ಬಿಗ್ಬಾಸ್ ಮನೆಗೆ ನ್ಯೂಸ್ ಆ್ಯಂಕರ್ ರಾಧಾ ಹೀರೆಗೌಡ ಎಂಟ್ರಿ, ಗಡಗಡ ನಡುಗಿದ ಸ್ಫಧಿ೯ಗಳು
Updated: Oct 25, 2024, 19:26 IST
|

ಬಿಗ್ ಬಾಸ್’ ಮನೆಗೆ ಆಗಾಗ ಅತಿಥಿಗಳು ಎಂಟ್ರಿ ಕೊಡ್ತಾರೆ. ಈಗ ಬಿಗ್ ಬಾಸ್ ಕನ್ನಡ ಸೀಸನ್ 11 ಶೋನಲ್ಲಿ ಈಗ ಹೊಸ ಅತಿಥಿ ಎಂಟ್ರಿ ಕೊಟ್ಟಿದ್ದಾರೆ. ಸುದ್ದಿ ವಾಹಿನಿಯಲ್ಲಿ ದೊಡ್ಡ ಸೌಂಡ್ ಮಾಡಿದ್ದ ರಾಧಾ ಹೀರೆಗೌಡರ್ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಎರಡು ರಾಜಕೀಯ ಪಕ್ಷಗಳು ಪ್ರಚಾರದಲ್ಲಿ ಮುಳುಗಿರುವಾಗಲೇ ರಾಧಾ ಹೀರೆಗೌಡರ್ ಅವರು ಎಂಟ್ರಿ ಕೊಟ್ಟಿದ್ದಾರೆ.
ರಾಧಾ ಹೀರೆಗೌಡರ್ ಅವರು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಬರ್ತಾರೆ ಅಂತ ಕೆಲ ಸೀಸನ್‌ಗಳಿಂದ ಮಾತು ಕೇಳಿ ಬಂದಿತ್ತು. ಆದರೆ ಅವರು ಇದುವರೆಗೂ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರಲಿಲ್ಲ. ಈಗ ಅವರು ಅತಿಥಿಯಾಗಿ ದೊಡ್ಮನೆಗೆ ಆಗಮಿಸಿದ್ದಾರೆ. ಚೈತ್ರಾ ಕುಂದಾಪುರ ಅವರು ನೀವು ಸ್ಪರ್ಧಿಯಾ? ಏನ್ ಕಥೆ. ನೀವು ಬಂದಿದ್ದೀರಾ ಅಂದ್ರೆ ನಮಗೆ ನೀರು ಕುಡಿಸ್ತೀರಾ. ಎಂದಿದ್ದಾರೆ. ಇನ್ನು ರಾಧಾ ಹೀರೆಗೌಡರ್ ಅವರು ಭಾಷಣ, ಜಯಕಾರ ಹೊಸತಲ್ಲ, ಐಶ್ವರ್ಯಾ ಅವರೇ ನಿಮ್ಮ ಪಕ್ಷದಲ್ಲಿ ಇರೋರೆಲ್ಲ ಪ್ರಾಮಾಣಿಕರು ಅಂತ ಎದೆ ಮುಟ್ಕೊಂಡು ಹೇಳಿ… ಎಂದಿದ್ದಾರೆ.
ಯಮುನಾ ಶ್ರೀನಿಧಿ ಅವರು ದೊಡ್ಮನೆಯಿಂದ ಮೊದಲ ವಾರ ಔಟ್ ಆಗಿದ್ದಾರೆ. ಇನ್ನೊಂದು ಕಡೆ ಜಗದೀಶ್ ಅವರು ಮೊದಲ ವಾರ ಎಲ್ಲ ಸ್ಪರ್ಧಿಗಳ ಜೊತೆ ಜಗಳ ಆಡಿದರು, ಎರಡನೇ ವಾರ ಲವ್ವರ್ ಬಾಯ್ ಆದರು. ಇನ್ನು ಮೂರನೇ ವಾರ ಅವರು ಮತ್ತೆ ಜಗಳ ಮಾಡಿದರು. ಮಹಿಳಾ ಸ್ಪರ್ಧಿಗಳ ಬಗ್ಗೆ ಅವರು ಅಸಭ್ಯ ಪದ ಬಳಸಿದ್ದಕ್ಕೆ ಮನೆಯಿಂದ ಹೊರಗಡೆ ಕಳಿಸಲಾಯ್ತು. ಇನ್ನೊಂದು ಕಡೆ ಜಗದೀಶ್ ಜೊತೆ ಜಗಳ ಆಡುವಾಗ ರಂಜಿತ್ ಅವರು ನೂಕಿದ್ದರು. ಹಾಗಾಗಿ ಅವರನ್ನು ಕೂಡ ಮನೆಯಿಂದ ಕಳಿಸಲಾಯ್ತು.
ರಾಧಾ ಬಂದಿರೋದಕ್ಕೆ ಶಾಕ್ ಆದವರು ಯಾರು ಗೊತ್ತಾ? ಹೌದು, ಇಡೀ ಮನೆ ಮಂದಿ ಶಾಕ್ ಮೇಲೆ ಶಾಕ್ ತೆಗೆದುಕೊಂಡಿದ್ದಾರೆ. ಇದರಿಂದ ಮನೆಯಲ್ಲಿ ಬೇರೆ ಹಲ್‌ಚಲ್ ಎದ್ದು ಬಿಟ್ಟಿದೆ.ರಾಧಾ ಹಿರೇಗೌಡರ್ ನಮ್ಮನ್ನ ತಿಂದು ಹಾಕ್ತಾರೆ. ಸ್ಪರ್ಧಿ ಆಗಿ ಬಂದ್ರೆ ಮುಗಿತು. ಹೀಗೆ ತಮ್ಮ ಅಭಿಪ್ರಾಯವನ್ನ ಚೈತ್ರಾ ಕುಂದಾಪುರ ಈಗಲೇ ಹೇಳಿದ್ದಾರೆ. ಅದರ ಬೆನ್ನಲ್ಲಿಯೇ ನೀವು ಸ್ಪರ್ಧಿನಾ ಇಲ್ಲ ಗೆಸ್ಟಾ ಅನ್ನೋ ಅರ್ಥದಲ್ಲಿ ಚೈತ್ರಾ ಕೇಳಿಯೂ ಬಿಟ್ಟಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.