ಎಮೋಷನಲ್ ಪೋಸ್ಟ್ ಮಾಡಿ ಪತಿಯನ್ನು ಇನ್ ಸ್ಟಾದಲ್ಲಿ ಅನ್ ಫಾಲೋ ಮಾಡಿದ ನಯನತಾರಾ

 | 
ಪಪಬ

ಸಿನಿಮಾ ರಂಗದಲ್ಲಿ ಬಹಳಷ್ಟು ಜನ ಕಲಾವಿದರು ಪ್ರೀತಿಸಿ ಮದುವೆಯಾಗಿದ್ದಾರೆ. ಸಿನಿಮಾ, ಕಿರುತೆರೆ ಎರಡೂ ಕಡೆಗಳಲ್ಲೂ ಅದೆಷ್ಟೋ ಜನರು ತಮ್ಮ ಸಹ ಕಲಾವಿದರ ಜೊತೆಗೆ ಪ್ರೇಮದಲ್ಲಿ ಬಿದ್ದು, ಅವರ ಜೊತೆಗೆ ಹೊಸ ಬದುಕನ್ನ ಕಟ್ಟಿಕೊಂಡಿದ್ದಾರೆ ಮತ್ತು ಈಗಲೂ ಅನೇಕರು ಪ್ರೇಮ ವಿವಾಹಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಮಾತ್ರ ತಮ್ಮ ಹಿರಿಯರು ನಿಶ್ಚಯಿಸಿದವರ ಜೊತೆಗೆ ದಾಂಪತ್ಯ ಜೀವನಕ್ಕೆ ಅಡಿಯಿಡುತ್ತಾರೆ.‌

ಪ್ರೀತಿಸಿ ಮದುವೆಯಾದ ನಂತರ ಒಂದು ವರ್ಷ ಅಥವಾ ಎರಡು ವರ್ಷಗಳ ನಂತರ ವೈಯಕ್ತಿಕ ಕಾರಣಗಳಿಂದ ಈಗಾಗಲೇ ಒಂದಷ್ಟು ಸೆಲೆಬ್ರಿಟಿ ಜೋಡಿಗಳು ವಿಚ್ಛೇದನ ಪಡೆದು ದೂರವಾಗಿದ್ದಾರೆ. ಇನ್ನೂ ಕೆಲವರು ವಿಚ್ಛೇದನದ ನಂತರ ಬೇರೆ ಅವರ ಜೊತೆಗೆ ಮತ್ತೆ ಮದುವೆಯಾಗಿ ಜೀವನವನ್ನು ನಡೆಸುತ್ತಿದ್ದಾರೆ. ಅನ್ಯೋನ್ಯವಾಗಿ ಕಾಣುವ ಜೋಡಿಗಳು ಸಹಾ ವಿಚ್ಛೇದನ ಘೋಷಣೆ ಮಾಡಿದಾಗ ಫ್ಯಾನ್ಸ್ ಶಾಕ್ ಆಗುತ್ತಾರೆ.

ಸ್ಟಾರ್ ಹೀರೋಯಿನ್ ನಯನತಾರ ಬಗ್ಗೆ ಪ್ರತ್ಯೇಕ ಪರಿಚಯದ ಅಗತ್ಯವಿಲ್ಲ.‌ ರಜನಿಕಾಂತ್ ಜೊತೆ ಚಂದ್ರಮುಖಿ ಸಿನಿಮಾದಲ್ಲಿ ನಟಿಸಿದ ನಂತರ ನಯನತಾರಾ ಸಾಲು ಸಾಲು ತೆಲುಗು, ತಮಿಳು ಸಿನಿಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಂಡರು. ತಮಿಳಿನ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಡೇಟಿಂಗ್ ನಡೆಸುತ್ತಿದ್ದ ನಯನತಾರಾ ಅನಂತರ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು.

ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳಿಗೆ ತಾಯಿಯಾದರು. ತಮಿಳು ಸಿನಿಮಾ ರಂಗದ ಕ್ಯೂಟ್ ಕಪಲ್ ಎನಿಸುವಂತೆ ಫೋಟೋ, ವೀಡಿಯೋಗಳನ್ನು ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದರು. ಇನ್ನು ಕೆಲವೇ ದಿನಗಳ ಹಿಂದೆಯಷ್ಟೇ ನಯನತಾರಾ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಟ್ರು. ಅಲ್ಪ ಸಮಯದಲ್ಲೇ ನಟಿ 78 ಲಕ್ಷ ಹಿಂಬಾಲಕರನ್ನು ಪಡೆದುಕೊಂಡರು.

ತಮ್ಮ ಪತಿ ಮತ್ತು ಅವಳಿ ಮಕ್ಕಳಿಬ್ಬರ ಫೋಟೋಗಳನ್ನು ಶೇರ್ ಮಾಡುತ್ತಾ ಅಸಂಖ್ಯಾತ ಅಭಿಮಾನಿಗಳ ಲೈಕ್ಸ್ ಮತ್ತು ಕಮೆಂಟ್‌ಗಳನ್ನು ಪಡೆದರು. ಆದರೆ ಈಗ ಇವೆಲ್ಲವುಗಳ ನಡುವೆಯೇ ನಯನತಾರಾ ತಮ್ಮ ಪತಿ ವಿಘ್ನೇಶ್ ಶಿವನ್  ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ ಫಾಲೋ ಮಾಡಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಈಗ ಈ ಮುದ್ದಾದ ಜೋಡಿಯ ನಡುವೆ ಏನಾಗ್ತಿದೆ ಎನ್ನುವ ಹೊಸ ಚರ್ಚೆಯೊಂದು ಆರಂಭವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ನಯನತಾರಾ ಮಾಡಿದಂತಹ ಪೋಸ್ಟ್ ಈಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಅಲ್ಲದೇ ಅನೇಕರು ನಟಿ ತಪ್ಪಾಗಿ ಪತಿಯನ್ನು ಅನ್ ಫಾಲೋ ಮಾಡಿರಬಹುದಾ? ಅಥವಾ ಏನಾದರೂ ತಾಂತ್ರಿಕ ದೋಷದಿಂದ ವಿಘ್ನೇಶ್ ಶಿವನ್ ಅವರ ಪ್ರೊಫೈಲ್ ಕಾಣ್ತಾ ಇಲ್ವಾ? ಎಂದು ತಮ್ಮ ಅನಿಸಿಕೆಗಳನ್ನು ಶೇರ್ ಮಾಡುತ್ತಿದ್ದಾರೆ. ಈ ಹಿಂದೆ ಸಮಂತಾ ಸೇರಿದಂತೆ ಕೆಲವು ನಟಿಯರು ಪತಿಗೆ ವಿಚ್ಛೇದನ ನೀಡುವ ಮೊದಲು ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಅನ್ ಫಾಲೋ ಮಾಡಿದ್ದರು.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.