ಅವನಿಂದ ಇನ್ನುಮುಂದೆ ಯಾವ ಕೆಲಸವೂ ಸಾಧ್ಯವಿಲ್ಲ, ಡಿ ವೋರ್ಸ್ ಒಂದೇ ದಾರಿ ಎಂದ ನಯನತಾರಾ
Jul 13, 2025, 09:13 IST
|

ನಯನತಾರಾ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾದ ವೈರಲ್ ಪೋಸ್ಟ್‌ನಲ್ಲಿ ತಮ್ಮ ಪತಿಯ ವರ್ತನೆ ಹಾಗೂ ಡಿವೋರ್ಸ್ ಬಗ್ಗೆ ಸುಳಿವು ನೀಡಿದ್ದಾರೆ ಎನ್ನಲಾಗಿದೆ. ದಕ್ಷಿಣ ಸಿನಿಮಾ ರಂಗದ ಖ್ಯಾತ ನಟಿಯಾಗಿರುವ ನಯನತಾರಾ ಅವರು ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರೊಂದಿಗೆ ಸೂಪರ್ ಸಿನಿಮಾದಲ್ಲಿ ನಟಿಸಿದ್ದರು. ಇನ್ನು ತಮಿಳು ಹಾಗೂ ತೆಲುಗು ಚಿತ್ರರಂಗಳಲ್ಲಿ ಟಾಪ್ ನಟಿಯಾಗಿ ಇಂದಿಗೂ ಅವರು ಮಿಂಚುತ್ತಿದ್ದಾರೆ.
ಕೆಲವೇ ವರ್ಷಗಳ ಹಿಂದೆ ಅವರು ನಿರ್ದೇಶಕ ವಿಗ್ನೇಶ್ ಶಿವನ್ ಅವರೊಂದಿಗೆ ಅದ್ಧೂರಿಯಾಗಿ ಮದುವೆಯಾಗಿದ್ದರು. ಈ ದಂಪತಿಗೆ ಸದ್ಯ ಎರಡು ಮುದ್ದಾದ ಅವಳಿ ಮಕ್ಕಳೂ ಇವೆ. ಆದರೂ ನಯನತಾರಾ ದಿಢೀರ್ ಡಿವೋರ್ಸ್‌ಗೆ ಮುಂದಾಗಿರುವುದು ಏಕೆ? ಎಂದು ಅವರ ಅಭಿಮಾನಿಗಳು ಕೂಡ ಶಾಕ್‌ಗೆ ಒಳಗಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು ಆ ಸೋಷಿಯಲ್ ಮೀಡಿಯಾ ಪೋಸ್ಟ್..!
ವೈರಲ್ ಆಗಿರುವ ಸ್ಕ್ರೀನ್‌ಶಾಟ್ ನಯನತಾರಾ ಅವರ ಇನ್‌ಸ್ಟಾಗ್ರಾಂ ಸ್ಟೋರಿ ಎಂದು ಹೇಳಲಾಗಿದೆ. ಅದರಲ್ಲಿ "ಒಬ್ಬ ಮೂರ್ಖನನ್ನು ಮದುವೆಯಾಗುವುದು ತಪ್ಪು. ಪತಿಯ ಕೃತ್ಯಗಳಿಗೆ ಹೊಣೆ ಹೊತ್ತಿಕೊಳ್ಳಬೇಕಾಗಿಲ್ಲ, ಏಕೆಂದರೆ ಪುರುಷರು ಸಾಮಾನ್ಯವಾಗಿ ಬೆಳೆಯುವುದಿಲ್ಲ. ದಯವಿಟ್ಟು ನನ್ನನ್ನು ಒಬ್ಬಳೇ ಇರಲು ಬಿಡಿ. ನಾನು ತುಂಬಾ ಬೇಸತ್ತಿದ್ದೇನೆ" ಎಂಬ ಸಾಲುಗಳಿವೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಶೇರ್ ಆಗಿದ್ದು, ನಯನತಾರಾ-ವಿಘ್ನೇಶ್ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಮಾತುಗಳಿಗೆ ಪುಷ್ಟಿ ನೀಡಿದೆ.