ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೊಸ ಸುದ್ದಿ, ಮದುವೆಯಾಗದೆ ಗಭಿ೯ಣಿಯಾದ ಸ್ಟಾರ್ ನಟಿ

 | 
Jd

 ಬಹುಭಾಷಾ ನಟಿ ಸಾಯಿ ಪಲ್ಲವಿ ತಮ್ಮ ಸಿಂಪಲ್​ ಬ್ಯೂಟಿಯಿಂದಲೇ ಮನೆ ಮಾತಾಗಿರುವ ತಾರೆ. ಮುಗ್ಧ ಮೊಗದ, ಅಷ್ಟೇ ಮುಗ್ಧ ನಗುವಿನ ಚೆಲುವೆ ಸಾಯಿ ಪಲ್ಲವಿಯನ್ನು ಇಷ್ಟಪಡದವರು ಇಲ್ಲವೆಂದೇ ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಸಾಯಿ ಪಲ್ಲವಿ ಕಡಿಮೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.

ಪಾತ್ರಗಳ ಆಯ್ಕೆಯಲ್ಲಿ ತುಂಬ ಕಾಳಜಿ ವಹಿಸುತ್ತಿದ್ದಾರೆ. ಇದಕ್ಕೆ ಇವರು ಸ್ಪಷ್ಟ ಕಾರಣ ನೀಡಿಲ್ಲ. ಅದೊಮ್ಮೆ ಈಕೆ ಸಿನಿಮಾ ರಂಗವನ್ನೇ ತೊರೆಯಲಿದ್ದಾರೆ ಎಂದೂ ಸುದ್ದಿಯಾಗಿಬಿಟ್ಟಿತು. ವೈದ್ಯೆಯಾಗುವ ಕನಸು ಹೊತ್ತಿದ್ದ ನಟಿ ಸಾಯಿ ಪಲ್ಲವಿ, ಸಿನಿಮಾ ರಂಗದಿಂದ ದೂರವಾಗಿ ವೈದ್ಯ ವೃತ್ತಿಯನ್ನು ಕೈಗೊಳ್ಳಲಿದ್ದಾರೆ ಎಂದೂ ಕೇಳಿಬಂದಿತ್ತು.

ಇದೀಗ ಅವರು ಮತ್ತೊಂದು ಕಾರಣಕ್ಕೆ ಸಕತ್​ ಚರ್ಚೆಯಲ್ಲಿ ಇದ್ದಾರೆ. ಅದಕ್ಕೆ ಕಾರಣ, ಅವರ ವಿಡಿಯೋ ಒಂದು ವೈರಲ್​ ಆಗಿರುವುದು. ಇದರಲ್ಲಿ ಸಾಯಿ ಪಲ್ಲವಿ ತುಂಬು ಗರ್ಭಿಣಿಯಾಗಿರುವುದಾಗಿ ಕಂಡುಬರುತ್ತದೆ.
ಹೌದು. ನಟಿ ಗರ್ಭಿಣಿಯಾಗಿದ್ದರೆ ಅದೇನು ಹೊಸ ವಿಷಯವಲ್ಲ. ಆದರೆ ಅಸಲಿಗೆ ಸಾಯಿ ಪಲ್ಲವಿಯವರ ಮದುವೆಯೇ ಆಗಿಲ್ಲ. 

ಆದ್ದರಿಂದ ಈ ವಿಡಿಯೋ ನೋಡಿ ಫ್ಯಾನ್ಸ್​ ತಲೆ ಕೆಡಿಸಿಕೊಂಡಿದ್ದಾರೆ. ಈ ವಿಡಿಯೋಗೆ ಥಹರೇವಾರಿ ಕಮೆಂಟ್​ಗಳು ಬರುತ್ತಿದ್ದು, ತಲೆ-ಬುಡ ಅರ್ಥವಾಗ್ತಿಲ್ಲ, ಪ್ಲೀಸ್​ ಯಾರಾದ್ರೂ ಹೇಳಿ ಎಂದು ಗೋಗರೀತಿದ್ದಾರೆ ಫ್ಯಾನ್ಸ್​. ಈ ವಿಡಿಯೋದಲ್ಲಿ ನಟಿ ಸಾಯಿ ಪಲ್ಲವಿ ಸೀರೆಯುಟ್ಟು ಮಾಮೂಲಿನಂತೆ ಸಿಂಪಲ್​ ಬ್ಯೂಟಿಯಾಗಿ ಕಾಣಿಸುತ್ತಿದ್ದಾರೆ. ಅಪ್ಪಟ ಗೃಹಿಣಿಯಂತೆ ಕಾಣುವ ನಟಿ, ಅಡುಗೆ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಇದೆ. ಆದರೆ ಇದರಲ್ಲಿ ನಟಿ ತುಂಬು ಗರ್ಭಿಣಿಯಂತೆ ಕಾಣಿಸುತ್ತಿರುವುದು ಈಗ ಅಭಿಮಾನಿಗಳು ತಲೆಬಿಸಿ ಮಾಡಿಕೊಳ್ಳುವಂತೆ ಮಾಡಿದೆ.

ಮದುವೆಯ ಬಗ್ಗೆ ಸಸ್ಪೆನ್ಸ್​ ಆಗಿಯೇ ಇಟ್ಟಿರುವ ನಟಿ, ಈ ಬಗ್ಗೆ ಕೇಳುವ ಪ್ರಶ್ನೆಗೆ ಮೌನದಿಂದಲೇ ಉತ್ತರ ನೀಡುತ್ತಾರೆ. ಆದ್ದರಿಂದ ನಟಿಯ ಮದುವೆಯ ಬಗ್ಗೆ ತಲೆ ಕೆಡಿಸಿಕೊಂಡಿರೋ ಫ್ಯಾನ್ಸ್​ಗೆ ಈ ಗರ್ಭಿಣಿ ವಿಡಿಯೋ ನೋಡಿ ಶಾಕ್​ ಆಗಿದೆ.

ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.