ಸೌಜನ್ಯ ನ್ಯೂಸ್‌ ಬಗ್ಗೆ ಮೌನವಹಿಸಿದ ಕರ್ನಾಟಕದ ನ್ಯೂಸ್ ಚಾನಲ್ ಗಳು, ಹೆಣ್ಣುಮಕ್ಕಳಿಗೆ ಬೆಲೆನೇ ಕೊಡುತ್ತಿಲ್ಲ

 | 
Ju
ಧರ್ಮಸ್ಥಳದ ಬಳಿಯ ನೇತ್ರಾವತಿಯಲ್ಲಿ ಭೀಕರವಾದ ಅತ್ಯಾಚಾರಕ್ಕೊಳಗಾಗಿ ಅನುಮಾನಾಸ್ಪದವಾಗಿ ಪದವಾಗಿ ಸಾವನ್ನಪ್ಪಿದ ಸೌಜನ್ಯ ಪ್ರಕರಣ ಇಂದಿಗೂ ಬಗೆಹರಿದಿಲ್ಲ. ಈ ನಡುವೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಟ್ಯೂಬರ್ ಸಮೀರ್ ಎಂಡಿ ಮಾಡಿದ ವಿಡಿಯೊನಿಂದಾಗಿ ಇದೀಗ ಬೃಹತ್ ಮಟ್ಟದಲ್ಲಿ ವೈರಲ್ ಆಗಿದೆ. ರಾಜ್ಯಾದ್ಯಂತ ಈ ವಿಡಿಯೋ ಕುರಿತು ಪರ ವಿರೋಧಗಳ ಚರ್ಚೆಯಾಗುತ್ತಿದೆ. ಈ ಬೆನ್ನಲ್ಲೇ ವಿಶ್ವ ಹಿಂದೂ ಪರಿಷತ್ ಮುಖಂಡರು ಸಮೀರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೌಜನ್ಯಗೆ ನ್ಯಾಯ ಸಿಗಬೇಕು. ಆದರೆ ಧರ್ಮಸ್ಥಳ ಊರಿನ ಕುರಿತು ಒಂದೇ ಒಂದು ಕೆಟ್ಟ ಮಾತು ಬರಬಾರದು ನಮ್ಮಪ್ಪ ಮಂಜುನಾಥ ಸ್ವಾಮಿಯ ನಂಬಿಯೇ ನನಗೆ ಮಂಜುನಾಥ ಎಂಬ ಹೆಸರನ್ನು ಇಟ್ಟಿದ್ದಾರೆ. ನಾನು ಕೂಡ ಇಲ್ಲಿನ ಮಂಜುನಾಥನ ಭಕ್ತ. ವರುಷಕ್ಕೆ ಎರಡು ಬಾರಿ ಆದ್ರೂ ಇಲ್ಲಿಗೆ ಬರ್ತೇನೆ ದೇವರ ದರ್ಶನ ಪಡೆದು ಆನಂದ ಪಡ್ತೇನೆ . ನಿನ್ನೆ ಮೊನ್ನೆ ಬಂದಿರುವ ಇವರೆಲ್ಲ ಮಾಡಬಾರದು ಎಂದು ಮಂಜುನಾಥ ಎನ್ನುವವರು ಕಿಡಿಕಾರಿದ್ದಾರೆ.
ಈಗಾಗ್ಲೆ ಧೂತ: ಸಮೀರ್‌ ಎಂಡಿ ಎಂಬ ಯೂಟ್ಯೂಬ್‌ ಚಾನಲ್‌ನಲ್ಲಿ ಕಳೆದ ಆರು ದಿನಗಳ ಹಿಂದೆ ಸಮೀರ್‌ ಎಂಬಾತ ಕುಮಾರಿ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ವಿಡಿಯೋ ಮಾಡಿ ಬಿಟ್ಟಿದ್ದಾನೆ. 39 ನಿಮಿಷ 8 ಸೆಕೆಂಡುಗಳ ವಿಡಿಯೋ ಇದಾಗಿದೆ. ಈ ವಿಡಿಯೋ ಮೊದಲ ನಾಲ್ಕು ದಿನ ತಕ್ಕಮಟ್ಟಕ್ಕೆ ವೀಕ್ಷಣೆ ಪಡೆದುಕೊಂಡಿತ್ತು. ಆದರೆ ಕಳೆದ ಎರಡು ದಿನಗಳಲ್ಲಿ ಅಕ್ಷರಶಃ ವೈರಲ್‌ ಆಗಿದ್ದು, ಇದೀಗ ಬುಧವಾರ ರಾತ್ರಿ ವೇಳೆಗೆ ಬರೋಬ್ಬರಿ 1.23 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಇದಕ್ಕೆ 43 ಸಾವಿರಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿದ್ದು, 10 ಲಕ್ಷಕ್ಕೂ ಹೆಚ್ಚು ಜನರು ಲೈಕ್‌ ಬಟನ್‌ ಒತ್ತಿದ್ದಾರೆ.
ಈ ಚಾನಲ್‌ನಲ್ಲದೆ ಬೇರೆ ಬೇರೆ ಚಾನಲ್‌ಗಳಲ್ಲಿಯೂ ಈ ವಿಡಿಯೋ ಮರು ಪೋಸ್ಟ್‌ ಆಗಿದ್ದು ಅಲ್ಲೂ ಲಕ್ಷಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ. ಇದಲ್ಲದೆ ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌, ಎಕ್ಸ್‌ ಮೊದಲಾದೆಡೆ ಈ ವಿಡಿಯೋದ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ. ಹಲವು ಯೂಟ್ಯೂಬರ್‌ಗಳು, ರೀಲ್ಸ್‌ ಸ್ಟಾರ್‌ಗಳು, ಕಿರುತೆರೆ ನಟರೆಲ್ಲ ಈ ಬಗ್ಗೆ ಮಾತನಾಡಲು ಆರಂಭಿಸಿದ್ದು, 14 ವರ್ಷಗಳ ಹಿಂದಿನ ಪ್ರಕರಣ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದೆ. ಆದರೆ ಮಾಧ್ಯಮಗಳು ಸುಮ್ಮನೆ ಕುಳಿತಿದೆ ಎಂದು ಮಂಜುನಾಥ್ ಕಿಡಿ ಕಾರಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.