ವತೂ೯ರ್ ಸಂತೋಷ್ ಕೇ.ಸ್ ಗೆ ಹೊಸ ಟ್ವಿಸ್ಟ್, ಖ್ಯಾತ ನಟಿ ಸಮೀಕ್ಷಾ ಸ್ಫೋಟಕ ಹೇಳಿಕೆ

 | 
ಹಹ

 ಕಳೆದ ಕೆಲವು ದಿನಗಳಿಂದ ಬಿಗ್‌ಬಾಸ್‌ ಮನೆಯಲ್ಲೂ ಹಾಗೂ ಮನೆಯ ಹೊರಗೂ ವರ್ತೂರು ಸಂತೋಷ್ ಬಗ್ಗೆನೇ ಚರ್ಚೆ ಆಗುತ್ತಿದ್ದು, ಬಿಗ್‌ಬಾಸ್‌ ಮನೆಯಿಂದ ಹೊರಗೆ ಹೋಗ್ತೀನಿ ಅಂತ ವರ್ತೂರು ಸಂತೋಷ್ ಹಠ ಹಿಡಿದಿದ್ದರು. ಈತ ಕಣ್ಣೀರು ಹಾಕಿ ಪರಿ ಪರಿಯಾಗಿ ಬೇಡಿಕೊಂಡಿದ್ದರೂ, ವೀಕ್ಷಕರುಈ ಸ್ಪರ್ಧಿ ಮನೆಯೊಳಗೆ ಇರಬೇಕು ಅನ್ನೋ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಮದುವೆ ವಿಷಯ ಚರ್ಚೆಯಾಗಿದ್ದು, ಸದ್ಯ ಅದೀಗ ವಿವಾದಕ್ಕೆ ತಿರುಗಿದೆ. 

ವರ್ತೂರು ಸಂತೋಷ್ ಮದುವೆ ವಿಚಾರ ವಿವಾದಕ್ಕೆ ತಿರುಗಿದ್ದು, ಈತ ಎರಡು ವರ್ಷಗಳಿಂದ ಪತ್ನಿಯಿಂದ ದೂರವಿದ್ದಾರೆ. ಈ ವಿಷಯವನ್ನು ಸ್ವತ: ಸಂತೋಷ್ ಮಾವ ಸೋಮನಾಥ್ ಆರೋಪ ಮಾಡಿದ್ರು, ಇದರ ಮಧ್ಯೆಯೇ ಕನ್ನಡದ ಉದಯೋನ್ಮುಖ ನಟಿ ಸಮೀಕ್ಷಾ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಮುಂದಿನ ಜನ್ಮದಲ್ಲಿ ವರ್ತೂರು ಸಂತೋಷ್ ಅಣ್ಣನಾಗಿ ಪಡೆಯಬೇಕು ಅಂತ ಬರೆದುಕೊಂಡಿರುವುದು ಪೋಸ್ಟ್ ಒಂದು ವೈರಲ್ ಆಗಿದೆ. ಸಮೀಕ್ಷಾ ಅಫಿಶಿಯಲ್ ಅನ್ನೋ ಖಾತೆಯಿಂದ ಈ ಸ್ಟೋರಿ ಹರಿದಾಡುತ್ತಿದ್ದು, ವರ್ತೂರು ವಿವಾದ ಆಗುತ್ತಿದ್ದಂತೆ ಸಮೀಕ್ಷಾ ಸ್ಕ್ರೀನ್ ಶಾಟ್ ವೈರಲ್ ಆಗುತ್ತಿದೆ. 

ಸಮೀಕ್ಷಾ ಅಫಿಶಿಯಲ್ ಖಾತೆಯಲ್ಲಿ ನಾನು ಬಿಗ್‌ಬಾಸ್‌ನ ಫ್ಯಾನ್ ಅಲ್ಲ ಅಥವಾ ನನಗೆ ಈ ಶೋ ಅನ್ನು ಅರ್ಥ ಮಾಡಿಕೊಳ್ಳಲು ಸಮರ್ಥಳಲ್ಲ. ಆದರೆ.. ಈ ವ್ಯಕ್ತಿ ಸಂತೋಷ್ ಗೆಲ್ಲಬೇಕು. ದೇವರೇ ನನಗೆ ಇನ್ನೊಂದು ಮಾನವ ಜನ್ಮ ಅಂತ ಇದ್ದರೆ, ಇಂತಹ ಒಬ್ಬ ಅಣ್ಣನನ್ನು ಕರುಣಿಸು." ಎಂದು ಬರೆದುಕೊಂಡಿದ್ದಾರೆ. ಇದು ನಟಿ ಸಮೀಕ್ಷಾ ಅವರದ್ದೇ ಇನ್‌ಸ್ಟಾ ಸ್ಟೋರಿ ಎನ್ನಲಾಗಿದೆ. ಆದರೆ, ಅಧಿಕೃತವೋ ಅಲ್ಲವೋ ಅನ್ನೋದು ತಿಳಿದು ಬಂದಿಲ್ಲ. 

  ಇದರೊಂದಿಗೆ ಕಿರಿತೆರೆ ನಟಿ ಸಮೀಕ್ಷಾ ಶೋ ಗೆದ್ದು ಬನ್ನಿ ಅಂತಾನೂ ಹೇಳಿರುವುದರ ಜೊತೆಗೆ, ಈ ಶೋ ಅನ್ನು ಗೆದ್ದು ಸ್ಟಾರ್ ಆಗಿ ಹೊರಗೆ ಬರುವಿರಿ ಎಂದು ಭಾವಿಸಿದ್ದೇನೆ. ಕಲರ್ಸ್ ಕನ್ನಡ ಅವರಿಗೆ ನನ್ನ ವಿಶ್ ಅನ್ನು ತಿಳಿಸಿ. ಎಂದು ಸಮೀಕ್ಷಾ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಕನ್ನಡದ ಉದಯೋನ್ಮುಖ ನಟಿ ಈಗಾಗಲೇ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸುಬ್ಬಲಕ್ಷ್ಮೀ ಸಂಸಾರ , ಮೂರು ಗಂಟು ,ಮುದ್ದು ಮಣಿಗಳು, ಮೀನಾಕ್ಷಿ ಮದುವೆಯಂತಹ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹಾಗೇ ದಿ ಟೆರರಿಸ್ಟ್, 99, ನೀರೆ ಅನ್ನೋ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಟ್ನಲ್ಲಿ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಮೂಲದ ನಟಿಯ ಇನ್‌ಸ್ಟಾಗ್ರಾಂ ಸ್ಟೋರಿ ವೈರಲ್ ಆಗುತ್ತಿದೆ. ಅದಕ್ಕೆ ತರಹೇವಾರಿ ಕಮೆಂಟ್‌ಗಳು ಬರುತ್ತಿದೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.