ಟಾಲಿವುಡ್ ಬೆಡಗಿ ತಮ್ಮನ್ನ ಅಂದ ನೋಡಲು ಎರಡು ಕಣ್ಣು ಸಾಲಲ್ಲ ಎಂದ ನೆಟ್ಟಿಗರು

 | 
Gh

ನಟಿ ತಮನ್ನಾ ಭಾಟಿಯಾ ಇದೇ ಮೊದಲ ಬಾರಿಗೆ ಹೊಸ ಅವತಾರ ತಾಳಿದ್ದರು. ಕಳೆದ 18 ವರ್ಷಗಳಿಂದ ‘ನೋ ಕಿಸ್’ ಪಾಲಿಸಿ ಹಾಕಿಕೊಂಡು ಬಂದಿದ್ದ ಅವರು ಅದನ್ನೂ ಬ್ರೇಕ್ ಮಾಡಿದರು. ‘ಲಸ್ಟ್ ಸ್ಟೋರೀಸ್ 2’ ಚಿತ್ರದಲ್ಲಿ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಒಂದು ವರ್ಗದ ಜನರಿಂದ ಟೀಕೆ ವ್ಯಕ್ತವಾಗಿದೆ. 

ಅನೇಕರು ನಟಿಯನ್ನು ಕಟುವಾಗಿ ಟೀಕಿಸಿದ್ದಾರೆ. ಅಶ್ಲೀಲ ಕಮೆಂಟ್ ಕೂಡ ಹಾಕಿದ್ದಾರೆ. ಈ ಬಗ್ಗೆ ತಮನ್ನಾ ಮಾತನಾಡಿದ್ದಾರೆ. ಇನ್ನು ಇತ್ತೀಚಿಗೆ ತಮನ್ನಾ ಲಿಮಿಟ್ ಮೀರಿ ಬಟ್ಟೆ ಹಾಕುತ್ತಿದ್ದಾರೆ. ಅಲ್ಲದೆ ತಮ್ಮ ದೇಹ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಹಲವಾರು ಜನ ಕಿಡಿಕಾರಿದ್ದಾರೆ. ಇನ್ನು ಕೆಲ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ತಮನ್ನಾ, ಹಬ್ಬ, ಸಮಾರಂಭ, ಪ್ರವಾಸದ ವೇಳೆ ಕ್ಲಿಕ್ಕಿಸಿದ ಫೋಟೊಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿಗಷ್ಟೇ ವಿಜಯ್ ವರ್ಮಾ ಜೊತೆಗಿನ ಪ್ರೀತಿಯನ ತಮನ್ನಾ ಭಾಟಿಯ ಅವರು ಅಧಿಕೃತಗೊಳಿಸಿದರು. ವಿಜಯ್ ನನ್ನ ಖುಷಿಯ ಖಜಾನೆ ಎಂದು ಖುಷಿಯಿಂದ ನಟಿ ಬಣ್ಣಿಸಿದ್ದರು. 

‘ಲಸ್ಟ್ ಸ್ಟೋರಿಸ್ 2’ ಸೆಟ್‌ನಲ್ಲಿ ಮೊದಲ ಭೇಟಿಯಾಗಿದ್ದು, ಆ ಪರಿಚಯವೇ ಪ್ರೀತಿಗೆ ತಿರುಗಿತ್ತು. ಇದೀಗ ಸಾಕಷ್ಟು ಸಮಯದಿಂದ ತಮನ್ನಾ-ವಿಜಯ್ ಡೇಟ್ ಮಾಡ್ತಿದ್ದಾರೆ. ಸದ್ಯದಲ್ಲೇ ‘ಲಸ್ಟ್ ಸ್ಟೋರಿಸ್ 2’ ತೆರೆಗೆ ಬಂದಿದೆ.