ದೇವಲೋಕದಿಂದ ನೇರ ಭೂಮಿಗೆ ಇಳಿದ ದೇವತೆ ಎಂದ ನೆಟ್ಟಿಗರು; ಜಾಹ್ನಿವಿ ಕಪೂರ್ ಹೊಸ ಲುಕ್
Mar 31, 2024, 17:13 IST
|
ನಟಿ ಶ್ರೀದೇವಿ 80-90ರ ದಶಕದಲ್ಲಿ ಬಾಲಿವುಡ್ ಮಾತ್ರವಲ್ಲ, ದಕ್ಷಿಣ ಭಾರತದಲ್ಲೂ ಜನಪ್ರಿಯರಾಗಿದ್ದರು. ಆಗಿನ ಕಾಲದ ಸೌತ್ ಇಂಡಿಯಾದ ಬಹುತೇಕ ಎಲ್ಲ ಕಲಾವಿದರ ಜೊತೆಗೂ ಶ್ರೀದೇವಿ ನಟಿಸಿದ್ದರು. ಅಲ್ಲದೆ, ಅವರು ಮೂಲತಃ ತಮಿಳುನಾಡಿನವರು ಎಂಬುದು ವಿಶೇಷ. ಇದೀಗ ಅವರ ಪುತ್ರಿ ಜಾಹ್ನವಿ ಕಪೂರ್ ಕೂಡ ಅದೇ ಹಾದಿಯಲ್ಲಿ ಇದ್ದಾರಾ ಎಂಬುದು ಅಭಿಮಾನಿಗಳಿಗೆ ಇರುವ ಕುತೂಹಲ.
ಯಾಕೆಂದರೆ, ಜಾಹ್ನವಿ ಕಪೂರ್ ಅವರ ಸಿನಿಮಾಗಳ ಆಯ್ಕೆ ಗಮನಿಸಿದರೆ, ಅವರು ಸೌತ್ ಇಂಡಿಯಾದಲ್ಲೇ ಸೆಟ್ಲ್ ಆಗೋದು ಕನ್ಫರ್ಮ್ ಎನ್ನಲಾಗುತ್ತಿದೆ.ನಟಿ ಜಾನ್ವಿ ಕಪೂರ್ ಅವರು ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. 2018ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಜಾನ್ವಿಗೆ ಹಲವು ಅವಕಾಶಗಳು ಹರಿದು ಬರುತ್ತಿವೆ.
ಶ್ರೀದೇವಿ ಮತ್ತು ಬೋನಿ ಕಪೂರ್ ದಂಪತಿಯ ಪುತ್ರಿ ಜಾನ್ವಿ ಕಪೂರ್ ಕೈಯಲ್ಲಿ ಈಗ ಹಲವು ಆಫರ್ಗಳಿವೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಒಂದು ದೊಡ್ಡ ಯಶಸ್ಸಿಗಾಗಿ ಅವರು ಕಾದಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವೊಂದಕ್ಕೆ ಜಾನ್ವಿ ಕಪೂರ್ ಅವರು ಇತ್ತೀಚೆಗೆ ಹಾಜರಿ ಹಾಕಿದ್ದರು. ಆ ವೇಳೆ ಅವರು ಧರಿಸಿದ್ದ ಕಪ್ಪು ಬಣ್ಣದ ಕಾಸ್ಟ್ಯೂಮ್ ಗಮನ ಸೆಳೆದಿದೆ. ಗ್ಲಾಮರಸ್ ಬಟ್ಟೆ ಧರಿಸಿ ಅವರು ಮಿಂಚಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.
ಸಕತ್ ಹಾಟ್ ಆಗಿ ಕಾಣುವ ಅವರ ಅಂದಕ್ಕೆ ಪಡ್ಡೆ ಹುಡುಗರು ಮರುಳ ಆಗಿರೋದ್ರಲ್ಲಿ ಎರಡು ಮಾತಿಲ್ಲ. ಜಾನ್ವಿ ಕಪೂರ್ ಬಾಲ್ಯದಿಂದಲೂ ತಾಯಿ ಶ್ರೀದೇವಿಯಂತೆ ನಟಿಯಾಗಬೇಕೆಂದು ಬಯಸಿದ್ದರು. ಆದರೆ, ಅವರ ತಾಯಿ ಶ್ರೀದೇವಿ ಅವರಿಗೆ ನಾಯಕಿಯಾಗುವುದು ಇಷ್ಟವಿರಲಿಲ್ಲ. ತನ್ನ ಮಗಳು ಓದಿ ವೈದ್ಯೆಯಾಗಬೇಕೆಂದು ಬಯಸಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.