Official ಆಗಿ ಮದುವೆ ಆದ ನಿಖಿಲ್ ಹಾಗೂ ಮಧು; ಹನಿಮೂನ್ ಮಾತ್ರ ಮಾಲ್ಡೀವ್ಸ್‌ನಲ್ಲೇ ಎಂದ ವಧು
Oct 28, 2024, 13:37 IST
|
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮದುವೆಯ ಕಾರಣದಿಂದಾಗಿಯೇ ಸುದ್ದಿಯಲ್ಲಿರುವವರು ಮಧು ಗೌಡ ಹಾಗೂ ನಿಖಿಲ್. ಮಾಡೋದು ರೀಲ್ಸ್ ಆದರೂ ಸೆಲೆಬ್ರಿಟಿಗಳ ತರ ತಮ್ಮ ಮದುವೆಯನ್ನು ಅದ್ದೂರಿಯಾಗಿ ಮಾಡಿಕೊಂಡಿದ್ದಾರೆ . ಕಳೆದ ಮಾರ್ಚ್‌ನಲ್ಲಿ ದೊಡ್ಡ ಪ್ರಮಾಣದಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಈಗ ವಿವಾಹವನ್ನೂ ಬಹಳ ಜೋರಾಗಿ ಮಾಡಿಕೊಂಡಿದೆ .
ನಿಶ್ಚಿತಾರ್ಥದ ಬಳಿಕ ಇವರು ಮಾಡಿಕೊಂಡು ಹೊಸ ನಮೂನೆಯ ಫೋಟೋಶೂಟ್‌ಗಳು, ವಿಲಾಗ್‌ಗಳನ್ನು ಕಂಡು ಸೋಶಿಯಲ್ ಮೀಡಿಯಾ ಮಂದಿ ಸಖತ್ ಟ್ರೋಲ್‌ಗೆ ಇಳಿದಿದ್ದಾರೆ. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಜೋಡಿ ಈಗ ಹಸೆಮಣೆ ಏರಿದ್ದಾರೆ.ಮೆಹೆಂದಿ ಶಾಸ್ತ್ರ, ಅರಿಶಿನ ಶಾಸ್ತ್ರ, ಚಪ್ಪರ ಪೂಜೆ ಎಲ್ಲವೂ ಮುಗಿಸಿ ಅಕ್ಟೋಬರ್ 27 ರವಿವಾರದಂದು ಇವರ ಮದುವೆ ಸಮಾರಂಭ ನಡೆದಿದೆ. ಅಂಬಾನಿ ಮನೆಯಂತೆ ಹಾಡು ಕುಣಿತ ದ ಮದ್ಯೆ ಧಾಮ್ ಧೂಮ್ ಎಂದು ಮದುವೆ ಆಗಿದ್ದಾರೆ.
ಆದರೆ, ಇನ್ಸ್‌ಟಾಗ್ರಾಮ್ ಯೂಸರ್‌ಗಳಿಗೆ ಮಾತ್ರ ಒಮ್ಮೆ ಇವರ ಮದುವೆ ಮುಗಿದು ಹೋಗಲಿ ಎನ್ನುವಷ್ಟು ಕಾಟ ಕೊಟ್ಟಿದ್ದಾರಂತೆ. ಅದಕ್ಕೆ ಕಾರಣ ಇವರ ಅಪ್‌ಡೇಟ್‌ಗಳು. ಮದುವೆಯ ಕುರಿತಾಗಿ ಇವರು ಯಾವುದೇ ಪೋಸ್ಟ್ ಹಂಚಿಕೊಂಡ್ರೂ ಅಂಬಾನಿ ಮನೆಯವ್ರು ಅವರ ಮನೆ ಮದ್ವೆಗೆ ಇಷ್ಟು ಹಿಂಸೆ ಕೊಟ್ಟಿರ್ಲಿಲ್ಲ ಎಂದು ಟ್ರೋಲ್ ಮಾಡಿದ್ದಾರೆ.
ಈ ಜೋಡಿಯ ಹಲ್ದಿ ಹಾಗೂ ಸಂಗೀತ್ ಕಾರ್ಯಕ್ರಮ ಕೂಡ ಅದ್ದೂರಿಯಾಗಿ ನೆರವೇರಿದೆ. ಕುಟುಂಬದ ಕೆಲವೇ ಆಪ್ತರು ಹಾಗೂ ತಮಗೆ ಗೊತ್ತಿರುವ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಮಾತ್ರವೇ ಇದರಲ್ಲಿ ಕಂಡಿದ್ದಾರೆ. ಇನ್ನು ಹಲ್ದಿ ಕಾರ್ಯಕ್ರಮ ಸಖತ್ ಅದ್ದೂರಿಯಾಗಿ ನಡೆದಿದ್ದರೆ, ಸಂಗೀತ್ ಕಾರ್ಯಕ್ರಮದಲ್ಲಿ ಮಧು ಗೌಡ ಮೇಕಪ್ ಸಖತ್ ಟ್ರೋಲ್ ಆಗುತ್ತಿದೆ. ಮದುವೆಯಲ್ಲಂತೂ ಕೆಳಲೇ ಬಿಡಿ . ಮೇಕಪ್ ಮಾಡೋಕೆ 5 ಜನ ಬಂದಿದ್ದರಂತೆ. ಹೂಗಳ ಅಲಂಕಾರ, ಜಗಮಗಿಸುವ ವಿದ್ಯುತ್ ದೀಪಗಳ ನಡುವೆ ದಂಪತಿಗಳು ಸಖತ್ ಆಗಿ ಮಿಂಚಿದ್ದಾರೆ.
ಸೋಶಿಯಲ್ ಮೀಡಿಯಾದಿಂದಲೇ ಜನಪ್ರಿಯತೆ ಪಡೆದ ಇವರ ಜೀವನದ ಬಗ್ಗೆ ಸಹಜವಾದ ಕುತೂಹಲ ಇರತ್ತದೆ. ಅದನ್ನು ಈ ಜೋಡಿ ವಿಲಾಗ್ ಮೂಲಕ ಹಂಚಿಕೊಳ್ಳುತ್ತಿತ್ತು. ಇತ್ತೀಚೆಗೆ ಕೋಟಿ ಕೋಟಿ ಹಣ ಕೊಟ್ಟು ಹೊಸ ಕಾರ್ ಖರೀದಿ ಮಾಡಿದ್ದ ಜೋಡಿ, ಬೆಂಗಳೂರಿನ ಆರ್‌ಆರ್ ನಗರದಲ್ಲಿ ಹೊಸ ಸೈಟ್‌ಅನ್ನೂ ಖರೀದಿ ಮಾಡಿದೆ. ಬರೀ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿಕೊಂಡು ಇಷ್ಟೆಲ್ಲಾ ಹಣ ಸಂಪಾದನೆ ಮಾಡಬಹುದಾ ಎನ್ನುವ ಪ್ರಶ್ನೆಗಳು ಆಗ ಎದ್ದಿದ್ದವು. ಇದಕ್ಕೆ ಮಧು ಗೌಡ ಬೆಂಗಳೂರಲ್ಲಿ ತಮ್ಮದು ಸ್ವಂತ 14 ಮನೆಯಿದೆ ಬಾಡಿಗೆ ನೀಡಿದ್ದೇವೆ.ಅದರ ಹಣ ಸಹ ಬರ್ತದೆ ಎಂದು ಉತ್ತರವನ್ನೂ ನೀಡಿದ್ದರು.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.