಹಾಗೂ ವಂಶಿಕಾ ಕಾಣಿಸಿಕೊಂಡು ಮೋಡಿ ಮಾಡಿದ್ದರು.
ಇನ್ನು ಇವರ ಪತ್ನಿ ಯಶಸ್ವಿನಿ ಆನಂದ್ ಈಗ ಕನೆಕ್ಟ್‌ ಕನ್ನಡ ಎಂಬ ಯೂಟ್ಯೂಬ್ ಚಾನಲ್ ಆರಂಭಿಸಿದ್ದಾರೆ. ಅದರಲ್ಲಿ ಕಿರುತೆರೆ ಕಲಾವಿದರ ಸಂದರ್ಶನ ಮಾಡುತ್ತಿರುತ್ತಾರೆ. ಇತ್ತೀಚೆಗೆ ಶೋಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಬಂದಿದ್ದರು. ಇಬ್ಬರೂ ಮಾತು ಹರಟೆ ಹೊಡೆದು ಸಖತ್ ಎಂಜಾಯ್ ಮಾಡಿದ್ದಾರೆ. ಇನ್ನು ಕಾಮಿಡಿ ಕಿಲಾಡಿಗಳು ಶೋನಲ್ಲಿ ನಟ ಜಗ್ಗೇಶ್ ಸದಾ ನಯನಾ ಹಾಗೂ ಮಾಸ್ಟರ್ ಆನಂದ್ ಅವರನ್ನು ರೇಗಿಸುತ್ತಿದ್ದರು.
ಆನಂದ್- ನಯನಾ ಜೋಡಿ ಎನ್ನುವಂತೆ ಜಗ್ಗಣ್ಣ ಕಾಲೆಳೆಯುತ್ತಿದ್ದರು. ಇಬ್ಬರೂ ಅದನ್ನು ಬಹಳ ಸ್ಫೋರ್ಟಿವ್ ಆಗಿಯೇ ತೆಗೆದುಕೊಂಡಿದ್ದರು. ಒಟ್ಟೊಟ್ಟಿಗೆ ವೇದಿಕೆಯಲ್ಲಿ ಸಹ ಕಾಣಿಸಿಕೊಂಡಿದ್ದರು. ಸದ್ಯ ಯಶಸ್ವಿನಿ ಸಂದರ್ಶನದಲ್ಲಿ ಕೂಡ ಈ ಟಾಪಿಕ್ ಬಂದಿದೆ. ಇಬ್ಬರೂ ಈ ಬಗ್ಗೆ ತಮಾಷೆಯಾಗಿ ಮಾತನಾಡಿದ್ದರು. ಟ್ರಯಾಂಗಲ್ ಲವ್ ಸ್ಟೋರಿ ಎಂದಿದ್ದಾರೆ.ನಾನು ಆನಂದ್ ಸರ್‌ನ ಲವ್ ಮಾಡ್ತಿದ್ದೀನಿ. ಅವರು ನನ್ನ ಲವ್ ಮಾಡ್ತಿದ್ದಾರೆ. ನಮ್ಮದು ಟ್ರಯಾಂಗಲ್ ಲವ್ ಸ್ಟೋರಿ ಎಂದು ನಯನ ಹೇಳಿದ್ದಕ್ಕೆ ಅದು ನನಗೆ 8 ವರ್ಷಗಳ ಹಿಂದೆಯೇ ಗೊತ್ತು ಎಂದು ಯಶಸ್ವಿನಿ ಹೇಳಿದ್ದಾರೆ.
 ನನ್ನ, ಆನಂದ್ ಸರ್ ಬಗ್ಗೆ ಜಗ್ಗೇಶ್ ಸರ್ ಮೊದಲ ತಮಾಷೆ ಮಾಡಲು ಆರಂಭಿಸಿದರು. ನೀವು ಅದಕ್ಕೆ ಬೈತೀರಾ ಅಂದುಕೊಂಡೆ. ಆದರೆ ನೀವು ಎಂಜಾಯ್ ಎಂಜಾಯ್ ಅಂದ್ರಿ, ನಾನು ಅದನ್ನು ಊಹಿಸಿರಲಿಲ್ಲ ಎಂದು ನಯನಾ ಹೇಳಿದ್ದಾರೆ. ನಾನು ಎರಡು ವರ್ಷದಿಂದ ಬ್ರಾಡ್ ಮೈಂಡೆಡ್ ಎಂದು ಜನ ಅಂದುಕೊಂಡಿದ್ದಾರೆ. ಆದರೆ ನಾನು ಮೊದಲಿನಿಂದಲೂ ಹೀಗೆನೇ ಎಂದು ಯಶಸ್ವಿನಿ ಹೇಳಿದ್ದಾರೆ. ನನ್ನ ಬಗ್ಗೆ ನಮ್ಮ ಪತ್ನಿಗೆ ಗೊತ್ತು. 
ನಾನು ಎಲ್ಲೇ ಹೋದರು ಮನೆಗೆ ಬರ್ತೀನಿ ಅಂತ ಎಂದು ಆನಂದ್ ಸರ್ ಹೇಳ್ತಿರ್ತಾನೆ ಎಂದು ನಯನಾ ವಿವರಿಸಿದ್ದಾರೆ. ಸದ್ಯ ಇವರಿಬ್ಬರ ಫನ್ನಿ ಮಾತುಕತೆ ವೈರಲ್ ಆಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.